ಪದವಿ ತರಗತಿಗಳನ್ನು ಆರಂಭಿಸಲು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಹಾವೇರಿ; ಜ, 16 : ರಾಜ್ಯಾದ್ಯಂತ ಅಂತಿಮ ವರ್ಷದ ಪದವಿ ತರಗತಿಗಳು ಪ್ರಾರಂಭವಾಗಿ 15 ದಿನಗಳು ಕಳೆದಿದೆ. ಹಾವೇರಿಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಾತ್ರ ಯಾವುದೇ ತರಗತಿಗಳನ್ನು ಪ್ರಾರಂಭವಾಗಿಲ್ಲ. ಇದನ್ನು ವಿರೋಧಿಸಿ  ಎಸ್ ಎಫ್ ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಹಾವೇರಿಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು 15 ದಿನಗಳು ಕಳೆದರು ಕೂಡ ಇನ್ನೂ ತರಗತಿಗಳನ್ನು ಪ್ರಾರಂಭ ಮಾಡದೆ ಹಾಗೂ ಕರೋನ ಸಂದರ್ಭದಲ್ಲೂ ಕೂಡ ಯಾವುದೇ ಆನ್ಲೈನ್ ತರಗತಿಗಳನ್ನು ನಡೆಸದೆ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ದೂರ ಉಳಿವಂತೆ ಮಾಡುವ ಮೂಲಕ ಕಾಲೇಜಿನ ಪ್ರಾಂಶುಪಾಲರು ಮಕ್ಕಳ ಶಿಕ್ಷಣದ ಹಕ್ಕನ್ನು ಕಸೆದುಕೊಂಡಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಆರೋಪಿಸಿದರು.

ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ಪದವಿ ವಿದ್ಯಾರ್ಥಿನಿಯರ ತರಗತಿಗಳನ್ನು  ಪ್ರಾರಂಭ ಮಾಡಬೇಕೆಂದು ಆಗ್ರಹಿಸಿ ವಿವಿಧ ಬೇಡಿಕೆಗಳನ್ನು ಹೀಡೇರಿಸಲು ಒತ್ತಾಯಿಸಿ ಇಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿ ಸ್ಥಳೀಯ ಶಾಸಕರಾದ ನೆಹರು ಓಲೇಕಾರ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು. ನಾಳೆಯಿಂದ ತರಗತಿಗಳನ್ನು ಪ್ರಾರಂಭಿಸುವಂತೆ ಅತಿಥಿ ಉಪನ್ಯಾಸಕರೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಾವ್ಯ ಹಡಗಲಿ, ಸೌಂದರ್ಯ ಕೆ ಕೆ, ಗಾಯತ್ರಿ ಎಸ್ ಎಚ್, ಸುಧಾ ಎಫ್ ಡಿ, ವಿದ್ಯಾ ಎಸ್ ವಿ, ನೀಲಮ್ಮ ವಿ ಎಮ್, ಪ್ರಿಯಾಂಕಾ ಕೆ ವಿ, ಸುಮಲತಾ ಬಿ ಕೆ,ಪೂರ್ಣಿಮಾ ಯು ಎಮ್, ಪೂಜಾ ಎಲ್ ಡಿ, ಸುಮೀನಾ ಎಸ್ ಎಸ್, ಸೀಮಾ ಎಮ್ ಎನ್, ಉಮೀಶಾಲಮ್ ಐ ಎಸ್, ಮಲಾನ ಎಮ್ ಎಮ್ , ರಾಜೇಶ್ವರಿ ರೆಡ್ಡಿ , ಅಕ್ಷತಾ ಬಿ ಕೆ, ಸೇರಿದಂತೆ ಅನೇಕ ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *