ಕಸದ ಬುಟ್ಟಿ ಸೇರಿದ ಬಡ ಜನರ ʼಔಷಧʼ : ವಿಡಿಯೋ ಮಾಡುತ್ತಿದ್ದಂತೆ ಕಾಲ್ಕಿತ್ತ ಆಸ್ಪತ್ರೆ ಸಿಬ್ಬಂದಿ

ರಾಯಚೂರು : ರಾಯಚೂರಿನ ಓಪೆಕ್ ಆಸ್ಪತ್ರೆಯ ಸಿಬ್ಬಂದಿಗಳ ಕಳ್ಳಾಟ ಬಟ್ಟಂಬಯಲಾಗಿದೆ. ಜನರಿಗೆ ತಲುಪಬೇಕಿದ್ದ ಔಷಧಿ ಅವಧಿ ಮೀರಿದ ಹಿನ್ನೆಲೆ ಆಸ್ಪತ್ರೆಯ ಸಿಬ್ಬಂದಿ ಔಷಧಿಗಳನ್ನು ಹೂಳಲು ಯತ್ನಿಸಿದ್ದಾರೆ.

ಜನರಿಗೆ ತಲುಪಬೇಕಿದ್ದ ಔಷಧಿ ಅವಧಿ ಮೀರಿದ ಹಿನ್ನೆಲೆ ಅದನ್ನು ಹೂಳಲು ಆಸ್ಪತ್ರೆ ಸಿಬ್ಬಂದಿ ಯತ್ನಿಸಿದೆ. ಔಷಧಿ ಹೂಳುವ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಆಗ ಆಸ್ಪತ್ರೆ ಸಿಬ್ಬಂದಿಯವರು ಔಷಧಿ ಹೂಳದೇ ಕಾಲ್ಕಿತ್ತಿದ್ದಾರೆ.

ಅಂದಹಾಗೇ ಓಪೆಕ್ ಆಸ್ಪತ್ರೆಯ ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿಬರುತ್ತಲೇ ಇರುತ್ತವೆ. ಸದ್ಯ ಆಸ್ಪತ್ರೆ ಸಿಬ್ಬಂದಿ ಹೂಳಲು ಹೊರಟ್ಟಿದ್ದ ಔಷಧಿಗಳು ಜನರಿಗೆ ವಿತರಣೆ ಆಗಬೇಕಿತ್ತು. ಆದ್ರೆ ಓಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ನೀಡುತ್ತಿರಲಿಲ್ಲವಂತೆ. ಬದಲಾಗಿ ಖಾಸಗಿ ಮೆಡಿಕಲ್ ಸ್ಟೋರ್ ಗೆ ರೆಫರ್ ಮಾಡುತ್ತಾರಂತೆ. ಈ ಮೂಲಕ ಕೆಲವರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಜನರಿಗೆ ಆಸ್ಪತ್ರೆಯಲ್ಲಿರುವ ಔಷಧಿ ನೀಡದೇ ಖಾಸಗಿ ಮೆಡಿಕಲ್ಸ್ ಗೆ ರೆಫರ್ ಮಾಡುವುದರಿಂದಲೇ ಆಸ್ಪತ್ರೆಯಲ್ಲಿ ಔಷಧಿ ಸ್ಟಾಕ್ ಉಳಿದು ಅವಧಿ ಮುಗಿದಿದೆ ಅಂತ ಆರೋಪ ಕೇಳಿ ಬಂದಿದೆ.

ಓಪೆಕ್ ಅವಾಂತರದ ಬಗ್ಗೆ ವಿಶೇಷಾಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಪರಿಶೀಲಿಸುವೆ ಅಂತ ವಿಶೇಷಾಧಿಕಾರಿ ಡಾ.ನಾಗರಾಜ್ ಗದ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕದಲ್ಲಿ ಒಮಿಕ್ರಾನ್ ಆತಂಕ, ಹೊಸ ಮಾರ್ಗಸೂಚಿ ಪ್ರಕಟ

ಡಾ.ನಾಗರಾಜ ಗದ್ವಾಲ್ ಹಾಗೂ ಡಾ. ಹೀರಾಪೂರು ಇವರ ಆಡಳಿತದಲ್ಲಿ ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಔಷಧಿಗಳ ಹಗರಣ ಸಾಕಷ್ಟು ನಡೆಯುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಅವಧಿ ಮುಗಿದಿರುವ ಔಷಧಿಗಳನ್ನು ಪುನಃ ಸರ್ಕಾರಕ್ಕೆ ಮರಳಿಸುವ ನಿಯಮಗಳನ್ನು ಗಾಳಿಗೆ ತೂರಿ ಅವಧಿ ಮುಗಿದ ಔಷಧಿಗಳನ್ನು ಜೆಸಿಬಿ ಮೂಲಕ ಭೂಮಿಯಲ್ಲಿ ಕುಣಿ ತೋಡಿ ಔಷಧಿಗಳನ್ನು ಹಾಕಿ ಮುಚ್ಚುತ್ತಿರುವ ಅವ್ಯವಹಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಕ್ಷಣವೇ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಅವ್ಯವಹಾರ, ಭ್ರಷ್ಟಾಚಾರ, ಔಷಧಿ ಹಗರಣ ಮಾಡುತ್ತಿರುವ ತಪ್ಪಿತಸ್ಥರಿಗೆ
ಶಿಕ್ಷಿಸಬೇಕು ಹಾಗೂ ಡಾ.ನಾಗರಾಜ ಗದ್ವಾಲ್ ಮತ್ತು ಡಾ. ಪೀರಾಪೂರು ಇವರನ್ನು ತಕ್ಷಣದಿಂಲೇ ಅಮಾನತ್ತು ಮಾಡಬೇಕೆಂದು ಒತ್ತಾಯಸಿದ್ದಾರೆ. ಸೂಕ್ತ ತನಿಖೆಯಾಗದಿದ್ದರೆ ಕೋರ್ಟ್​ಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *