ಮಂಗಳೂರು ಜೈಲಿನಲ್ಲಿ 40ಕ್ಕೂ ಹೆಚ್ಚು ಕೈದಿಗಳಿಗೆ ಫುಡ್ ಪಾಯಿಸನ್: ವಾಂತಿ-ಭೇದಿ, ಓರ್ವನ ಸ್ಥಿತಿ ಗಂಭೀರ

ಮಂಗಳೂರು: ಫುಡ್ ಪಾಯಿಸನ್ .​​ ಆಗಿ ಹೊಟ್ಟೆ ನೋವಿನಿಂದ 15 ಕೈದಿಗಳು ನರಳಾಡಿರುವಂತಹ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಏಕಾಏಕಿ ವಾಂತಿ ಮಾಡುತ್ತಾ ಹೊಟ್ಟೆ ನೋವಿನಿಂದ ಕೈದಿಗಳು ನರಳಾಡಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಕೈದಿಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಸ್ವಸ್ಥ ಕೈದಿಗಳನ್ನ ಸಹ ಕೈದಿಗಳು ತಾವೇ ಹೊತ್ತುತಂದಿದ್ದಾರೆ. ಈ ವೇಳೆ ನಾವು ಆಸ್ಪತ್ರೆಗೆ ಹೋಗುತ್ತೇವೆ ಎಂದು ಕೈದಿಗಳು ಪಟ್ಟು‌ ಹಿಡಿದಿದ್ದರು. ಆಕ್ರೋಶಗೊಂಡಿದ್ದ ಕೈದಿಗಳನ್ನ ವಾಹನದಿಂದ ಕೆಳಗಿಳಿಸಿದ ಪೊಲೀಸರು, ಅಸ್ವಸ್ಥ ಕೈದಿಗಳನ್ನ ವೆನ್ಲಾಕ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಘಟನೆ ಬಳಿಕ ಜೈಲಿನಲ್ಲಿ ಪೊಲೀಸರ ವಿರುದ್ಧ ಕೈದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮೈಸೂರು| 3 ಬಾಲಕೀಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ

ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಇಂದು ಮಧ್ಯಾಹ್ನ ಉಪಹಾರ ಸೇವಿಸಿದ ಬಳಿಕ ಕೆಲವರು ಹೊಟ್ಟೆ ನೋವು ಎಂದು ಕೈದಿಗಳು ದೂರು ನೀಡಿದ್ದಾರೆ. ಸಂಜೆ 4-30ರ ಬಳಿಕ 40ಕ್ಕೂ ಅಧಿಕ ಕೈದಿಗಳಿಗೆ ಹೊಟ್ಟೆ ನೋವು ಸೇರಿದಂತೆ ವಾಂತಿ ಭೇದಿ ಶುರುವಾಗಿದೆ. ನಮ್ಮ ಪೊಲೀಸ್ ವ್ಯಾನ್ ಮೂಲಕ ಎಲ್ಲಾ ಕೈದಿಗಳನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 45 ಜನರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಪಡೆದು ಜೈಲಿಗೆ ಭೇಟಿ ನೀಡಿದ್ದಾರೆ. ನೀರಿನ ಸ್ಯಾಂಪಲ್ ಹಾಗೂ ಆಹಾರವನ್ನ ಪರಿಶೀಲನೆ ಮಾಡಿದ್ದಾರೆ. ಒಬ್ಬ ಕೈದಿ ತುಂಬಾ ಗಂಭೀರ ಸ್ಥಿತಿಯಲ್ಲಿದ್ದು, ಐಸಿಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು 44 ಜನ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಬೆಳಗ್ಗಿನ ಆಹಾರದಲ್ಲಿ ಫುಡ್ ಕಂಟಾಮಿನೇಷನ್ ಆಗಿರುವ ಮಾಹಿತಿ ಇದೆ. ಜೈಲಿನ ಮುಖ್ಯ ಅಧೀಕ್ಷಕ ಕೈದಿಗಳಿಗೆ ಅವಲಕ್ಕಿ, ಸಾಂಬಾರ್, ಅನ್ನ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಆಹಾರದಿಂದ ಸಮಸ್ಯೆ ಎಂದು ಹೇಳುತ್ತಿದ್ದಾರೆ. ವಿವಿಧ ವಾರ್ಡ್​ನ ಸುಮಾರು 350 ಕೈದಿಗಳ ಪೈಕಿ 45 ಜನಕ್ಕೆ ಸಮಸ್ಯೆ ಎದುರಾಗಿದೆ. ಈ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *