– ವಸಂತರಾಜ ಎನ್.ಕೆ.
ಶ್ರೀಮಂತರಿಂದ ಸಂಪತ್ತಿನ ಕ್ರೋಡೀಕರಣವು ಒಂದು ದಶಕದೊಳಗೆ ಜಗತ್ತು ತನ್ನ ಮೊದಲ ಟ್ರಿಲಿಯಾಧಿಪತಿ (ಲಕ್ಷ ಕೋಟಿ ಡಾಲರಿಗಿಂತ ಹೆಚ್ಚು ಸಂಪತ್ತಿರುವ ವ್ಯಕ್ತಿ) ಅನ್ನು ನೋಡುವ ಹಂತಕ್ಕೆ ಏರಿದೆ. ಇನ್ನೊಂದು ಕಡೆ ಜಾಗತಿಕ ಬಡತನವನ್ನು ಕೊನೆಗೊಳಿಸಲು 200 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಆಕ್ಸ್ ಫ್ಯಾಮ್ ಇಂಟರ್ ನ್ಯಾಷನಲ್ ವರದಿ ಮಾಡಿದೆ. ಆಕ್ಸ್ ಫಾಮ್
ವಿಶ್ವದ ಅಗ್ರ ಐದು ಶ್ರೀಮಂತರ ಸಂಪತ್ತು 2020 ರಿಂದ ದ್ವಿಗುಣಗೊಂಡಿದೆ, ಆದರೆ 480 ಕೋಟಿ ಅಥವಾ ಜಗತ್ತಿನ 60% ಜನ ಮತ್ತಷ್ಟು ಬಡವರಾಗಿದ್ದಾರೆ. ಈ ದರದಲ್ಲಿ, ಪ್ರಪಂಚವು ತನ್ನ ಮೊದಲ ಟ್ರಿಲಿಯಾಧಿಪತಿ (ಲಕ್ಷ ಕೋಟಿ ಡಾಲರಿಗಿಂತ ಹೆಚ್ಚು ಸಂಪತ್ತಿರುವ ವ್ಯಕ್ತಿ) ಹೊಂದಲು ಕೇವಲ ಒಂದು ದಶಕ ತೆಗೆದುಕೊಳ್ಳಬಹುದಾದರೂ, ಬಡತನದ ನಿರ್ಮೂಲನಗೊಳಿಸಲು 229 ವರ್ಷಗಳು ತೆಗೆದುಕೊಳ್ಳುತ್ತದೆ. ಆಕ್ಸ್ ಫಾಮ್
ಈ ಸಂಶೋಧನೆಗಳು ಸ್ವಿಟ್ಜರ್ಲೆಂಡ್ ನ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಸಭೆಯ ಮುನ್ನಾದಿನದಂದು ಬಿಡುಗಡೆಯಾದ ಆಕ್ಸ್ ಫ್ಯಾಮ್ ಇಂಟರ್ ನ್ಯಾಷನಲ್ ಪ್ರಕಟಿಸಿದ “ಅಸಮಾನತೆ ಕಾರ್ಪೊರೇಶನ್” ಎಂಬ ಹೊಸ ವರದಿಯ ಭಾಗವಾಗಿದೆ. ಆಕ್ಸ್ ಫಾಮ್
“ನಾವು ಒಂದು ವಿಭಜನೆಯ ದಶಕದ ಆರಂಭಕ್ಕೆ ಸಾಕ್ಷಿಯಾಗಿದ್ದೇವೆ. ಓದು ಕಡೆ ಹೊತ್ತುಕೊಂಡ ಮಹಾ ಸಾಂಕ್ರಾಮಿಕ, ಹಣದುಬ್ಬರ ಮತ್ತು ಯುದ್ಧದ ಆರ್ಥಿಕ ಆಘಾತಗಳನ್ನು ಶತಕೋಟ್ಯಾಂತರ ಜನರು, ಇನ್ನೊಂದು ಕಡೆ ಸಂಪತ್ತು ಹೆಚ್ಚಿಸಿಕೊಳ್ಳುತ್ತಿರುವ ಶತಕೋಟ್ಯಾಧಿಪತಿಗಳು. ಈ ಅಸಮಾನತೆಯು ಆಕಸ್ಮಿಕವಲ್ಲ; ಶತಕೋಟ್ಯಾಧಿಪತಿಗಳ .ವರ್ಗವು ಕಾರ್ಪೊರೇಟುಗಳು ಇತರ ಎಲ್ಲರನ್ನು ದೋಚಿ ತಮ್ಮ ಸಂಪತ್ತನ್ನು ಹೆಚ್ಚಿಸುವುದನ್ನು ಖಾತ್ರಿಪಡಿಸುತ್ತಿದೆ ” ಎಂದಿದ್ದಾರೆ ಪತ್ರಿಕಾ ಪ್ರಕಟಣೆಯಲ್ಲಿ ಆಕ್ಸ್ ಫ್ಯಾಮ್ ನ ಮಧ್ಯಂತರ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಬ್ ಬೆಹರ್, ನವ-ವಸಾಹತುಶಾಹಿ ವಿಭಜನೆ ಜಾಗತಿಕ ಉತ್ತರ (ಶ್ರೀಮಂತ ದೇಶಗಳ) ಮತ್ತು ಜಾಗತಿಕ ದಕ್ಷಿಣದ (ಬಡದೇಶಗಳ) ನಡುವಿನ ಅಸಮಾನತೆಯ ಅಂತರವು 25 ವರ್ಷಗಳಲ್ಲಿ ಮೊದಲ ಬಾರಿಗೆ ಹೆಚ್ಚಾಗಿದೆ. ಆಕ್ಸ್ ಫಾಮ್
ಜಾಗತಿಕ ಉತ್ತರದ ಶ್ರೀಮಂತ ರಾಷ್ಟ್ರಗಳ ಬಳಿ ಎಲ್ಲಾ ಜಾಗತಿಕ ಸಂಪತ್ತಿನ 69% ಮತ್ತು ಎಲ್ಲಾ ಶತಕೋಟ್ಯಾಧಿಪತಿಗಳ ಸಂಪತ್ತಿನ 74% ರಷ್ಟಿದೆ. ಈ ಸಂಪತ್ತಿನ ಸಾಂದ್ರತೆಯು ವಸಾಹತುಶಾಹಿ ಮತ್ತು ಸಾಮ್ರಾಜ್ಯದ ಪರಂಪರೆಯಾಗಿದೆ ಎಂದು ವರದಿ ಹೇಳುತ್ತದೆ, “ವಸಾಹತುಶಾಹಿಯ ಹೊರರೂಪದ ಅಂತ್ಯದ ನಂತರವೂ ಜಾಗತಿಕ ದಕ್ಷಿಣದೊಂದಿಗಿನ ನವ-ವಸಾಹತು ಸಂಬಂಧಗಳು ಮುಂದುವರೆದಿವೆ, ಆರ್ಥಿಕ ಅಸಮತೋಲನವನ್ನು ಶಾಶ್ವತಗೊಳಿಸುವುದು ಮತ್ತು ಶ್ರೀಮಂತ ರಾಷ್ಟ್ರಗಳ ಪರವಾಗಿ ಆರ್ಥಿಕ ನಿಯಮಗಳನ್ನು ಮಾಡುವುದು.” ಸಂಪತ್ತಿನ ದೋಚುವಿಕೆಯನ್ನು ಬಹುರಾಷ್ಟ್ರೀಯ ಸಂಸ್ಥೆಗಳು ಸುಗಮಗೊಳಿಸಿವೆ. ಆಕ್ಸ್ ಫಾಮ್
ಶ್ರೀಮಂತ ದೇಶಗಳಲ್ಲಿ ಸಹ ಅಸಮಾನತೆಗಳನ್ನು ಪುನರುತ್ಪಾದಿಸಲಾಗಿದೆ, ಅಲ್ಲಿ ಅಂಚಿನಲ್ಲಿರುವ ಮತ್ತು ಜನಾಂಗೀಯ ಸಮುದಾಯಗಳು ತೀವ್ರ ಅಸಮಾನತೆಯನ್ನು ಎದುರಿಸುತ್ತಿವೆ.ಕಾರ್ಪೊರೇಟ್ ದುರಾಸೆ ಅಸಮಾನತೆಯನ್ನು ಹೆಚ್ಚಿಸುತ್ತದೆ. ಆಕ್ಸ್ ಫಾಮ್
ವಿಶ್ವದ ಅತಿದೊಡ್ಡ ಕಾರ್ಪೊರೇಶನ್ ಗಳಲ್ಲಿ 10 ರಲ್ಲಿ ಏಳು ಮಂದಿ ಸಿಇಒ ಅಥವಾ ಮುಖ್ಯ ಷೇರುದಾರರಾಗಿ ಶತಕೋಟ್ಯಾಧಿಪತಿಹಗಳು ಇದ್ದಾರೆ. ಈ ಕಂಪನಿಗಳು 10.2 ಲಕ್ಷ ಕೋಟಿ ಡಾಲರು ಮೌಲ್ಯವನ್ನು ಹೊಂದಿವೆ, ಇದು ಲ್ಯಾಟಿನ್ ಅಮೆರಿಕ ಮತ್ತು ಆಫ್ರಿಕಾದ ಎಲ್ಲಾ ದೇಶಗಳ ಒಟ್ಟು ಜಿಡಿಪಿಗಳನ್ನು ಮೀರಿದೆ. ಆಕ್ಸ್ ಫಾಮ್
ವಿಶ್ವ ಬೆಂಚ್ ಮಾರ್ಕಿಂಗ್ ಅಲೈಯನ್ಸ್ ನ ದತ್ತಾಂಶದ ಆಕ್ಸ್ ಫ್ಯಾಮ್ ನ ವಿಶ್ಲೇಷಣೆಯ ಪ್ರಕಾರ, ಕೇವಲ 0.4% ವಿಶ್ವದ 1,600 ಕ್ಕೂ ಹೆಚ್ಚು ದೊಡ್ಡ ಕಂಪನಿಗಳು ತಮ್ಮ ಕಾರ್ಮಿಕರಿಗೆ ಮತ್ತು ತಮ್ಮ ಮೌಲ್ಯ ಸರಪಳಿಗಳಲ್ಲಿ ಇರುವ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡಲು ಸಾರ್ವಜನಿಕವಾಗಿ ಬದ್ಧವಾಗಿವೆ. ಅಂದರೆ ಹೆಚ್ಚು ಕಡಿಮೆ ಎಲ್ಲ ದೊಡ್ಡ ಕಂಪನಿಗಳು ಕನಿಷ್ಠ ವೇತನವನ್ನೂ ನೀಡುತ್ತಿಲ್ಲ. ಆಕ್ಸ್ ಫಾಮ್
ಇದನ್ನು ಓದಿ : ಭಾರತ್ ಜೋಡೋ ನ್ಯಾಯ್ ಯಾತ್ರೆ | ಮಾರ್ಗ ಬದಲಿಸಿದ ಕಾರಣ ನೀಡಿ ಎಫ್‌ಐಆರ್ ದಾಖಲಿಸಿದ ಅಸ್ಸಾಂನ ಬಿಜೆಪಿ ಸರ್ಕಾರ!
ಶ್ರೀಮಂತರು ಷೇರುದಾರರಾಗಿ ಸಹ ಲಾಭವನ್ನು ಪಡೆದುಕೊಂಡಿದ್ದಾರೆ. 1% ರಷ್ಟು ಅತ್ಯಂತ ಶ್ರೀಮಂತರು ಎಲ್ಲಾ ಜಾಗತಿಕ ಹಣಕಾಸು ಸ್ವತ್ತುಗಳಲ್ಲಿ 43% ನಷ್ಟು ಪಾಲನ್ನು ಹೊಂದಿದ್ದಾರೆ. ಈ ಸಂಖ್ಯೆ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ 48%, ಏಷ್ಯಾದಲ್ಲಿ 50% ಮತ್ತು ಯುರೋಪಿನಲ್ಲಿ 47% ರಷ್ಟಿದೆ. ಆಕ್ಸ್ ಫಾಮ್
ಜುಲೈ 2022 ಮತ್ತು ಜೂನ್ 2023 ರ ನಡುವೆ 96 ದೊಡ್ಡ ಸಂಸ್ಥೆಗಳು ಮಾಡಿದ ಪ್ರತಿ 100 ಡಾಲರು ಲಾಭಕ್ಕೆ, 82 ಡಾಲರು ಷೇರುದಾರರಿಗೆ ಸ್ಟಾಕ್ ಮರು ಖರೀದಿ ಮತ್ತು ಲಾಭಾಂಶದ ರೂಪದಲ್ಲಿ ಹೋಯಿತು. ಒಟ್ಟಾರೆಯಾಗಿ, ಜೂನ್ 2023 ರವರೆಗಿನ 12 ತಿಂಗಳ ಅವಧಿಯಲ್ಲಿ, ಜಾಗತಿಕವಾಗಿ 148 ದೊಡ್ಡ ನಿಗಮಗಳು 1.8 ಲಕ್ಷ ಕೋಟಿ ಡಾಲರು ಲಾಭವನ್ನು ಗಳಿಸಿವೆ.
ವಿಶ್ವ ಅಸಮಾನತೆಯ ಪ್ರಯೋಗಾಲಯದ ಪ್ರಕಾರ, 2022 ರಲ್ಲಿ, ವಿಶ್ವದ ಜನಸಂಖ್ಯೆಯ ಬಡ 50% ಜನರು ಜಾಗತಿಕ ಆದಾಯದ ಕೇವಲ 8.5% ಗಳಿಸಿದ್ದಾರೆ.
ಅಸುರಕ್ಷಿತ ಮತ್ತು ಅನಿಶ್ಚಿತ ಪರಿಸ್ಥಿತಿಗಳಲ್ಲಿ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿದರೂ ಬಹುಪಾಲು ಜನರು ಪ್ರತಿ ತಿಂಗಳು ತಮ್ಮ ವೇತನದಿಂದ ಖರೀದಿ ಮಾಡಬಹುದಾದ ಸರಕು-ಸೇವೆಗಳು ಕಡಿಮೆಯಾಗುತ್ತಿವೆ. 79.1 ಕೋಟಿ ಕಾರ್ಮಿಕರ ವೇತನವು ಹಣದುಬ್ಬರ ಎದುರಿಸಲು ವಿಫಲವಾಗಿವೆ. ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರು 1.5 ಲಕ್ಷ ಕೋಟಿ ಡಾಲರುಗಳನ್ನು ಕಳೆದುಕೊಂಡಿದ್ದಾರೆ. ಇದು ಪ್ರತಿ ಕಾರ್ಮಿಕನಿಗೆ ಕಳೆದು ಹೋದ 25 ದಿನಗಳ ವೇತನಕ್ಕೆ ಸಮಾನವಾಗಿದೆ ಎಂದು ಆಕ್ಸ್ ಫ್ಯಾಮ್ ಹೇಳಿದೆ. ಆಕ್ಸ್ ಫಾಮ್
ಕಾರ್ಮಿಕರ ವೇತನಕ್ಕೆ ಹೋಲಿಸಿದರೆ ಸೂಪರ್ ಶ್ರೀಮಂತರ ಸಂಪತ್ತಿನ ನಡುವಿನ ವ್ಯತ್ಯಾಸವು ತುಂಬಾ ವಿಸ್ತಾರವಾಗಿದೆ, ವರದಿಯ ಪ್ರಕಾರ, ಫಾರ್ಚೂನ್ 100 ಕಂಪನಿಯ ಸಿಇಒ ಒಂದೇ ವರ್ಷದ ವೇತನ ಗಳಿಸಲು ಆರೋಗ್ಯ ಅಥವಾ ಸಾಮಾಜಿಕ ವಲಯದ ಮಹಿಳಾ ಕಾರ್ಮಿಕರಿಗೆ 1,200 ವರ್ಷಗಳು ಬೇಕಾಗುತ್ತದೆ.
ಮುಖ್ಯವಾಗಿ, ಆದಾಯದಲ್ಲಿ ನಿರಂತರ ಲಿಂಗ ಅಂತರವನ್ನು ಮೀರಿ, ಮಹಿಳೆಯರು ನಿರ್ವಹಿಸುವ ಪಾವತಿಸದ ಆರೈಕೆ ಕಾರ್ಯವು ಆರ್ಥಿಕತೆಗೆ ಪ್ರತಿ ವರ್ಷ ಕನಿಷ್ಠ 10.8 ಲಕ್ಷ ಕೋಟಿ ಡಾಲರ್ ಗೆ ಸಬ್ಸಿಡಿ ನೀಡಿದೆ. ಇದು ವಿಶ್ವದಾದ್ಯಂತ ಸರ್ಕಾರದ ಬೆಂಬಲ ಮತ್ತು ಸಬ್ಸಿಡಿಗಳಿಂದ ಲಾಭ ಪಡೆದಿರುವ ಜಾಗತಿಕ ಟೆಕ್ ಉದ್ಯಮದ ಆರ್ಥಿಕ ಕೊಡುಗೆಗಿಂತ ಮೂರು ಪಟ್ಟು ಹೆಚ್ಚಾಗಿದೆ.
ಜಾಗತಿಕ ಅಸಮಾನತೆಯನ್ನು ಉಲ್ಬಣಗೊಳಿಸಿದ “ಪ್ರಮುಖ ಸಾಧನ” ಏಕಸ್ವಾಮ್ಯದ ಶಕ್ತಿಯ ಬೆಳವಣಿಗೆಯಾಗಿದೆ ಎಂದು ಆಕ್ಸ್ ಫ್ಯಾಮ್ ವಾದಿಸುತ್ತದೆ. ಇದು ಇಡೀ ಆರ್ಥಿಕತೆ ಮತ್ತು ಸರ್ಕಾರಗಳನ್ನು ಹೇರಾಫೆರಿ ಮಾಡಲು ಮತ್ತು ಪ್ರಭಾವಿಸಲು ಬೆರಳೆಣಿಕೆಯಷ್ಟು ನಿಗಮಗಳಿಗೆ ಅವಕಾಶ ಮಾಡಿಕೊಟ್ಟಿದೆ. ಬೆಲೆ ಏರಿಕೆ, ವೇತನವನ್ನು ನಿಗ್ರಹಿಸಲು, ಲಾಭದ ಅನ್ವೇಷಣೆಯಲ್ಲಿ ಸಾರ್ವಜನಿಕ ಸೇವೆಗಳನ್ನು ಖಾಸಗೀಕರಣಗೊಳಿಸಲು ಮತ್ತು ಯೂನಿಯನ್ ಕಟ್ಟುವ ಮೇಲಿನ ನಿರ್ಬಂಧಗಳನ್ನು ಒಳಗೊಂಡಿರುವ ಕಾರ್ಮಿಕ ಕಾನೂನುಗಳು ಮತ್ತು ನೀತಿಗಳನ್ನು ರೂಪಿಸಲು ಬೆರಳೆಣಿಕೆಯಷ್ಟು ಕಾರ್ಪೊರೇಶನ್ ಗಳಿಗೆ ಸಾಧ‍್ಯವಾಗಿದೆ. ಆಕ್ಸ್ ಫಾಮ್
ಯು.ಎಸ್. ಬೆಂಬಲಿತ ಕ್ಷಿಪ್ರದಂಗೆಯಲ್ಲಿ ಹಿಂದೆ ಉರುಳಿಸಲ್ಪಟ್ಟ ಚಿಲಿಯ ಸಮಾಜವಾದಿ ಅಧ್ಯಕ್ಷ ಸಾಲ್ವಡಾರ್ ಅಲೆಂಡೆ ಅವರನ್ನು ವರದಿ ಉಲ್ಲೇಖಿಸಿದೆ, “ದೊಡ್ಡ ಬಹುರಾಷ್ಟ್ರೀಯ ಕಾರ್ಪೊರೇಶನ್ ಗಳು ಮತ್ತು ಪ್ರಭುತ್ವಗಳ ನಡುವೆ ನೇರ ಮುಖಾಮುಖಿಯನ್ನು ನಾವು ಎದುರಿಸುತ್ತಿದ್ದೇವೆ. ಕಾರ್ಪೊರೇಶನ್ ಗಳು ಮತ್ತು ಪ್ರಭುತ್ವದ ಮೂಲಭೂತ ರಾಜಕೀಯ, ಆರ್ಥಿಕ ಮತ್ತು ಮಿಲಿಟರಿ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ.” ಎಂದು ಅವರು ಎಚ್ಚರಿಸಿದ್ದರು. ಆಕ್ಸ್ ಫಾಮ್
ಆಕ್ಸ್ ಫ್ಯಾಮ್ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡೆಸಿದ ಅಧ್ಯಯನವನ್ನು ಉಲ್ಲೇಖಿಸುತ್ತದೆ, ಇದು ಯು.ಎಸ್ ನಲ್ಲಿ ಉತ್ಪಾದನಾ ವಲಯದಲ್ಲಿ ಕಾರ್ಮಿಕ ಆದಾಯದ ಪಾಲು 76% ಕುಸಿಯಲು, ಏಕಸ್ವಾಮ್ಯದ ಶಕ್ತಿಯು ಕಾರಣವಾಗಿದೆ ಎಂದು ಕಂಡುಕೊಂಡಿದೆ. ಆಕ್ಸ್ ಫಾಮ್
“ಏಕಸ್ವಾಮ್ಯಗಳು ನವೋದ್ಯಮಕ್ಕೆ ಹಾನಿ ಮಾಡುತ್ತವೆ ಮತ್ತು ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳನ್ನು ಪುಡಿಮಾಡುತ್ತವೆ. ಫಾರ್ಮಾ ಏಕಸ್ವಾಮ್ಯವು ಲಕ್ಷಾಂತರ ಜನರು COVID-19 ಲಸಿಕೆಗಳನ್ನು ಹೇಗೆ ವಂಚಿತಗೊಳಿಸಿತು, ಲಸಿಕೆ ವರ್ಣಭೇದ ನೀತಿಯನ್ನು ಮತ್ತು ಹೊಸ ಶತಕೋಟ್ಯಾಧಿಪತಿ ಗಳ ಕ್ಲಬ್ ಅನ್ನು ಸೃಷ್ಟಿಸಿತು ಎಂಬುದನ್ನು ಜಗತ್ತು ಮರೆತಿಲ್ಲ ಎಂದು ” ಬೆಹರ್ ಹೇಳಿದ್ದಾರೆ. ಆಕ್ಸ್ ಫಾಮ್
1995 ಮತ್ತು 2015 ರ ನಡುವೆ, 60 ಫಾರ್ಮಾ (ಔಷಧಿ) ಕಂಪನಿಗಳು ಕೇವಲ 10 “ದೈತ್ಯ ಫಾರ್ಮಾ” ಸಂಸ್ಥೆಗಳಲ್ಲಿ ವಿಲೀನಗೊಂಡಿವೆ. ಸಾರ್ವಜನಿಕ ಧನಸಹಾಯದ ಮೂಲಕ ನವೋದ್ಯಮ ಹೆಚ್ಚಾಗಿ ಸಾಧ್ಯವಾಗಿದೆ ಎಂಬ ವಾಸ್ತವದ ಹೊರತಾಗಿಯೂ, ಬಿಗ್ ಫಾರ್ಮಾ ಏಕಸ್ವಾಮ್ಯಗಳು ಜೀವ ಉಳಿಸುವ ಔಷಧಿಗಳು ಮತ್ತು ಲಸಿಕೆಗಳ ಪ್ರವೇಶವನ್ನು ನಿರ್ಬಂಧಿಸಲು ಬೌದ್ಧಿಕ ಆಸ್ತಿ ಮತ್ತು ಜಾಗತಿಕ ವ್ಯಾಪಾರ ನಿಯಮಗಳನ್ನು ಆಕ್ರಮಣಕಾರಿಯಾಗಿ ಬಳಸಿಕೊಂಡಿವೆ, COVID-19 ಮಹಾ ಸಾಂಕ್ರಾಮಿಕ ಕಾಲ ಇತ್ತೀಚೆಗೆ ಇದಕ್ಕೆ ಸಾಕ್ಷಿಯಾಗಿದೆ.
25 ವರ್ಷಗಳ ಹಿಂದೆ, 10 ಕಂಪನಿಗಳು ಜಾಗತಿಕ ಬೀಜಗಳ ಮಾರುಕಟ್ಟೆಯ ಶೇ. 40 ನ್ನು ನಿಯಂಥ್ರಿಸುತ್ತಿದ್ದವು. ಈಗ ಬರಿಯ ಎರಡು ಕಂಪನಿಗಳು ಅದನ್ನು ನಿಯಂತ್ರಿಸುತ್ತಿವೆ.
ಇದಲ್ಲದೆ, ಜಾಗತಿಕ ದಕ್ಷಿಣದಾದ್ಯಂತದ “ಆರ್ಥಿಕತೆಯು ಜಾಗತಿಕ ಉತ್ತರದ ಸರಕುಗಳಲ್ಲಿನ ಏಕಸ್ವಾಮ್ಯದ ಕೈಗಾರಿಕೆಗಳ ಬಳಕೆಗಾಗಿ ತಾಮ್ರದಿಂದ ಕಾಫಿಯವರೆಗೆ ಪ್ರಾಥಮಿಕ ಸರಕುಗಳನ್ನು ರಫ್ತು ಮಾಡಲು ಲಾಕ್ ಮಾಡಲಾಗಿದೆ. ಇದು ವಸಾಹತುಶಾಹಿ ಶೈಲಿಯ ಮಾದರಿಯನ್ನು ಶಾಶ್ವತಗೊಳಿಸುತ್ತದೆ,” ಎಂದು ವರದಿ ಹೇಳುತ್ತದೆ. ಆಕ್ಸ್ ಫಾಮ್
ಮಾರುಕಟ್ಟೆ ಸಾಂದ್ರತೆ ಮತ್ತು ಏಕಸ್ವಾಮ್ಯದ ಶಕ್ತಿಯನ್ನು ಮೀರಿ, ಕಾರ್ಪೊರೇಶನ್ ಗಳು ಮತ್ತು ಅವುಗಳ ಮಾಲೀಕರು ತೆರಿಗೆಯ ಮೇಲೆ “ಸುಸ್ಥಿರ ಮತ್ತು ಹೆಚ್ಚು ಪರಿಣಾಮಕಾರಿಯಾದ ಯುದ್ಧವನ್ನು ನಡೆಸುವ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ … ಸಾರ್ವಜನಿಕರ ನಿರ್ಣಾಯಕ ಸಂಪನ್ಮೂಲಗಳನ್ನು ಕಸಿದುಕೊಂಡಿದ್ದಾರೆ.”
1975 ಮತ್ತು 2019 ರ ನಡುವೆ, ಅನೇಕ ಕಾರ್ಪೊರೇಶನ್ ಗಳು ದಾಖಲೆಯ ಲಾಭವನ್ನು ಗಳಿಸಿದರೆ, ಕಾರ್ಪೊರೇಟ್ ತೆರಿಗೆ ದರವು 23% ರಿಂದ 17% ಕ್ಕೆ ಇಳಿದಿದೆ%. 2022 ರಲ್ಲಿ, ಸುಮಾರು 1 ಲಕ್ಷ ಕೋಟಿ ಡಾಲರುಗಳ ಲಾಭವನ್ನು “ತೆರಿಗೆ ಸ್ವರ್ಗ” ಗಳಿಗೆ ವರ್ಗಾಯಿಸಲಾಯಿತು. ಆಕ್ಸ್ ಫಾಮ್
ನವ-ಉದಾರವಾದಿ “ವಾಲ್ ಸ್ಟ್ರೀಟ್ ಒಮ್ಮತ”
ಕಾರ್ಪೊರೇಟ್ ತೆರಿಗೆಯ ಕುಸಿತವು ಭಾಗಶಃ “ಕಾರ್ಪೊರೇಶನ್ ಗಳು ಮತ್ತು ಅವುಗಳ ಶ್ರೀಮಂತ ಮಾಲೀಕರು, ಆಗಾಗ್ಗೆ ಜಾಗತಿಕ ಉತ್ತರ ದೇಶಗಳು ಮತ್ತು ವಿಶ್ವಬ್ಯಾಂಕ್ ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ. ಉತ್ತೇಜಿಸುವ ವಿಶಾಲವಾದ ನವ-ಉದಾರವಾದಿ ಕಾರ್ಯಸೂಚಿಯ ಪರಿಣಾಮವಾಗಿದೆ”. ಆಕ್ಸ್ ಫಾಮ್
ಕಾರ್ಪೊರೇಟ್ ತೆರಿಗೆಗಳಿಂದ ಆದಾಯದ ಕೊರತೆಯು “ಅಸಮಾನತೆ ನಿವಾರಿಸುವ ಸಾರ್ವಜನಿಕ ಸೇವೆಗಳಿಗೆ” ಹಣದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಮೊರಾಕೊದಲ್ಲಿ, ತೆರಿಗೆ ಪ್ರೋತ್ಸಾಹ ಪ್ರಯೋಜನದ 43.9% ನ್ನು ಕಾರ್ಪೊರೇಶನ್ ಗಳಿಗೆ ನೀಡಿತು, ಇದು 2021 ರ ದೇಶದ ಸಂಪೂರ್ಣ ಆರೋಗ್ಯ ಬಜೆಟ್ ಅನ್ನು ಮೀರಿಸಿದೆ. ಆಕ್ಸ್ ಫಾಮ್
ಸಾರ್ವಜನಿಕ ಸೇವೆಗಳ ಮೇಲಿನ ಪರಿಣಾಮ, ಮತ್ತು ಈ ಸೇವೆಗಳನ್ನು ಗ್ರಾಹಕರಂತೆ ಮಾತ್ರವಲ್ಲದೆ ಕಾರ್ಮಿಕರಾಗಿ ಅವಲಂಬಿಸಿರುವವರ ಮೇಲೆ ವಿಸ್ತರಿಸುವ ಮೂಲಕ, ಜಾಗತಿಕ ದಕ್ಷಿಣದಲ್ಲಿ ಸಾಲದ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶೇಷವಾಗಿ ತೀವ್ರವಾಗಿದೆ. ಈಗ ಮತ್ತು 2029 ರ ನಡುವೆ, ಕಡಿಮೆ ಮತ್ತು ಕಡಿಮೆ-ಮಧ್ಯಮ ಆದಾಯದ ದೇಶಗಳು ದಿನಕ್ಕೆ ಸುಮಾರು ಅರ್ಧ ಶತಕೋಟಿ ಡಾಲರ್ ಗಳನ್ನು ಬಡ್ಡಿ ಮತ್ತು ಸಾಲ ಪಾವತಿ ಮಾಡುತ್ತವೆ. ಆಕ್ಸ್ ಫಾಮ್
ಕಾರ್ಪೊರೇಟ್ ತೆರಿಗೆ ತಪ್ಪಿಸುವುದು ಮತ್ತು ಹೆಚ್ಚಿನ ಮಟ್ಟದ ಸಾಲದ ಪರಿಸ್ಥಿತಿಯನ್ನು ನೆಪ ಮಾಡಿಕೊಂಡು, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಸೇರಿದಂತೆ ನಿರ್ಣಾಯಕ ಕ್ಷೇತ್ರಗಳಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕ್ ಗಳು ಮಿತವ್ಯಯ ನೀತಿಗಳನ್ನು ಹೇರುತ್ತವೆ. ಆಕ್ಸ್ ಫಾಮ್
ಸಾರ್ವಜನಿಕ ಸೇವೆಗಳನ್ನು ಉಳಿಸಿಕೊಳ್ಳುವ ಸರ್ಕಾರಗಳ ಸಾಮರ್ಥ್ಯಕ್ಕೆ ಅಡಚಣೆ ಒಡ್ಡುವುದಲ್ಲದೆ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣ ಸೇರಿದಂತೆ ನಿರ್ಣಾಯಕ ಸೇವೆಗಳ ಖಾಸಗೀಕರಣಕ್ಕೆ ವಿಶ್ವದಾದ್ಯಂತದ ಕಾರ್ಪೊರೇಶನ್ ಗಳು ಮುಂದಾಗಿವೆ. ವರದಿಯಲ್ಲಿ ಹೇಳುವಂತೆ, ಇದನ್ನು ಸಾರ್ವಜನಿಕ ಆಸ್ತಿಗಳ ಮಾರಾಟದ ಮೂಲಕ ಮಾತ್ರವಲ್ಲ, ಹೊರಗುತ್ತಿಗೆ ಮತ್ತು “ಸಾರ್ವಜನಿಕ-ಖಾಸಗಿ ಸಹಭಾಗಿತ್ವ” ಮೂಲಕ ಖಾಸಗಿ ಕಾರ್ಪೊರೇಟ್ ವಲಯವನ್ನು ಸಾರ್ವಜನಿಕ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ಸಂಯೋಜಿಸುವ ಮೂಲಕ. ಖಾಸಗೀಕರಣವು ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಕಾರ್ಪೊರೇಶನ್ ಗಳಿಗೆ ಹೆಚ್ಚಿನ ಪ್ರಭಾವವನ್ನು ನೀಡುತ್ತದೆ. ಆಕ್ಸ್ ಫಾಮ್
“ಪ್ರಮುಖ ಅಭಿವೃದ್ಧಿ ಸಂಸ್ಥೆಗಳು, ಅವುಗಳಲ್ಲಿ ಹೆಚ್ಚಿನವು ಖಾಸಗಿ ಸೇವೆಗಳನ್ನು ಒದಗಿಸಲು ಆದ್ಯತೆ ನೀಡುವ ನೀತಿಗಳನ್ನು ಅಳವಡಿಸಿಕೊಂಡಿವೆ, ಹಣಕಾಸಿನ ಅಪಾಯವನ್ನು ಖಾಸಗಿಯಿಂದ ಸಾರ್ವಜನಿಕ ವಲಯಕ್ಕೆ ವರ್ಗಾಯಿಸುವ ಮೂಲಕ ಅಂತಹ ವ್ಯವಸ್ಥೆಗಳನ್ನು ಸ್ವೀಕರಿಸುವ ಮೂಲಕ ಹೂಡಿಕೆದಾರರೊಂದಿಗೆ ಸಾಮಾನ್ಯ ನೆಲೆಯನ್ನು ಕಂಡುಕೊಂಡಿವೆ ” ಎಂದು ವರದಿ ಹೇಳುತ್ತದೆ. ಆಕ್ಸ್ ಫಾಮ್
ಸಾರ್ವತ್ರಿಕವಾಗಿರಬೇಕಾದ ಮೂಲಭೂತ ಸಾರ್ವಜನಿಕ ಸೇವೆಗಳನ್ನು ಖಾಸಗಿ ಲಾಭ ಗಳಿಸುವ ತರ್ಕಕ್ಕೆ ತುರುಕುವುದು, ಅಂಚಿನಲ್ಲಿರುವ ಮತ್ತು ಐತಿಹಾಸಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಈ ಸೇವೆಗಳನ್ನು ನಿರಾಕರಿಸಿದೆ ಮತ್ತು ಅಸಮಾನತೆಗಳನ್ನು ಇನ್ನಷ್ಟು ಹದಗೆಡಿಸಿದೆ.
ಜಾಗತಿಕ ಹವಾಮಾನ ಬಿಕ್ಕಟ್ಟನ್ನು ಉಂಟುಮಾಡಿರುವ ವಿಶೇಷವಾಗಿ ಪಳೆಯುಳಿಕೆ ಇಂಧನ ಉದ್ಯಮದ ಕಾರ್ಪೊರೇಶನ್ ಗಳು, ಬಡತನ ಮತ್ತು ಅಸಮಾನತೆಯನ್ನು ಉಲ್ಬಣಗೊಳಿಸುವ ಮಾರುಕಟ್ಟೆ ಆಧಾರಿತ ಸುಳ್ಳು ಪರಿಹಾರಗಳನ್ನು ಮುಂದಿಡುತ್ತವೆ. ಪಳೆಯುಳಿಕೆ ಇಂಧನ ಕಂಪನಿಗಳು ಹವಾಮಾನ ವಿಜ್ಞಾನವನ್ನು ನಿಗ್ರಹಿಸಿವೆ ಮತ್ತು ನೀತಿಯ ಮೇಲೆ ಪ್ರಭಾವ ಬೀರಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಲಾಬಿ ಮಾಡಿವೆ, ಪರಿಸರವನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಂಡ ದೇಶಗಳನ್ನು ಬೆದರಿಸಲು ಅವರು “ಕಾನೂನುಕ್ರಮ ಭಯೋತ್ಪಾದನೆ ” ಅನ್ನು ಬಳಸಿವೆ.
“ಎಲ್ಲರಿಗೂ ಸಲ್ಲುವ ಆರ್ಥಿಕತೆ” ಯನ್ನು ನಿರ್ಮಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಕ್ಸ್ ಫ್ಯಾಮ್ ನ ವರದಿಯು ಸರ್ಕಾರಗಳಿಗೆ ಕರೆ ನೀಡುತ್ತದೆ. ಆರೋಗ್ಯ ರಕ್ಷಣೆ ಮತ್ತು ಶಿಕ್ಷಣದಂತಹ ಪ್ರಮುಖ ಸೇವೆಗಳನ್ನು ಸಾರ್ವತ್ರಿಕವಾಗಿ ಒದಗಿಸಲು ಹಾಗೂ ಇಂಧನ ಮತ್ತು ಸಾರಿಗೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾರ್ವಜನಿಕ ಏಕಸ್ವಾಮ್ಯ ಅಥವಾ ಸಾರ್ವಜನಿಕ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು “ಪ್ರಭುತ್ವವನ್ನು ಪುನರುಜ್ಜೀವನಗೊಳಿಸುವುದು” ಇದರಲ್ಲಿ ಸೇರಿದೆ. ಆಕ್ಸ್ ಫಾಮ್
“ವ್ಯಾಪಾರವನ್ನು ಪ್ರಜಾಪ್ರಭುತ್ವಗೊಳಿಸಲು” ಮತ್ತು “ಪೇಟೆಂಟ್ ನಿಯಮಗಳ ದುರುಪಯೋಗ”, ಸೇರಿದಂತೆ ಕಾರ್ಪೋರೇಶನ್ ಗಳ ಶಕ್ತಿಗ ಕಡಿವಾಣ ಹಾಕಲು ಖಾಸಗಿ ಏಕಸ್ವಾಮ್ಯಗಳನ್ನು ಒಡೆಯುವಂತೆ, ಇದು ಪ್ರಭುತ್ವಗಳೀಗೆ ಕರೆ ನೀಡುತ್ತದೆ. ವೇತನವನ್ನು ರಕ್ಷಿಸಲು ಶಾಸನಗಳನ್ನು ಜಾರಿಗೆ ತರುವುದು ಮತ್ತು ಶಾಶ್ವತ ಸಂಪತ್ತು ಮತ್ತು ಹೆಚ್ಚುವರಿ ಲಾಭ ತೆರಿಗೆಗಳನ್ನೂ ಒಳಗೊಂಡಂತೆ ಕಾರ್ಪೋರೇಶನ್ ಗಳು ಮತ್ತು ಶ್ರೀಮಂತ ವ್ಯಕ್ತಿಗಳ ಮೇಲೆ ತೆರಿಗೆಗಳನ್ನು ಹೇರುವುದನ್ನು ಮಾಡಬೇಕು ಎಂದೂ ವರದಿ ಕರೆ ನೀಡುತ್ತದೆ. ಆಕ್ಸ್ ಫಾಮ್
ಇದನ್ನು ನೋಡಿ : ಕೆಮಿಕಲ್ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು