ರಾಯಚೂರು | ನವೋದಯ ದಂತ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ಉಪಕರಣಕ್ಕೆ ಚಾಲನೆ

ರಾಯಚೂರು: ‘ನಗರದ ನವೋದಯ ದಂತ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದಲ್ಲಿಅಳವಡಿಸಿದ ನೂತನ ಉಪಕರಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು,  ‘ಪ್ಯಾರಾನಾಸಲ್ ಸೈನಸ್‌ಗಳು, ಮಧ್ಯ ಕಿವಿಯ ರೋಗಶಾಸ್ತ್ರದ ವಾಯುಮಾರ್ಗ ವಿಶ್ಲೇಷಣೆ ನಿರ್ಣಯಿಸಲು ಇಎನ್‌ಟಿ ವಿಭಾಗದಲ್ಲಿಯೂ ಈ ಯಂತ್ರ ಉಪಯುಕ್ತವಾಗಿದೆ’ ಎಂದು ಹೇಳಿದರು. ರಾಯಚೂರು

ಇದನ್ನೂ ಓದಿ: ಬೀದರ್‌ ಮಹಾನಗರ ಪಾಲಿಕೆಯ ನಾಮಫಲಕ ಕನ್ನಡದಲ್ಲಿ ಬರೆಸಬೇಕು: ಸುರೇಶ ಚನಶೆಟ್ಟಿ ಒತ್ತಾಯ

ಮುಖದ ಮೂಳೆ ಮುರಿತ, ಇಂಪ್ಲಾಂಟ್ ಪ್ಲಾನಿಂಗ್, ದವಡೆಗಳ ಆರ್ಥೊಡೆಂಟಿಕ್ ಬೆಳವಣಿಗೆಯ ಮೌಲ್ಯಮಾಪನ ನಿರ್ಣಯಿಸಲು ಸಹಾಯಕವಾಗುವ ಅತ್ಯಾಧುನಿಕ 3ಡಿ ಡೈಮೆನ್ಷನಲ್ ಕೋನ್ ಬೀಮ್ ಕಂಪ್ಯೂಟರೈಸ್ಡ್ ಟೊಮೊಗ್ರಫಿ ಇಮೇಜಿಂಗ್ ಉಪಕರಣ ಅಳವಡಿಸಲಾಗಿದೆʼ ಎಂದು ನವೋದಯ ಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಡಾ.ಅಮೃತ್ ರೆಡ್ಡಿ ಹೇಳಿದರು. ರಾಯಚೂರು

ನವೋದಯ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಎಸ್.ಆರ್. ರೆಡ್ಡಿ, ರಜಿಸ್ಟ್ರಾರ್ ಡಾ.ಟಿ. ಶ್ರೀನಿವಾಸ, ಡಾ.ವಿಜಯ ಕುಮಾರ, ನವೋದಯ ದಂತ ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ ಕಟ್ಟಿ, ಡಾ. ದೇವಾನಂದ, ಓರಲ್ ಮೆಡಿಸಿನ್ ಮತ್ತು ರೇಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ವಿಜೇಂದ್ರ ಜೋಶಿ, ವೈದ್ಯಕೀಯ ಅಧೀಕ್ಷಕ ಡಾ.ಅರುಣ ನಾಯಕ, ಡಾ.ಆನಂದ, ಡಾ.ದೊಡ್ಡಯ್ಯ, ಪ್ರೊ. ಎಚ್.‌ಟಿ. ಸುತನಕುಮಾರಿ, ಡಾ.ಉಮಾಕಾಂತ ದೇವರಮಣಿ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *