ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ ಬಹುನಿರೀಕ್ಷಿತ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದೆ. ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ, ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳ ಚುನಾವಣೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಇಂದು (ಫೆ 26 ಶುಕ್ರವಾರ) ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯಕ್ತ ಸುನೀಲ್ ಅರೋರಾ ಅವರು ವೇಳಾಪಟ್ಟಿ ಪ್ರಕಟಿಸಿದರು. ಮಾರ್ಚ್ 27 ರಿಂದ ಎಪ್ರಿಲ್ 29ರವರೆಗೆ ಪಂಚ ರಾಜ್ಯಗಳ ಚುನಾವಣೆ ನಡೆಯಲಿದೆ. ಇನ್ನು 5 ರಾಜ್ಯಗಳ ಮತ ಎಣಿಕೆ ಮೇ.02ರಂದು ನಡೆಯಲಿದೆ ಎಂದು ಅರೋರಾ ತಿಳಿಸಿದರು.
ಚುನಾವಣಾ ಪ್ರಕ್ರಿಯೆಯ ಪ್ರಮುಖ ದಿನಾಂಕಗಳು :
ಅಧಿಸೂಚನೆ ದಿನಾಂಕ: ಮಾರ್ಚ್ 12
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಮಾರ್ಚ್ 19
ನಾಮಪತ್ರಗಳ ಪರಿಶೀಲನೆ: ಮಾರ್ಚ್ 20
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೇ ದಿನ: ಮಾರ್ಚ್ 22
ಮತದಾನ: ಏಪ್ರಿಲ್ 6
ಮತ ಎಣಿಕೆ: ಮೇ 2
ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಯಲಿದೆ. ಅಸ್ಸಾಂನಲ್ಲಿ 3 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಮಾರ್ಚ್ 27ಕ್ಕೆ ಆರಂಭವಾಗಲಿದೆ. 2ನೇ ಹಂತವು ಏಪ್ರಿಲ್ 1ರಂದು ನಡೆಯಲಿದೆ. ಹಾಗೂ ಮೂರನೇ ಹಂತವು ಏಪ್ರಿಲ್ 6 ರಂದು ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಮೇ 2ರಂದು ಹೊರಬೀಳಲಿದೆ. ಕೇರಳ, ತಮಿಳುನಾಡು ಹಾಗೂ ಪುದುಚೇರಿಗಳಲ್ಲಿ ಏಪ್ರಿಲ್ 6ರಂದು ಒಂದೇ ದಿನ ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.
ಚುನಾವಣಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ
ಪಶ್ಚಿಮ ಬಂಗಾಳ (ಒಟ್ಟು ಕ್ಷೇತ್ರ 294)
ತಮಿಳುನಾಡು (ಒಟ್ಟು ಕ್ಷೇತ್ರ 234)
ಕೇರಳ (ಒಟ್ಟು ಕ್ಷೇತ್ರ 140)
ಅಸ್ಸಾಂ (ಒಟ್ಟು ಕ್ಷೇತ್ರ 126)
ಪುದುಚೇರಿ (ಒಟ್ಟು 30 ಕ್ಷೇತ್ರ.
ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ : ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಮತದಾನ ಮಾರ್ಚ್ 27ರಿಂದಲೇ ಆರಂಭವಾಗಲಿದೆ. 8ನೇ ಹಂತದ ಮತದಾನ ಏಪ್ರಿಲ್ 29ರಂದು ಪೂರ್ಣವಾಗಲಿದೆ. ಪಶ್ಚಿಮ ಬಂಗಾಳದಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ಮತದಾನದ ದಿನಾಂಕ ಇಲ್ಲಿದೆ.
ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
4ನೇ ಹಂತ: ಏಪ್ರಿಲ್ 10
5ನೇ ಹಂತ: ಏಪ್ರಿಲ್ 17
6ನೇ ಹಂತ: ಏಪ್ರಿಲ್ 22
7ನೇ ಹಂತ: ಏಪ್ರಿಲ್ 26
8ನೇ ಹಂತ: ಏಪ್ರಿಲ್ 29
ಮೇ. 02 ಕ್ಕೆ ಮತ ಎಣಿಕೆ : 5 ರಾಜ್ಯಗಳ 824 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 118.68 ಕೋಟಿ ಮತದಾರರು ಈ ಬಾರಿಯ ಹಕ್ಕು ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಮತಎಣಿಕೆ ಮೇ. 02ರಂದು ನಡೆಯಲಿದೆ ಎಂದು ಆಯೋಗ ಹೇಳಿದೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಕೊರೋನಾ ಕಾರಣ ರಾಜಕೀಯ ಪಕ್ಷಗಳಿಗೆ ಚುನಾವಣೆ ಮಾರ್ಗಸೂಚಿ: ಮನೆ ಮನೆ ಪ್ರಚಾರಕ್ಕೆ ಐವರಿಗೆ ಅವಕಾಶ ನೀಡಲಾಗಿದೆ. ಆನ್‌ಲೈನ್ ಮೂಲಕ ನಾಮ ಪತ್ರ ಸಲ್ಲಿಸಲು ಅವಕಾಶ. ಆನ್‌ಲೈನ್ ಮೂಲಕವೇ ನಾಯಕರಿಗೆ ಡೆಪಾಸಿಟ್ ಅವಕಾಶ. ರೋಡ್‌ಗೆ 5 ವಾಹನಗಳಿಗೆ ಮಾತ್ರ ಅವಕಾಶ. ನಾಮ ಪತ್ರ ಸಲ್ಲಿಸಲು 2 ವಾಹನಳಲ್ಲಿ ಮಾತ್ರ ಬರಬೇಕು. 2.7 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗುವುದು .ಸೂಕ್ಷ್ಮ ಮತಗಟ್ಟೆ ಬಳಿ ಹಚ್ಚುವರಿ CRPF ಸಿಬ್ಬಂದಿ ನಿಯೋಜಿಸಲಾಗುವುದು. ಕನಿಷ್ಠ 50 ರಷ್ಟು ಮತಗಳಟ್ಟೆಗಳ ನೇರಪ್ರಸಾರ ಮಾಡವಾಗುವುದು. ಇಂಟರ್ನೆಟ್ ಮೂಲಕ ವೋಟಿಂಗ್ ನೇರಪ್ರಸಾರ ವೀಕ್ಷಿಸಬಹುದು ಎಂದು ಸುನಿಲ ಆರೋರ ಹೇಳಿದ್ದಾರೆ.
ಎಲ್ಲಾ ರಾಜ್ಯಗಳಿಗೆ ವಿಶೇಷ ವೀಕ್ಷಕರ ನೇಮಕ ಮಾಡಲಾಗುವುದು. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಂಚೆ ಮತ ಅವಕಾಶ ನೀಡಲಾಗಿದೆ. ಎಲ್ಲಾ ಬೂತ್‌ಗಳಲ್ಲಿ ಸ್ಯಾನಿಟೈಸರ್ ಸೇರಿದಂತೆ ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತದೆ ಎಂದಿದ್ದಾರೆ.ಪರೀಕ್ಷೆಗಳು ನಡೆಯುವಾಗ ಚುನಾವಣೆ ಇರುವುದಿಲ್ಲ. ಇನ್ನು ಹಲವು ಮಾರ್ಗಸೂಚಿ, ಕಟ್ಟು ನಿಟ್ಟಿನ ಮುಂಜಾಗ್ರತ ಕ್ರಮ ಪಾಲಿಸಬೇಕಾದ ಕಾರಣ ಮತದಾನ ಅವಧಿಯನ್ನು 1 ಗಂಟೆ ವಿಸ್ತರಿಸಲಾಗಿದೆ. ಚುನಾವಣೆ ಸಿಬ್ಬಂದಿಗಳಿಗೆ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಆಯೋಗ ಹೇಳಿದೆ.