ಯುನೈಟೆಡ್ ಕಿಂಗ್‌ಡಂ : ದಂಪತಿಗಳು ತಮ್ಮ ನವಜಾತ ಮಗುವಿಗೆ ಪ್ರಸಿದ್ಧ ಭಾರತೀಯ ತಿಂಡಿ ‘ಪಕೋರಾ'(ಪಕೋಡ) ಎಂದು ಹೆಸರಿಟ್ಟ ಘಟನೆ ಯುನೈಟೆಡ್ ಕಿಂಗ್‌ಡಂ ನಲ್ಲಿ ನಡೆದಿದೆ. ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ಭಾಗಗಳಲ್ಲಿ ಪ್ರಸಿದ್ದಿ ಪಡೆದಿರುವ ಪಕೋರದ ಹೆಸರನ್ನು ತಮ್ಮ ಮಗುವುಗೆ ಇಟ್ಟು ಯೂಕೆ ನ ದಂಪತಿಗಳು ಸಂಭ್ರಮಿಸಿದ್ದಾರೆ.
ಐರ್ಲೆಂಡ್‌ನ ಜನಪ್ರಿಯ ರೆಸ್ಟೋರೆಂಟ್ ʼದಿ ಕ್ಯಾಪ್ಟನ್ಸ್ ಟೇಬಲ್ʼ ಈ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಯಾವಗಲೂ ತಿಂಡಿಗಳನ್ನು ಸವಿಯಲು ಬರುತ್ತಿದ್ದ ದಂಪತಿಗಳಿಗೆ ಅಭಿನಂದಿಸಲು ರೆಸ್ಟೋರೆಂಟ್ ಮಾಲಿಕ ಮಗುವಿನ ಜೊತೆಗೆ ಪಕೋರದ ಬಿಲ್ ನ ಫೋಟೋವನ್ನು ಶೇರ್ ಮಾಡಿದ್ದಾನೆ.
ಪಕೋರಾ ಹೆಚ್ಚಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಚಹಾ ಅಥವಾ ಕಾಫಿಯೊಂದಿಗೆ ಸವಿಯುವ ತಿಂಡಿಯಾಗಿದೆ. ಭಾರತದ ಬಹುತೇಕ ಎಲ್ಲಾ ನಗರ ಮತ್ತು ಹಳ್ಳಿಗಳಲ್ಲಿ ಈ ತಿಂಡಿಯನ್ನು ಬೀದಿಗಳಲ್ಲಿ ಮಾರಾಟ ಮಾಡುವುದನ್ನು ನಾವು ಕಾಣಬಹುದು., ಈರುಳ್ಳಿ, ಆಲೂಗಡ್ಡೆ, ಹೂಕೋಸು, ಬದನೆ, ಮೆಣಸಿನಕಾಯಿ ಮತ್ತು ಕುಂಬಳಕಾಯಿ ಮುಂತಾದ ತರಕಾರಿಗಳಿಂದ ತಯಾರಾಗುವ ವಿವಿಧ ರೀತಿಯ ಪಕೋಡಗಳನ್ನು ನಾವು ನೋಡಿರುತ್ತೇವೆ ಹಾಗೂ ಸವಿದಿರುತ್ತೇವೆ. ಚಳಿಯಲ್ಲಿ ಪಕೋಡ ತಿನ್ನುವದು ಎಲ್ಲಾ ವಯ್ಯಸ್ಸಿಗರಿಗೂ ಪ್ರಿಯವಾದದ್ದೆ.
ಆದರೆ ಈ ಹೆಸರನ್ನು ಮಾಗುವಿಗೆ ಇಡುವ ಸಾಹಸ ಮಾಡಿರುವ ಯುಕೆ ದಂಪತಿಗಳು ನೆಟ್ಟಿಗರ ಗಮನ ಸೆಳೆದಿದ್ದು ಈ ವಿಷಯ ಎಲ್ಲಾ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ಅನೇಕ ರೀತಿಯ ಫನ್ನಿ ಕಮೆಂಟ್ ಗಳನ್ನು, ಅಭಿನಂದನೆಗಳನ್ನೂ ಸಲ್ಲಿಸಿ ನೆಟ್ಜನ್‌ಗಳು ಸಂಭ್ರಮಿಸಿದ್ದಾರೆ.