ಒಂಟಿ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಕಾಳಜಿ ವಹಿಸಲು ಸಿಪಿಐ(ಎಂ) ಒತ್ತಾಯ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲುಕಿನ  ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ  ಬ್ರಾಹ್ಮಣರ  ಬೀದಿಯಲ್ಲಿ  ವಯೋವೃದ್ದರಾದ  ಸೂರಪ್ಪನವರು  ಹಸಿವಿನಿಂದ  ಅಸುನೀಗಿರುವುದಾಗಿ ವರದಿಯಾಗಿದೆ. ಈ  ಘಟಣೆಯ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ತುಮಕೂರು ಜಿಲ್ಲಾ ಸಮಿತಿಯು ತೀವ್ರವಾದ ಕಳವಳ ವ್ಯಕ್ತಪಡಿಸಿದೆ.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್‌ ಕೆ ಸುಬ್ರಮಣ್ಯ ಅವರು ಹಸಿವಿನ ಸಾವುಗಳು  ನಾಗರೀಕ ಸಮಾಜಕ್ಕೆ  ಕಳಂಕ ತರುವ  ವಿಚಾರ.  ಸರ್ಕಾರ ಮತ್ತು  ಸ್ಥಳೀಯ ಸಂಸ್ಥೆಗಳು ಕೂಡಲೇ  ಒಂಟಿ, ವಯೋವೃದ್ದರು, ಅಸಹಾಯಕರ ರಕ್ಷಣೆ ಧಾವಿಸಬೇಕು ಮತ್ತು  ಹಸಿವಿನಿಂದ  ಸಾಯುವಂತಹ  ಸ್ಥಿತಿ ಎದುರಾಗದಂತೆ ಗಮನ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರಾದ ಸೈಯದ್‌ ಮುಜೀಬ್‌ ಅವರು ಜಿಲ್ಲೆ ಒಳಗೊಂಡು ರಾಜ್ಯದ ಯಾವುದೇ ಮೂಲೆಯಲ್ಲಿ ಲಾಕ್‌ಡೌನ್‌ನಿಂದ ಪರಿತಿಸುತ್ತಿರುವ ಸಮಸ್ತರಿಗೂ ಸರ್ಕಾರ ಮತ್ತು ಜಿಲ್ಲಾಡಳಿತವು ವಿಶೇಷವಾದ  ಕಾರ್ಯಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕು. ರಾಜ್ಯ  ಸರ್ಕಾರ  ಲಾಕ್‌ಡೌನ್  ಪರಿಹಾರ  ಹಾಗು ಕೇರಳ ಸರ್ಕಾರದ ಮಾದರಿಯಲ್ಲಿ ಎಲ್ಲಾ ಅಗತ್ಯವಾದ ಆಹಾರ ಪದಾರ್ಥಗಳನ್ನು ಒಳಗೊಂಡ ಅಹಾರದ  ಕಿಟ್‌ಗಳನ್ನು ತಕ್ಷಣವೇ ಎಲ್ಲಾ ಅಸಂಘಟಿತರಿಗೆ ನೀಡಬೇಕುʼʼ ಎಂದು ಒತ್ತಾಯಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *