ನವದೆಹಲಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸಾಲಿನಲ್ಲಿ ನಿಲ್ಲದೆ, ಮುಂದೆ ಹೋಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ವಿವಾದಕ್ಕೆ ಕಾರಣವಾಗಿ, ಇದೀಗ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ನಟಿ
ಮುಂಬೈ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತಿದ್ದಾಗ, ಕರೀನಾ ನೇರವಾಗಿ ಮುಂದೆ ಹೋಗಿ ಒಳ ಪ್ರವೇಶಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸೆಲೆಬ್ರಿಟಿಗಳಿಗೆ ಈ ರೀತಿಯ ವಿಶೇಷ ಹಕ್ಕು ಯಾರು ಕೊಟ್ಟರು?” ಎಂದು ಕೆಲವರು ಪ್ರಶ್ನಿಸಿದ್ದು, ಸಾಮಾನ್ಯ ಜನರಿಗೆ ಒಂದು, ಸೆಲೆಬ್ರಿಟಿಗಳಿಗೆ ಒಂದು ನಿಯಮವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ದಲಿತ ವಿದ್ಯಾರ್ಥಿನಿಗೆ ಕಿರುಕುಳ; ಗುಲ್ಬರ್ಗಾ ವಿ.ವಿ ಯ ಸಿಪಾಯಿ ಹುದ್ದೆಯ ಸಿಬ್ಬಂದಿ ವಜಾ
ಇನ್ನೂ ಕೆಲವರು ಇದು “VIP ಸಂಸ್ಕೃತಿ”ಗೆ ಉದಾಹರಣೆ ಎಂದು ಟೀಕಿಸಿದ್ದು, ಸಾಲಿನಲ್ಲಿ ಕಾಯುತ್ತಿದ್ದವರಿದೆ ಆಗಿರುವ ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇನ್ನೂ ಕೆಲವರು ಕರೀನಾಳ ಪರವೂ ಮಾತನಾಡಿದ್ದಾರೆ. ಭದ್ರತಾ ಕಾರಣಗಳಿಂದ ಅಥವಾ ಜನಸಮೂಹ ನಿಯಂತ್ರಣಕ್ಕಾಗಿ ಸೆಲೆಬ್ರಿಟಿಗಳಿಗೆ ಕೆಲವೊಮ್ಮೆ ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ, ಏಪ್ರಿಲ್.12ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ vs ಆರ್ಸಿಬಿ ಮ್ಯಾಚ್ ವೇಳೆ ಕರೀನಾ ಅವರ ವರ್ತನೆಯೂ ವೈರಲ್ ಆಗುತ್ತಿದೆ.
ಮ್ಯಾಚ್ ನೋಡಲು ಬಂದಿದ್ದ ಕರೀನಾ ಅವರು ಪಂದ್ಯ ನೋಡದೆ, ಮೊಬೈಲ್ ಬಳಕೆಯಲ್ಲಿ ಬ್ಯುಸಿಯಾಗಿರುವುದು ಕಂಡು ಬಂದಿತ್ತು. ಅಲ್ಲದೆ, ಮೈದಾನದಲ್ಲಿ ಇರುವಾಗ ಮುಂಬೈ ಇಂಡಿಯನ್ಸ್ ಜರ್ಸಿ ಧರಿಸಿರುವುದು, ಹೊರ ಹೋಗುವಾಗ ಶರ್ಟ್ ಬದಲಿಸಿರುವುದು ಕಂಡು ಬಂದಿತ್ತು. ಇದೂ ಕೂಡ ಚರ್ಚೆಗೆ ಕಾರಣವಾಗಿದೆ.
ಇದನ್ನೂ ನೋಡಿ: ಭಾವನೆಗಳ ಆಳವನ್ನು ಸ್ಪರ್ಶಿಸುವ ಮಿಥಿಲೆಯ ಮಾವಿನ ಮರ – ವಿನಯಾ ಒಕ್ಕುಂದ Janashakthi Media
