ಪಕ್ಷಾಂತರ ಮಾಡಿದ 17 ಜನ ವಲಸಿಗರಲ್ಲಿ 10 ಮಂದಿ ಸಚಿವರು

ಬೆಂಗಳೂರು: 2018ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬದಲಾದ ರಾಜಕೀಯ ಸನ್ನವೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವ ಕಾರಣದಿಂದ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಸಮ್ಮಿಶ್ರ ಸರಕಾರ ಅಧಿಕಾರ ವಹಿಸಿಕೊಂಡಿರು. ಜೆಡಿಎಸ್‌ ವರಿಷ್ಠ ಹೆಚ್‌ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು.

ಒಂದು ವರ್ಷದ ಅಧಿಕಾರದ ಹಗ್ಗಜಗ್ಗಾಟದಿಂದ ಕಾಂಗ್ರೆಸ್‌ನ 13 ಹಾಗೂ ಜೆಡಿಎಸ್‌ನ 3 ಶಾಸಕರು ಪಕ್ಷೇತರ ಶಾಸಕ ಒಬ್ಬರು ಒಳಗೊಂಡು ಒಟ್ಟು 17 ಮಂದಿ ಸರಕಾರ ಪತನಕ್ಕೆ ಕಾರಣರಾದರು.

ಇದನ್ನು ಓದಿ: ಬೊಮ್ಮಾಯಿ ಸಂಪುಟಕ್ಕೆ ನೂತನ ಸಚಿವರು: ಬೆಂಗಳೂರಿನ ಎಂಟು ಮಂದಿಗೆ ಸ್ಥಾನ

ಬಿ ಎಸ್‌ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ 17 ಮಂದಿಯಲ್ಲಿ ಈಗ 10 ಮಂದಿ ಸಚಿವರಾಗಿ  ಸ್ಥಾನ ಪಡೆದುಕೊಂಡಿದ್ದಾರೆ.

ಸಚಿವ ಸ್ಥಾನ ವಂಚಿತರಾದವರು: ಎಚ್.ವಿಶ್ವನಾಥ್(ಎಂಎಲ್‌ಸಿ), ರೋಷನ್‍ಬೇಗ್(ಮಾಜಿ ಶಾಸಕ, ಶಿವಾಜಿನಗರ), ಮಹೇಶ್ ಕುಮಟ್ಟಳ್ಳಿ(ಅಥಣಿ), ಆರ್.ಶಂಕರ್(ರಾಣೆಬೆನ್ನೂರು), ಶ್ರೀಮಂತಪಾಟೀಲ್(ಕಾಗವಾಡ), ರಮೇಶ್ ಜಾರಕಿಹೊಳಿ(ಗೋಕಾಕ್), ಪ್ರತಾಪ್ ಗೌಡ ಪಾಟೀಲ್(ಮಾಜಿ ಶಾಸಕ, ಮಸ್ಕಿ)

Donate Janashakthi Media

Leave a Reply

Your email address will not be published. Required fields are marked *