ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 68 ಸಾಧಕರಿಗೆ,10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ; ಇಲ್ಲಿದೆ ವಿಜೇತರ ವಿವರ

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ 10 ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ. ಕರ್ನಾಟಕ 

ಮಂಗಳವಾರ ಅಕ್ಟೋಬರ್-31 ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರವು ರಂಗಭೂಮಿಯಲ್ಲಿ ಚಿದಂಬರರಾವ್ ಜಂಬೆ, ಯಕ್ಷಗಾನದಲ್ಲಿ ಕೆ.ಲೀಲಾವತಿ ಬೈಪಾಡಿತ್ತಾಯ, ಸಿನಿಮಾ ಕ್ಷೇತ್ರದಲ್ಲಿ ಡಿಂಗ್ರಿ ನಾಗರಾಜ್ ಹಾಗೂ ಬ್ಯಾಂಕ್‌ ಜನಾರ್ಧನ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಕೆ.ಷರೀಫಾ ಪ್ರೊ. ಸಿ.ನಾಗಣ್ಣ, ಸುಬ್ಬು ಹೊಲೆಯಾರ್, ಪತ್ರಿಕೋದ್ಯಮದಲ್ಲಿ ದಿನೇಶ ಆಮೀನ್‌ಮಟ್ಟು, ಮಾಯಾ ಶರ್ಮ, ಜಾನಪದ ಕ್ಷೇತ್ರದಲ್ಲಿ ಹುಸೇನಾಬಿ ಬುಡೆನ್​ ಸಾಬ್​ ಸಿದ್ಧಿ, ಶಿವಂಗಿ ಶಣ್ಮರಿ, ಮಹದೇವು, ನರಸಪ್ಪಾ, ಶಕುಂತಲಾ ದೇವಲಾನಾಯಕ, ಚೌಡಮ್ಮ, ಹೆಚ್​. ಕೆ.ಕಾರಮಂಚಪ್ಪ, ವಿಭೂತಿ ಗುಂಡಪ್ಪ ಸೇರಿದಂತೆ 68 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಮೆಡಲ್ ಒಳಗೊಂಡಿರಲಿದೆ. ‌

ಇದನ್ನೂ ಓದಿ:ಕರ್ನಾಟಕ-50ರ ಸಂಭ್ರಮ | ಕನ್ನಡ ರಾಜ್ಯೋತ್ಸವದಲ್ಲಿ ಈ 5 ಹಾಡುಗಳು ಕಡ್ಡಾಯ!

ಶಿವಮೊಗ್ಗದ ಕರ್ನಾಟಕ ಸಂಘ, ಬೆಂಗಳೂರಿನ ಮಿಥಿಕ್ ಸೊಸೈಟಿ, ದಾವಣಗೆರೆಯ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ ಸೇರಿದಂತೆ ಹತ್ತು ಸಂಸ್ಥೆಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ.

10 ಸಂಘ ಸಂಸ್ಥೆಗಳೂ ಸೇರಿದಂತೆ ಒಟ್ಟು 68 ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಘೋಷಣೆ ಮಾಡಲಾಗಿದೆ.  ಈ ಬಾರಿ ಜಾನಪದ ಕ್ಷೇತ್ರದಲ್ಲಿ 9 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಸಮಾಜಸೇವೆ ಕ್ಷೇತ್ರದಲ್ಲಿ 5 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಹುಚ್ಚಮ್ಮ ಬಸಪ್ಪ ಚೌದ್ರಿ, ಚಾರ್ಮಾಡಿ ಹಸನಬ್ಬ, ಕೆ.ರೂಪಾ ನಾಯಕ್, ನಿಜಗುಣಾನಂದ ಸ್ವಾಮೀಜಿ, ಜಿ.ನಾಗರಾಜು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಡಳಿತ ಕ್ಷೇತ್ರದಲ್ಲಿ ಜಿ.ವಿ.ಬಲರಾಮ್​ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಜಿ.ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ ಅವರಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರೊ. ಸಿ. ನಾಗಣ್ಣ, ಹೆಚ್​.ಕೆ. ಸುಬ್ಬಯ್ಯ, ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ.ಷರೀಫಾಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ರಂಗಭೂಮಿ ಕ್ಷೇತ್ರ:

ಶಿಕ್ಷಣ ಕ್ಷೇತ್ರದಲ್ಲಿ ಮೂವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ರಾಮಪ್ಪ ಹವಳೆ, ಕೆ. ಚಂದ್ರಶೇಖರ್, ಕೆ.ಟಿ. ಚಂದ್ರು ಪ್ರಶಸ್ತಿ ವಿಜೇತರಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಟಿ.ಎಸ್​. ದಿವ್ಯಾ, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ:ಕರ್ನಾಟಕದ ಮೇಲೆ ಪ್ರೀತಿ ಏಕಿಲ್ಲ| ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಕ್ಷೇತ್ರವಾರು ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:

ಚಲನಚಿತ್ರ ಕ್ಷೇತ್ರದಲ್ಲಿ ಇವರಿಗೆಲ್ಲ ರಾಜ್ಯೊತ್ಸವ ಪ್ರಶಸ್ತಿ

  • ಡಿಂಗ್ರಿ ನಾಗರಾಜ್
  • ಬಿ. ಜನಾರ್ಧನ್ (ಬ್ಯಾಂಕ್ ಜನಾರ್ಧನ್)

ರಂಗಭೂಮಿ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಎ.ಜಿ. ಚಿದಂಬರ ರಾವ್ ಜಂಬೆ
  • ಪಿ. ಗಂಗಾಧರ ಸ್ವಾಮಿ
  • ಹೆಚ್.ಬಿ.ಸರೋಜಮ್ಮ
  • ತಯ್ಯಬಖಾನ್ ಎಂ.ಇನಾಮದಾರ
  • ಡಾ.ವಿಶ್ವನಾಥ್ ವಂಶಾಕೃತ ಮಠ
  • ಪಿ.ತಿಪ್ಪೇಸ್ವಾಮಿ

ಸಂಗೀತ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಡಾ.ನಯನ ಎಸ್.ಮೋರೆ
  • ಲೀಲಾ ಎಂ ಕೊಡ್ಲಿ
  • ಶಬ್ಬೀರ್ ಅಹಮದ್
  • ಡಾ.ಎಸ್ ಬಾಳೇಶ ಭಜಂತ್ರಿ

ಶಿಲ್ಪ ಕಲೆ ಮತ್ತು ಚಿತ್ರಕಲೆ ಕ್ಷೇತ್ರ

  • ಟಿ.ಶಿವಶಂಕರ್
  • ಕಾಳಪ್ಪ ವಿಶ್ವಕರ್ಮ
  • ಮಾರ್ಥಾ ಜಾಕಿಮೋವಿಚ್
  • ಪಿ.ಗೌರಯ್ಯ

ಯಕ್ಷಗಾನ & ಬಯಲಾಟ ಕ್ಷೇತ್ರ

  • ಅರ್ಗೋಡು ಮೋಹನದಾಸ ಶೆಣೈ
  • ಕೆ. ಲೀಲಾವತಿ ಬೈಪಾಡಿತ್ತಾಯ
  • ಕೇಶಪ್ಪ ಶಿಳ್ಳಿಕ್ಯಾತರ
  • ದಳವಾಯಿ ಸಿದ್ದಪ್ಪ

ಜಾನಪದ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಹುಸೇನಾಬಿ ಬುಡೆನ್ ಸಾಬ್ ಸಿದ್ದಿ
  • ಶಿವಂಗಿ ಶಣ್ಮರಿ
  • ಮಹದೇವು
  • ನರಸಪ್ಪಾ
  • ಶಕುಂತಲಾ ದೇವಲಾಯಕ
  • ಎಚ್‌.ಕೆ ಕಾರಮಂಚಪ್ಪ
  • ಶಂಭು ಬಳಿಗಾರ
  • ವಿಭೂತಿ ಗುಂಡಪ್ಪ
  • ಚೌಡಮ್ಮ

ಆಡಳಿತ ಕ್ಷೇತ್ರ: ಜಿವಿ ಬಲರಾಮ್

ವೈದ್ಯಕೀಯ ಕ್ಷೇತ್ರ: ಡಾ. ಸಿ ರಾಮಚಂದ್ರ, ಡಾ. ಪ್ರಶಾಂತ್ ಶೆಟ್ಟಿ.

ಸಾಹಿತ್ಯ ಕ್ಷೇತ್ರ: ಪ್ರೊ. ಸಿ ನಾಗಣ್ಣ, ಸುಬ್ಬು ಹೊಲೆಯಾರ್ (ಹೆಚ್‌ಕೆ ಸುಬ್ಬಯ್ಯ), ಸತೀಶ್ ಕುಲಕರ್ಣಿ, ಲಕ್ಷ್ಮೀಪತಿ ಕೋಲಾರ, ಪರಪ್ಪ ಗುರುಪಾದಪ್ಪ ಸಿದ್ದಾಪುರ, ಡಾ. ಕೆ ಷರೀಫಾ.

ಶಿಕ್ಷಣ ಕ್ಷೇತ್ರ: ರಾಮಪ್ಪ (ರಾಮಣ್ಣ) ಹವಳೆ, ಕೆ ಚಂದ್ರಶೇಖರ್, ಕೆಟಿ ಚಂದು.

ಕ್ರೀಡಾ ಕ್ಷೇತ್ರ: ದಿವ್ಯ ಟಿಎಸ್, ಅದಿತಿ ಅಶೋಕ್, ಅಶೋಕ್ ಗದಿಗೆಪ್ಪ ಏಣಗಿ.

ನ್ಯಾಯಾಂಗ ಕ್ಷೇತ್ರ: ಜಸ್ಟೀಸ್‌, ವಿ ಗೋಪಾಲಗೌಡ.

ಕೃಷಿ-ಪರಿಸರ ಕ್ಷೇತ್ರ:
ಸೋಮನಾಥರೆಡ್ಡಿ ಪೂರ್ಮಾ, ದ್ಯಾವನಗೌಡ ಟಿ. ಪಾಟೀಲ, ಶಿವರೆಡ್ಡಿ ಹನುಮರೆಡ್ಡಿ ವಾಸನ.

ಸಂಕೀರ್ಣ ಕ್ಷೇತ್ರ: ಎಎಂ ಮದರಿ, ಹಾಜಿ ಅಬ್ದುಲ್ಲಾ ಪರ್ಕಳ, ಮಿಮಿಕ್ರಿ ದಯಾನಂದ್, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಕೊಡನ ಪೂವಯ್ಯ ಕಾರ್ಯಪ್ಪ.

ಮಾಧ್ಯಮ ಕ್ಷೇತ್ರ: ದಿನೇಶ ಅಮೀನ್‌ಮಟ್ಟು, ಜವರಪ್ಪ, ಮಾಯಾ ಶರ್ಮ, ರಫೀ ಭಂಡಾರ.

ವಿಜ್ಞಾನ/ ತಂತ್ರಜ್ಞಾನ ಕ್ಷೇತ್ರ:
ಎಸ್. ಸೋಮನಾಥ್ ಶ್ರೀಧರ್ ಪನಿಕರ್, ಪ್ರೊ. ಗೋಪಾಲನ್ ಜಗದೀಶ್

ಹೊರನಾಡು/ ಹೊರದೇಶ ಕ್ಷೇತ್ರ: ಸೀತಾರಾಮ ಅಯ್ಯಂಗಾರ್, ದೀಪಕ್ ಶೆಟ್ಟಿ, ಶಶಿಕಿರಣ್ ಶೆಟ್ಟಿ.

ಸ್ವಾತಂತ್ರ್ಯ ಹೋರಾಟಗಾರ ಕ್ಷೇತ್ರ: ಪುಟ್ಟಸ್ವಾಮಿ ಗೌಡ.

ಸಮಾಜಸೇವೆ ಕ್ಷೇತ್ರ, ರಾಜ್ಯೊತ್ಸವ ಪ್ರಶಸ್ತಿ

  • ಹುಚ್ಚಮ್ಮ ಬಸಪ್ಪ ಚೌದ್ರಿ
  • ಚಾರ್ಮಾಡಿ ಹಸನಬ್ಬ
  • ಕೆ.ರೂಪ್ಲಾ ನಾಯಕ್
  • ಪೂಜ್ಯ ನಿಜಗುಣಾನಂದ ಮಹಾಸ್ವಾಮಿ ನಿಷ್ಕಲ ಮಂಟಪ
  • ನಾಗರಾಜು.ಜಿ

ಆಡಳಿತ ಕ್ಷೇತ್ರ

  • ಬಲರಾಮ್, ತುಮಕೂರು

ವೈದ್ಯಕೀಯ ಕ್ಷೇತ್ರ

  • ಡಾ.ಸಿ. ರಾಮಚಂದ್ರ, ಬೆಂಗಳೂರು
  • ಡಾ.ಪ್ರಶಾಂತ್, ದ.ಕನ್ನಡ

ಸಾಹಿತ್ಯ ಕ್ಷೇತ್ರ

  • ಪ‌್ರೊ. ಸಿ.ನಾಗಣ್ಣ, ಚಾಮರಾಜನಗರ
  • ಸುಬ್ಬು ಹೊಲೆಯಾರ್, ಹಾಸನ
  • ಸತೀಶ್ ಕುಲಕರ್ಣಿ, ಹಾವೇರಿ

ಶಿಕ್ಷಣ ಕ್ಷೇತ್ರ

ರಾಮಪ್ಪ, ರಾಯಚೂರು ಕೆ.ಚಂದ್ರಶೇಖರ್, ಕೋಲಾರ ಕೆ.ಟಿ ಚಂದು, ಮಂಡ್ಯ

ವಿಡಿಯೋ ನೋಡಿ:ಕಾರ್ನಾಡ್‌ ನೆನಪು : ಜನಪರ ಗಾಯಕ ಜನ್ನಿಯವರಿಂದ ರಂಗಗೀತೆಗಳುJanashakthi Media

Donate Janashakthi Media

Leave a Reply

Your email address will not be published. Required fields are marked *