ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಚುನಾವಣೆಗೆ ನಮ್ಮಕುಟುಂಬದವರು ಸ್ಪರ್ಧಿಸುವುದಿಲ್ಲ ಎಂದು ಫೆಡರೇಷನ್ ನಿರ್ಗಮಿತ ಅಧ್ಯಕ್ಷ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
ಬ್ರಿಜ್ ಭೂಷಣ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡಿ ಕುಸ್ತಿ ಫೆಡರೇಷನ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ನಮ್ಮ ಕುಟುಂಬದಿಂದ ಯಾರೂ ಕೂಡ ನಾಮಪತ್ರ ಸಲ್ಲಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಆಗಸ್ಟ್-1 ರಿಂದ ನಂದಿನಿ ಹಾಲು, ಹೋಟೆಲ್ ಊಟ-ತಿಂಡಿ,ಕಾಫಿ-ಟೀ ಬೆಲೆ ಏರಿಕೆ
ಬ್ರಿಜ್‌ಭೂಷಣ್ ಸಿಂಗ್ ರವರು ಚುನಾವಣೆಗೆ ಸ್ಪರ್ಧಿಸಲಿರುವ ತಮ್ಮ ನಿಷ್ಠ ಗುಂಪಿನ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಬ್ರಿಜ್‌ಭೂಷಣ್,ತಮ್ಮ ಪರವಾಗಿರುವ ರಾಜ್ಯ ಕುಸ್ತಿ ಸಂಸ್ಥೆಗಳ ಪ್ರತಿನಿಧಿಗಳ ಜತೆ ಭಾನುವಾರ ಸಭೆ ನಡೆಸಿದ್ದರು.ಡಬ್ಲ್ಯುಎಪ್‌ಐಗೆ ಆಗಸ್ಟ್ 12ರಂದು ಚುನಾವಣೆ ನಿಗದಿ ಆಗಿದೆ.
ಡಬ್ಲ್ಯುಎಫ್‌ಐಗೆ ಮಾನ್ಯತೆ ಹೊಂದಿರುವ 25 ರಾಜ್ಯ ಕುಸ್ತಿ ಸಂಸ್ಥೆಗಳಲ್ಲಿ 22 ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬ್ರಿಜ್‌ಭೂಷಣ್ ಈಗಾಗಲೇ 12 ವರ್ಷ ಅಧಿಕಾರಿ ಪೂರೈಸಿರುವ ಕಾರಣ ಸ್ಪರ್ಧಿಸುವಂತಿಲ್ಲ.ಬ್ರಿಜ್ ಭೂಷಣ್ ಮತ್ತು ಅವರ ಪುತ್ರ ಕರಣ್ ಈ ಬಾರಿ ಕಣದಲ್ಲಿರುವುದಿಲ್ಲ. ಅವರ ಅಳಿಯ ವಿಶಾಲ್ ಸಿಂಗ್ ಕೂಡಾ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಬಿಜ್ ಭೂಷಣ್ ಅವರು ಎದುರಿದುತ್ತಿದ್ದಾರೆ.