ಮಹಿಳಾ ಎಸ್‌ಪಿಯನ್ನು ನಾಯಿಗೆ ಹೋಲಿಸಿ ಹೀಯಾಳಿಕೆ; ಶಾಸಕ ಬಿಪಿ ಹರೀಶ್ ವಿರುದ್ಧ ಆಕ್ರೋಶ

ದಾವಣಗೆರೆ: ನಗರದಲ್ಲಿ ಸೆಪ್ಟೆಂಬರ್‌ 1ರಂದು ಮಾತನಾಡಿದ ಬಿಜೆಪಿ ಶಾಸಕ ಬಿಪಿ ಹರೀಶ್, ಮಹಿಳಾ ಎಸ್‌ಪಿ ಉಮಾ ಪ್ರಶಾಂತರನ್ನು ನಾಯಿಗೆ ಹೋಲಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ದಾವಣಗೆರೆ ಎಸ್‌ಪಿ ಪೊಮೇರಿಯನ್ ನಾಯಿ ತರಾ ವರ್ತನೆ ಮಾಡ್ತಾರೆ. ಶಾಮನೂರು ಫ್ಯಾಮಿಲಿಗೆ ಪೊಮೇರಿಯನ್ ನಾಯಿ ತರಾ ವರ್ತನೆ ಮಾಡ್ತಾರೆ ಎನ್ನುವ ಮೂಲಕ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ವಿರುದ್ಧ ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ಕಿಡಿಕಾರಿದರು. ಈ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮಹಿಳಾ ಪಿಜಿಗೆ ಅಪರಿಚಿತ ವ್ಯಕ್ತಿ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ

“ನಮ್ಮನ್ನು ನೋಡಿದ್ರೆ ಮುಖ ತಿರುಗಿಸಿಕೊಳ್ಳುತ್ತಾರೆ”

“ನಾವು ಯಾವುದೇ ಸಭೆಗೆ ಬಂದ್ರೆ ನಮ್ಮ ಕಡೆ ತಿರುಗಿಯು ಕೂಡ ನೋಡಲ್ಲ, ಆದರೆ ಅವರ ಮನೆ ಮುಂದೆ ಗಂಟೆಗಟ್ಟಲೆ ಕಾದು ಪೊಮೇರಿಯನ್ ನಾಯಿ ತರಾ ಇರ್ತಾರೆ.

ಹರಿಹರ ಸಭೆಗೆ ಬಂದಾಗ ನಮ್ಮ ಕಡೆ ನೋಡದೆ ಮುಖ ತಿರುಗಿಸಿಕೊಂಡು ಕೂತರು. ಕೂರಬೇಕಾ ಬೇಡ್ವಾ ಅಂತ ಪಕ್ಕದಲ್ಲಿ ಮುಖ ತಿರುಗಿಸಿಕೊಂಡು ಕೂತರು. ನಾನು ಪಕ್ಕದಲ್ಲೆ ಇದ್ದ DYSP ಗೆ ಇವೇರೆನು ಶಾಮನೂರು ಮನೆಯ ಪೊಮೇರಿಯನ್ ನಾಯಿನಾ ಅಂತ ಕೇಳಿದೆ. ಎಸ್ಪಿ ಅವರಿಗೆ ಕೇಳುವ ಹಾಗೆ ಹೇಳಿದೆ ಅಂತ ಅಸಮಾಧಾನ ಹೊರಾಹಾಕಿದ್ದಾರೆ” ಎಂದು ಎಸ್ಪಿ ಉಮಾ ಪ್ರಶಾಂತ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸುವ ಭರದಲ್ಲಿ ಹರೀಶ್ ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ನೋಡಿ: ಘನತೆಯ ಬದುಕು ನಮ್ಮ ಹಕ್ಕು | ಜನವಾದಿ ಮಹಿಳಾ ಸಂಘಟನೆ ; 12ನೇ ರಾಜ್ಯ ಸಮ್ಮೇಳನJanashakthi Media

Donate Janashakthi Media

Leave a Reply

Your email address will not be published. Required fields are marked *