ಕ್ಷೇತ್ರ ಪುನರ್‌ವಿಂಗಡಣ ಆಯೋಗದ ವರದಿಗೆ ವಿರೋಧ: ಮೇ 9ರಂದು ಸಭೆ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ ವಿಂಗಡಣ ಆಯೋಗವು ತನ್ನ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ಸಲ್ಲಿಕೆ ಮಾಡಿದ್ದು, ವಿವಿಧ ಪಕ್ಷಗಳ ಜಂಟಿ ಮುಖಂಡರು ಹೇಳಿಕೆ ಆಯೋಗದ ವರದಿಯನ್ನು ನೀಡಿ ತಿರಸ್ಕರಿಸಿದೆ.

ಕಾಂಗ್ರೆಸ್‌, ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್‌ ಪಕ್ಷ (ಸಿಪಿಐ) ಸೇರಿ ಇತರೆ ಪಕ್ಷಗಳನ್ನು ಒಳಗೊಂಡ ಎಪಿಯುಎಂ ಈ ಕುರಿತು ಹೇಳಿಕೆ ನೀಡಿದ್ದು, ‘ಆಯೋಗದ ವರದಿಯು ಅತ್ಯಂತ ಆಕ್ಷೇಪಾರ್ಹ, ಪಕ್ಷಪಾತ ಹಾಗೂ ರಾಜಕೀಯ ಪ್ರೇರಿತವಾಗಿದೆ’ ಎಂದು ಆರೋಪಿಸಿದೆ. ಅಲ್ಲದೇ ಈ ಸಂಬಂಧ ಚರ್ಚಿಸಲು ಮೇ 9ರಂದು ತುರ್ತು ಸಭೆ ಕರೆದಿದೆ.

ಇದನ್ನು ಓದಿ: ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಮರುವಿಂಗಡಣಾ ಆಯೋಗದ ಶಿಫಾರಸುಗಳನ್ನು ತಿರಸ್ಕರಿಸಿ – ಸಿಪಿಐ(ಎಂ) ಪೊಲಿಟ್‌ಬ್ಯುರೊ

ಆಯೋಗವು ಜಮ್ಮು–ಕಾಶ್ಮೀರದ ವಾಸ್ತವ ಸಂಗತಿ, ವಿವಿಧ ಪ್ರದೇಶಗಳ ಜನರ ಅನುಕೂಲತೆ ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಎಪಿಯುಎಂ, ವರದಿಯ ವಿರುದ್ದ ಧ್ವನಿ ಎತ್ತಲು ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘಟನೆಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.

ಆಯೋಗದ ಕರಡು ವರದಿ ಪ್ರಕಟಣೆಯ ನಂತರ ಅಲ್ಪಾವಧಿಯಲ್ಲಿ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ಹಲವು ಮಂದಿ ತಮ್ಮ ಆಕ್ಷೇಪಣೆಗಳು ಮತ್ತು ತಿದ್ದುಪಡಿಗಳನ್ನು ಸಲ್ಲಿಸಿದ್ದವು. ಆದರೆ ಯಾವುದೇ ನೈಜ ಆಕ್ಷೇಪಣೆಗಳು ಅಥವಾ ವಿವರಗಳನ್ನು ಆಯೋಗ ಪರಿಗಣಿಸಲಿಲ್ಲ. ಅತ್ಯಂತ ನೈಜ ಆಕ್ಷೇಪಣೆಗಳನ್ನು ಪರಿಗಣಿಸದೆ ಸಾರ್ವಜನಿಕ ವಿಚಾರಣೆ ಎಂದು ಕಣ್ಣೊರೆಸುವ ತಂತ್ರವನ್ನು ಮಾತ್ರ ಮಾಡಿಲಾಗಿದೆ ಎಂದು ಎಪಿಯುಎಂ ಹೇಳಿಕೆಯಲ್ಲಿ ತಿಳಿಸಿದೆ.

ಆಯೋಗವು ಮೂಲಭೂತ ತತ್ವಗಳು ಮತ್ತು ಮಾನದಂಡಗಳನ್ನು ನಿರ್ಲಕ್ಷಿಸಿದೆ ಮತ್ತು ವಿವಿಧ ಪ್ರದೇಶಗಳು, ವಿಭಾಗಗಳು ಮತ್ತು ಸಮುದಾಯಗಳಿಗೆ “ದೊಡ್ಡ ಅನ್ಯಾಯ” ಮಾಡಿದೆ ಎಂದು ಹೇಳಲಾಗಿದೆ.

Donate Janashakthi Media

Leave a Reply

Your email address will not be published. Required fields are marked *