ತಿರುವನಂದಪುರಂ: ಸೋಲಾರ್ ಪ್ರಕರಣದಲ್ಲಿ ದೂರುದಾರರ ಪತ್ರವೊಂದರಲ್ಲಿ ಉಮ್ಮನ್ ಚಾಂಡಿ ಅವರ ಹೆಸರಿದೆ ಎಂದು ಮಧ್ಯವರ್ತಿ ಟಿ.ಜಿ.ನಂದಕುಮಾರ್ ಆರೋಪಿಸಿದ್ದಾರೆ ಎಂದು ಕೈರಳಿ ನ್ಯೂಸ್ ಆನ್ಲೈನ್ ವರದಿ ಮಾಡಿದೆ. ಒಟ್ಟು ಎರಡು ಪತ್ರಗಳು ತನಗೆ ಲಭಿಸಿದ್ದು, ಒಂದರಲ್ಲಿ ದಿವಂಗತ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಹೆಸರಿದೆ ಎಂದು ಅವರು ಹೇಳಿದ್ದಾರೆ.
“ತನಗೆ ಸಿಕ್ಕ ಎರಡು ಪತ್ರಗಳಲ್ಲಿ, ಒಂದು 19 ಪುಟಗಳನ್ನು ಹೊಂದಿತ್ತು ಮತ್ತು ಇನ್ನೊಂದು 25 ಪುಟಗಳನ್ನು ಹೊಂದಿತ್ತು. ಎರಡನೇ ಪತ್ರದಲ್ಲಿ ಉಮ್ಮನ್ ಚಾಂಡಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ” ಎಂದು ನಂದಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಗಂಡು ಮಗುವಿಗಾಗಿ ಮಂತ್ರವಾದಿಯ ಮಾತಿನಂತೆ ಸ್ವಂತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆ!
“ಈ ಪತ್ರಗಳ ಕುರಿತು ತಾನು ಏಷ್ಯಾನೆಟ್ ನ್ಯೂಸ್ ವರದಿಗಾರರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದೇನೆ. ನಂತರ ಪತ್ರವನ್ನು ಅವರಿಗೆ ನೀಡಿದ್ದೇನೆ. ಈ ಪತ್ರದ ಅಡಿಯಲ್ಲಿ ಯಾವುದೇ ಹಣಕಾಸಿನ ವಹಿವಾಟು ನಡೆದಿಲ್ಲ. ಈ ಬಗ್ಗೆ ಮಾಡುತ್ತಿರುವ ಆರೋಪಗಳು ನಿರಾಧಾರ ಎಂದು” ನಂದಕುಮಾರ್ ಹೇಳಿದ್ದಾರೆ. ಸೋಲಾರ್
“2016ರಲ್ಲಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ದೂರುದಾರರು ಅವರನ್ನು ನೋಡಲು ಹೋಗಿದ್ದರು. ಉಮ್ಮನ್ ಚಾಂಡಿಯನ್ನು ತನ್ನನ್ನು ದೈಹಿಕವಾಗಿ ಮತ್ತು ಆರ್ಥಿಕವಾಗಿ ಬಳಸಿಕೊಂಡಿದ್ದಾರೆ ಎಂದು ಅವರು ನೀಡಿದ್ದ ದೂರಿನಲ್ಲಿ ಇತ್ತು. ತಾನು ದೂರುದಾರರಿಗೆ ಮುಖ್ಯಮಂತ್ರಿ ಭೇಟಿ ಮಾಡಲು ಸಹಾಯ ಮಾಡಿಲ್ಲ” ಎಂದು ನಂದಕುಮಾರ್ ಹೇಳಿದ್ದಾರೆ.
ವಿಡಿಯೊ ನೋಡಿ: “ಸಾರ್ವಜನಿಕ ಆರೋಗ್ಯ ವ್ಯವಸ್ಥೆ” ಬಲಗೊಂಡಿದ್ದರಿಂದ ಕೇರಳ ಕೋವಿಡ್ ವಿರುದ್ದ ಗೆಲ್ಲಲು ಸಾಧ್ಯವಾಯಿತು – ಶೈಲಜಾ ಟೀಚರ್