ಮುರುಘಾಸ್ವಾಮಿ ಅತ್ಯಾಚಾರ ಪ್ರಕರಣ : ಬಸವಶ್ರೀ ಪ್ರಶಸ್ತಿ ಹಿಂತಿರುಗಿಸಿದ ಪಿ.ಸಾಯಿನಾಥ್

ನವದೆಹಲಿ : ಮುರುಘಾಮಠದಿಂದ ಪಡೆದಿದ್ದ “ಬಸವಶ್ರೀ” ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಪಿ.ಸಾಯಿನಾಥ್‌ ವಾಪಸ್ಸ ನೀಡುವ ಮೂಲಕ  ಪ್ರತಿರೋಧ ತೋರಿಸಿದ್ದಾರೆ. ಮುರುಘಾ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ಲೈಂಗಿಕ ದೌರ್ಜನ್ಯವನ್ನು ಅವರು ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಾಯಿನಾಥ್‌, ಚಿತ್ರದುರ್ಗದ ಶ್ರೀ ಮುರುಘಾಮಠದ ಮಠಾಧೀಶರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಲೈಂಗಿಕ ಪ್ರಕರಣದ ಸುದ್ದಿಯನ್ನು ನಾನು ಮಾಧ್ಯಮಗಳ ಮೂಲಕ ತಿಳಿದು ಹೆಚ್ಚು ವಿಚಲಿತನಾಗಿದ್ದೇನೆ ಎಂದಿದ್ದಾರೆ.  ಅವರು ಈಗ ಪೋಕ್ಸೊ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ದೇಶವ್ಯಾಪಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿರೋಧಕ್ಕೆ ನಾನು ಕೈ ಜೋಡಿಸುತ್ತಿದ್ದು, 2017 ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು(ಪ್ರಶಸ್ತಿ ಫಲಕ, ಐದು ಲಕ್ಷ ರೂ. ಮೊತ್ತ)ಹಿಂದಿರುಗಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಘೋರ ಘಟನೆಗಳನ್ನು ಬೆಳಕಿಗೆ ತಂದ ಮೈಸೂರು ಮೂಲದ ಎನ್‌ಜಿಒ “ಒಡನಾಡಿ” ಯ ಪ್ರಯತ್ನಗಳನ್ನು ಪಿ.ಸಾಯಿನಾಥ್‌ ಶ್ಲಾಘಿಸಿದ್ದಾರೆ. ಸಾಮಾಜಿಕ ಅನಿಷ್ಟಗಳ ವಿರುದ್ಧದ ಹೋರಾಟದ ಬಗ್ಗೆ ಮೆಚ್ಚುಗೆಯನ್ನು ದಾಖಲಿಸಿದ್ದಾರೆ. ಹಗರಣದ ತನಿಖೆಯನ್ನು ತೀವ್ರವಾಗಿ ಮುಂದುವರಿಸಬೇಕು ಮತ್ತು ಯಾವುದೋ ಒತ್ತಡಕ್ಕೆ ಮಣಿದು ರಾಜಿ ಮೂಲಕ ಈ ಪ್ರಕರಣವನ್ನು ಮುಚ್ಚಿ ಹಾಕಬಾರದೆಂದು ಕರ್ನಾಟಕ ಸರಕಾರವನ್ನು ಆಗ್ರಹಿಸಿದ್ದಾರೆ.

2017 ರಲ್ಲಿ ನೀಡಲಾಗಿದ್ದ ಬಸವಶ್ರೀ ಪ್ರಶಸ್ತಿ
Donate Janashakthi Media

One thought on “ಮುರುಘಾಸ್ವಾಮಿ ಅತ್ಯಾಚಾರ ಪ್ರಕರಣ : ಬಸವಶ್ರೀ ಪ್ರಶಸ್ತಿ ಹಿಂತಿರುಗಿಸಿದ ಪಿ.ಸಾಯಿನಾಥ್

  1. We salute you sir, for having taken a timely decision to return the award received from tainted a seer. We demand the Muruga mata and Government to disrobe publicly and punish severely for having committed such a heinous crime on two teenage minor girls who are the students of the same Mata .

Leave a Reply

Your email address will not be published. Required fields are marked *