ಮಂಗಳೂರು: ನಗರದ ಹೊರವಲಯದಲ್ಲಿರುವ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ, ಮಂಗಳವಾರ ಹೆಜಮಾಡಿ ಟೋಲ್ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ಟೋಲ್ ಗೇಟ್ ವಿರೋಧ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿ, ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಬೇಕು ಎಂದು ಘೋಷಣೆಗಳು ಮೊಳಗುತ್ತಿವೆ.
ಹೆಜಮಾಡಿ ಟೋಲ್‌ಗೇಟ್ ನಿಂದ 9 ಕಿಮೀ ದೂರದಲ್ಲಿರುವ ಸುರತ್ಕಲ್ ಟೋಲ್ ಗೇಟ್‌ವರೆಗೆ ಈ ಪಾದಯಾತ್ರೆ ನಡೆಯಲಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಟ್ಯಾಕ್ಸಿ, ಖಾಸಗಿ ಬಸ್ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ, ಮೆರವಣಿಗೆಯಲ್ಲಿ ಭಾಗಿಯಾಗಿವೆ. ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ :ವಿನಾಯಕ ಬಾಳಿಗಾ ಹತ್ಯೆ ಪ್ರಕರಣ ಎಸ್ಐಟಿ ತನಿಖೆಯಾಗಲಿ: ಬೃಂದಾ ಕಾರಟ್
ಕೇವಲ 9 ಕಿಮೀ ಅಂತರದಲ್ಲಿ ಸುರತ್ಕಲ್ ಮತ್ತು ಹೆಜಮಾಡಿ ಟೋಲ್‌ಗೇಟ್ ಗಳು ಇವೆ. ತಾತ್ಕಾಲಿಕ ನೆಲೆಯಲ್ಲಿ ಆರಂಭವಾಗಿದ್ದ ಸುರತ್ಕಲ್ ಟೋಲ್ ಗೇಟ್ ಇನ್ನೂ ಮುಂದುವರಿದಿದೆ. ಕೂಡಲೇ ಸುರತ್ಕಲ್ ಟೋಲ್‌ಗೇಟ್ ತೆರವು ಮಾಡಬೇಕು ಎಂಬುದು ಪ್ರತಿಭಟನೆಕಾರರ ಬೇಡಿಕೆಯಾಗಿದೆ. ಪ್ರತಿಭಟನೆಯಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಲ್ಪಿ ಡಿ , ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ರಾಘವೇಂದ್ರ ರಾವ್ ಸುರತ್ಕಲ್, ಮುಲ್ಕಿ ತಾಲೂಕು ಅಭಿವೃದ್ದಿ ಸಮಿತಿಯ ಗೋಪಿನಾಥ ಪಡಂಗ, ವಸಂತ ಬೆರ್ನಾಡ್, ದರ್ಮಾನಂದ ಶೆಟ್ಟಿಗಾರ್, ದಲಿತ ಸಂಘರ್ಷ ಸಮಿತಿಯ ಶೇಖರ ಹೆಜಮಾಡಿ, ರಘು ಎಕ್ಕಾರು, ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಸುಧಾಕರ ಕರ್ಕೇರ, ಹಾಜಿ ಶೇಖಬ್ಬ ಕೋಟೆ, ಸುಧೀರ್ ಕರ್ಕೇರ, ಸುಭಾಷ್ ಜಿ ಸಾಲ್ಯಾನ್, ಸನಾ ಇಬ್ರಾಹಿಂ, ಮಾಜಿ ಕಾರ್ಪೊರೇಟರ್ ಗಳಾದ ದಯಾನಂದ ಶೆಟ್ಟಿ, ಅಯಾಝ್ ಕೃಷ್ಣಾಪುರ, ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಎಸೋಷಿಯೇಶನ್ ನ ದಿನೇಶ್ ಕುಂಪಲ, ಹೋರಾಟ ಸಮಿತಿಯ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್ ಟಿ ಎನ್ ರಮೇಶ್, ರಾಜೇಶ್ ಕುಳಾಯಿ, ಶ್ರೀಕಾಂತ್ ಸಾಲ್ಯಾನ್, ಅಶ್ರಫ್ ಸಫಾ ಕೃಷ್ಣಾಪುರ, ಅಜ್ಮಲ್ ಕಾನ, ಉಮ್ಮರ್ ಪಾರೂಕ್, ರಶೀದ್ ಮುಕ್ಕ ಮತ್ತಿತರರು ಉಪಸ್ಥಿತರಿದ್ದರು.