ಪ್ಯಾಲೆಸ್ತೀನ್ ನರಮೇಧ | 4,600 ಮಕ್ಕಳು ಸೇರಿದಂತೆ 11,180 ಜನರನ್ನು ಹತ್ಯೆಗೈದ ಇಸ್ರೇಲ್

ಗಾಝಾ: ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್‌ ಮತ್ತು ಇಸ್ರೇಲ್ ನಡುವೆ ಸಂಘರ್ಷ ಪ್ರಾರಂಭವಾಗಿನಿಂದ ಗಾಜಾ ಪಟ್ಟಿಯ ಮೇಲಿನ ಇಸ್ರೇಲಿ ದಾಳಿಗಳಿಂದ ಪ್ಯಾಲೆಸ್ತೀನಿಯರ ಸಾವಿನ ಸಂಖ್ಯೆ 11,180 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಒಟ್ಟು ಸಾವುಗಳಲ್ಲಿ 4,609 ಮಕ್ಕಳು ಮತ್ತು 3,100 ಮಹಿಳೆಯರು ಸೇರಿದ್ದಾರೆ ಎಂದು ವರದಿಯಾಗಿದ್ದು, 28,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಶಿಫಾ ಮೆಡಿಕಲ್ ಕಾಂಪ್ಲೆಕ್ಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗಾಜಾ ಸರ್ಕಾರದ ಮಾಧ್ಯಮ ಕಚೇರಿಯ ನಿರ್ದೇಶಕ ಇಸ್ಮಾಯಿಲ್ ಅಲ್-ತವಾಬ್ತೆಹ್ ಹೇಳಿದ್ದಾರೆ.

ವಿದ್ಯುತ್ ಜನರೇಟರ್‌ಗಳನ್ನು ನಿರ್ವಹಿಸಲು ಅಗತ್ಯವಾದ ಇಂಧನದ ಕೊರತೆಯಿಂದಾಗಿ ಗಾಜಾದ 22 ಆಸ್ಪತ್ರೆಗಳು ಮತ್ತು 49 ಆರೋಗ್ಯ ಕೇಂದ್ರಗಳು ಕಾರ್ಯಾಚರಣೆಯನ್ನು ನಿಲ್ಲಿಸಿವೆ ಎಂದು ಅಲ್-ತವಾಬ್ತೆಹ್ ಹೇಳಿದ್ದಾರೆ. ಆಸ್ಪತ್ರೆಯ ತೀವ್ರ ನಿಗಾ ಘಟಕ, ಶಸ್ತ್ರಚಿಕಿತ್ಸಾ ಕಟ್ಟಡ ಮತ್ತು ಶಿಫಾ ವೈದ್ಯಕೀಯ ಸಂಕೀರ್ಣದ ಹೆರಿಗೆ ವಾರ್ಡ್ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದೆ ಎಂದು ಅವರು ಹೇಳಿದ್ದಾರೆ. ಗಾಜಾ ಹತ್ಯಾಕಾಂಡವನ್ನು ನಿಲ್ಲಿಸುವಂತೆ ಮತ್ತು ಪ್ಯಾಲೆಸ್ತೀನ್ ಜನರಿಗೆ ಇಂಧನ ಸೇರಿದಂತೆ ಎಲ್ಲಾ ಮಾನವೀಯ ಸರಬರಾಜುಗಳನ್ನು ಮಾಡಲು ತುರ್ತಾಗಿ ಜಗತ್ತು ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ತೆಲಂಗಾಣ | ಕೆಸಿಆರ್, ಓವೈಸಿ ಪ್ರಧಾನಿಯ ಮೋದಿಯ ಕೈಗೊಂಬೆ – ಹೋರ್ಡಿಂಗ್‌ ಸ್ಥಾಪಿಸಿದ ಕಾಂಗ್ರೆಸ್

ಪುನರಾವರ್ತಿತ ಇಸ್ರೇಲಿ ದಾಳಿಗಳು ಮತ್ತು ಸುತ್ತಮುತ್ತಲಿನ ಭಾರೀ ಸಂಘರ್ಷದ ಕಾರಣಕ್ಕೆ ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾ ಆಸ್ಪತ್ರೆಯ ಎಲ್ಲಾ ನಮ್ಮ ಸಂಪರ್ಕದ ಜನರನ್ನು ಕಳೆದುಕೊಂಡಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

WHO ಭಾನುವಾರ ರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ, “ಆಸ್ಪತ್ರೆಯು ಪದೇ ಪದೇ ದಾಳಿಗಳನ್ನು ಎದುರಿಸುತ್ತಿರುವ ಭಯಾನಕ ವರದಿಗಳು ಬರುತ್ತಲೆ ಇವೆ. ಆಸ್ಪತ್ರೆಯ ಮೈದಾನದಲ್ಲಿ ಆಶ್ರಯ ಪಡೆದಿರುವ ಮತ್ತು ಪ್ರದೇಶದಿಂದ ಪಲಾಯನ ಮಾಡುತ್ತಿರುವ ಹತ್ತಾರು ಸಾವಿರ ಜನರೊಂದಿಗೆ ನಮ್ಮ ಸಂಪರ್ಕದ ಜನರು ಸೇರಿಕೊಂಡಿದ್ದಾರೆ ಎಂದು ನಾವು ಭಾವಿಸುತ್ತೇವೆ. ಆಸ್ಪತ್ರೆಯಿಂದ ಓಡಿಹೋದ ಕೆಲವು ಜನರ ಮೇಲೆ ಗುಂಡು ಹಾರಿಸಲಾಗಿದೆ. ಈ ವೇಳೆ ಜನರು ಗಾಯಗೊಂಡಿದ್ದಾರೆ ಮತ್ತು ಕೊಲ್ಲಲ್ಪಟ್ಟಿದ್ದಾರೆ” ಎಂದು ತಿಳಿಸಿದೆ.

“600-650 ಒಳರೋಗಿಗಳು, 200-500 ಆರೋಗ್ಯ ಕಾರ್ಯಕರ್ತರು ಮತ್ತು ಸರಿಸುಮಾರು 1,500ದಷ್ಟು ನಿರಾಶ್ರಿತರು ನವೆಂಬರ್ 13 ರ ಸೋಮವಾರ ಬೆಳಿಗ್ಗೆ ಆಸ್ಪತ್ರೆಯೊಳಗೆ ಇನ್ನೂ ಇದ್ದಾರೆ. ವಿದ್ಯುತ್, ನೀರು ಮತ್ತು ಆಹಾರದ ಕೊರತೆಯಿಂದ ಈ ಜನರ ಜೀವ ಅಪಾಯದಲ್ಲಿದೆ. ಆಸ್ಪತ್ರೆಯಿಂದ ಹೊರಬರಲು ಯಾವುದೇ ಸುರಕ್ಷಿತ ಮಾರ್ಗವಿಲ್ಲ” ಎಂದು ಪ್ಯಾಲೇಸ್ತೀನ್ ಆರೋಗ್ಯ ಸಚಿವಾಲಯ ಹೇಳಿದೆ. ಪ್ಯಾಲೆಸ್ತೀನ್

ಇದನ್ನೂ ಓದಿ: ದೀಪಾವಳಿ ಪಟಾಕಿ ಅವಘಡ| ಬೆಂಗಳೂರಿನಾದ್ಯಂತ 20 ಮಂದಿಗೆ ಸುಟ್ಟಗಾಯ

ಕಳೆದ 48 ಗಂಟೆಗಳಲ್ಲಿ ಆಸ್ಪತ್ರೆಯು ಅನೇಕ ದಾಳಿಗಳಿಗೆ ಒಳಗಾಗಿದ್ದು, ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು WHO ಹೇಳಿಕೆ ತಿಳಿಸಿದೆ.

“WHO ಗಾಜಾದ ಅಲ್-ಶಿಫಾ ಆಸ್ಪತ್ರೆಯಲ್ಲಿ ಆರೋಗ್ಯ ವೃತ್ತಿಪರರೊಂದಿಗೆ ಸಂಪರ್ಕ ಪಡೆಯಲು ಯಶಸ್ವಿಯಾಗಿದೆ. ಅಲ್ಲಿನ ಪರಿಸ್ಥಿತಿ ಭಯಾನಕ ಮತ್ತು ಅಪಾಯಕಾರಿಯಾಗಿದೆ. ಇಂದಿಗೆ ಮೂರು ದಿನಗಳಿಂದ ವಿದ್ಯುತ್ ಇಲ್ಲದೆ, ನೀರಿಲ್ಲದೆ ಮತ್ತು ಅತ್ಯಂತ ಕಳಪೆ ಇಂಟರ್ನೆಟ್‌ನೊಂದಿಗೆ, ಅಗತ್ಯ ಆರೈಕೆಯನ್ನು ಒದಗಿಸುವ ನಮ್ಮ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಪ್ರದೇಶದಲ್ಲಿ ನಿರಂತರ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಿವೆ” ಎಂದು WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಪ್ಯಾಲೆಸ್ತೀನ್

“ದುರಂತವೆಂದರೆ, ರೋಗಿಗಳ ಸಾವಿನ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆಸ್ಪತ್ರೆಯು ಇನ್ನು ಮುಂದೆ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸುರಕ್ಷಿತ ತಾಣಗಳಾಗಬೇಕಾದ ಆಸ್ಪತ್ರೆಗಳು ಸಾವು, ವಿನಾಶ ಮತ್ತು ಹತಾಶೆಯ ದೃಶ್ಯಗಳಾಗಿ ರೂಪಾಂತರಗೊಳ್ಳುತ್ತಿರುವಾಗ ಜಗತ್ತು ಮೌನವಾಗಿರಲು ಸಾಧ್ಯವಿಲ್ಲ. ಈಗಲೆ ಕದನ ವಿರಾಮ ಬೇಕಿದೆ” ಟೆಡ್ರೊಸ್ ಅವರು ಹೇಳಿದ್ದಾರೆ.

ಇದನ್ನೂ ಓದಿ: DK Shivakumar | ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ; ಡಿಕೆ.ಶಿವಕುಮಾರ್ ತಿರುಗೇಟು

ಆಸ್ಪತ್ರೆಯ ಪರಿಸ್ಥಿತಿಯ ಬಗ್ಗೆ ಅಪ್‌-ಶಿಫಾ ಆಸ್ಪತ್ರೆ ಭಾನುವಾರ ಘೋಷಿಸಿದ, ಗಾಝಾ ನಗರದ ಎರಡನೇ ಅತೀ ದೊಡ್ಡ ಆಸ್ಪತ್ರೆಯಾದ ಅಲ್-ಕುದ್ಸ್‌ ಆಸ್ಪತ್ರೆ ಈಗ ಸೇವೆಯನ್ನು ನಿಲ್ಲಿಸಿದೆ ಎಂದು ಪ್ಯಾಲೆಸ್ತೀನ್ ರೆಡ್ ಕ್ರೆಸೆಂಟ್ ಸೊಸೈಟಿ (ಪಿಆರ್‌ಸಿಎಸ್) ಹೇಳಿದೆ. “ಲಭ್ಯವಿರುವ ಇಂಧನವು ಖಾಲಿಯಾಗಿರುವುದರಿಂದ ಮತ್ತು ವಿದ್ಯುತ್ ನಿಲುಗಡೆಯಿಂದಾಗಿ ಆಸ್ಪತ್ರೆಯು ಸೇವೆಗಳನ್ನು ನಿಲ್ಲಿಸಿದೆ. ಆಸ್ಪತ್ರೆಯು ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ” ಎಂದು PRCS ಹೇಳಿದೆ.

“ಭೀಕರ ಮಾನವೀಯ ಪರಿಸ್ಥಿತಿಗಳು ಮತ್ತು ವೈದ್ಯಕೀಯ ಸರಬರಾಜು, ಆಹಾರ ಮತ್ತು ನೀರಿನ ಕೊರತೆಯ ಹೊರತಾಗಿಯೂ, ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಮತ್ತು ಗಾಯಾಳುಗಳಿಗೆ ಆರೈಕೆಯನ್ನು ಒದಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಈ ನಿರ್ಣಾಯಕ ಹಂತವನ್ನು ತಲುಪಿದ್ದಕ್ಕಾಗಿ ಆಳವಾಗಿ ವಿಷಾದಿಸುತ್ತೇನೆ. ತುರ್ತು ಅಂತರಾಷ್ಟ್ರೀಯ ಸಹಾಯಕ್ಕಾಗಿ ಪುನರಾವರ್ತಿತ ಮನವಿಗಳು ವಿಫಲವಾಗಿವೆ” ಎಂದು PRCS ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ಯಾಲೆಸ್ತೀನ್

ವಿಡಿಯೊ ನೋಡಿ: ದಾಳಿಗೊಳಗಾಗಿರುವ ಪ್ಯಾಲೆಸ್ಟೈನ್ ಕುರಿತು ಇರಾನ್ ಕಲಾವಿದನ ಕೃತಿ

 

Donate Janashakthi Media

Leave a Reply

Your email address will not be published. Required fields are marked *