ವಿರೋಧ ಪಕ್ಷದ ನಾಯಕರು ತುರ್ತಾಗಿ ಬೇಕಾಗಿದ್ದಾರೆ: ಬಿಜೆಪಿ ಕುರಿತು ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಪೂರ್ಣಗೊಂಡು, ಹೊಸ ಸರ್ಕಾರ ರಚನೆಗೊಂಡರೂ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದ ಬಿಜೆಪಿ ಕುರಿತು ರಾಜ್ಯ ಕಾಂಗ್ರೆಸ್‌ ವ್ಯಂಗ್ಯ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ, ಟ್ವಿಟರ್‌ ನಲ್ಲಿ ಟ್ವೀಟ್‌  ಮಾಡಿರುವ ಕಾಂಗ್ರೆಸ್‌ , ಸಿಡಿಗೆ ತಡೆಯಾಜ್ಙೆ ತರದ , ಭ್ರಷ್ಟಚಾರಿಯಲ್ಲದ  ವಿಪಕ್ಷದ ನಾಯಕರೊಬ್ಬರು ತುರ್ತಾಗಿ ಬೇಕಾಗಿದ್ದಾರೆ ಎಂದು ಟ್ಟೀಟ್‌ ಮಾಡುವ ಮೂಲಕ ಹೇಳಿದೆ.

ಟ್ವೀಟರ್‌ ನಲ್ಲಿ ವಿರೋಧ ಪಕ್ಷದ ನಾಯಕರಲ್ಲಿ ಇರಬೇಕಾದ ಲಕ್ಷಣಗಳನ್ನು ಕಾಂಗ್ರೆಸ್‌ ತಿಳಿಸಿದೆ.

ಇದನ್ನೂ ಓದಿ:ಸ್ವಪಕ್ಷದವರಿಂದಲೇ ವಿರೋಧ; ಮಂಡ್ಯ ಜಿಲ್ಲಾ ಉಸ್ತುವಾರಿ ಕಳೆದುಕೊಂಡ ಸಚಿವ ಆರ್‌ ಅಶೋಕ್

ಸಂವಿಧಾನವನ್ನು ತಿಳಿದವರು. ಪ್ರಜಾಪ್ರಭುತ್ವವನ್ನು ಅರಿತವರು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆ. ಸಿಡಿಗೆ ತಡೆಯಾಜ್ಞೆ ತರದವರು, ಭ್ರಷ್ಟಚಾರಿಯಲ್ಲದವರು  ವಿಪಕ್ಷ ನಾಯಕ ಬೇಕಾಗಿದ್ದಾರೆ. ಆರ್‌ಎಸ್‌ಎಸ್‌ ಕೈ ಗೊಂಬೆಯಾಗದವರು, ಕೋಮುವಾದಿ ಅಲ್ಲದವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಪ್‌ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು. ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವದವರು, ತೂಕದ ಮಾತಿನವರು ವಿಪಕ್ಷ ನಾಯಕ ಬೇಕಾಗಿದ್ದಾರೆ. ವಾಟ್ಸಾಪ್‌ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿರಬಾರದು, ಸುಳ್ಳು ಹೇಳಬಾರದು. ಘನತೆಯ ವ್ಯಕ್ತಿತ್ವ, ತೂಕದ ಮಾತಿನವರು ವಿಪಕ್ಷ ನಾಯಕರು ಬೇಕಾಗಿದ್ದಾರೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ವಿಪಕ್ಷ ನಾಯಕರೊಬ್ಬರು ಬೇಕಾಗಿದ್ದಾರೆಂದು ಹೇಳಿ, ಬಿಜೆಪಿ ಕುರಿತು ವ್ಯಂಗ್ಯ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *