ನವದೆಹಲಿ: ಒಂದು ರಾಷ್ಟ್ರ ಒಂದು ಚುನಾವಣೆ (ಒಎನ್‌ಒಇ)ಯನ್ನು ಸಂಸದೀಯ ಪ್ರಜಾಪ್ರಭುತ್ವ, ಸಂವಿಧಾನದ ಮೂಲ ರಚನೆ ಮತ್ತು ದೇಶದ ಫೆಡರಲ್ ರಾಜಕೀಯದ ಕಲ್ಪನೆಯನ್ನು ಹಾನಿಗೊಳಿಸುತ್ತದೆ ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಹೇಳಿದ್ದು, ಈ ಕಲ್ಪನೆಯನ್ನು ಪಕ್ಷವು ವಿರೋಧಿಸುತ್ತದೆ ಎಂದು ತಿಳಿಸಿದೆ. ಅತಂತ್ರ ಶಾಸಕಾಂಗದನ ಸ್ಥಿತಿಯನ್ನು ಎದುರಿಸಲು ಒಎನ್‌ಒಇಗೆ ಸಾಧ್ಯವಾಗುವುದಿಲ್ಲ ಎಂದು ಎಎಪಿ ಹೇಳಿದ್ದು, “ಇದು ಪಕ್ಷಾಂತರ ವಿರೋಧಿ ಮತ್ತು ಶಾಸಕರು/ಸಂಸದರ ಖರೀದಿ-ಮಾರಾಟದ ದುಷ್ಟತನವನ್ನು ಸಕ್ರಿಯವಾಗಿ ಪ್ರೋತ್ಸಾಹಿಸುತ್ತದೆ” ಎಂದು ಹೇಳಿದೆ.
“ಒಂದೇ ಸಮಯದಲ್ಲಿ ಚುನಾವಣೆ ನಡೆಸಿ ಉಳಿಸಲು ಬಯಸಿದ ವೆಚ್ಚವು ವಾರ್ಷಿಕ ಬಜೆಟ್‌ನ ಕೇವಲ 0.1%ವಾಗಿದೆ. ಇಷ್ಟು ಕನಿಷ್ಠ ಆರ್ಥಿಕ ಲಾಭಕ್ಕಾಗಿ ಮತ್ತು ಆಡಳಿತಾತ್ಮಕ ಅನುಕೂಲಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ತ್ಯಾಗ ಮಾಡುವುದು ಸರಿಯಲ್ಲ” ಎಂದು ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಗುಪ್ತಾ ಚುನಾವಣಾ ಸಮಿತಿಯ ಕಾರ್ಯದರ್ಶಿ ನಿತೇನ್ ಚಂದ್ರ ಅವರಿಗೆ ಬರೆದ ಅಧಿಕೃತ ಪತ್ರದಲ್ಲಿ ಹೇಳಿದ್ದಾರೆ. ಒಂದು ರಾಷ್ಟ್ರ
ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಭಯಭೀತಗೊಳಿಸಲು ‘ಇಡಿ’ ಬಳಕೆ – ಶರದ್ ಪವಾರ್ ಆಕ್ರೋಶ
ಸಂಕುಚಿತ ಆರ್ಥಿಕ ಲಾಭ ಮತ್ತು ಆಡಳಿತದ ಅನುಕೂಲಕ್ಕಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. “ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದು ಭಾರತೀಯ ಬಹು ಪಕ್ಷ ವ್ಯವಸ್ಥೆಯ ಮೇಲೆ ಹಾನಿಕಾರಕವಾಗಿ ಪರಿಣಾಮ ಬೀರುತ್ತದೆ. ಇಲ್ಲಿ ಮುಖ್ಯವಾಹಿನಿಯ ರಾಜಕೀಯದ ಹಿಂದೆಯು ತಳಮಟ್ಟದಲ್ಲಿರುವವರ ಧ್ವನಿಯನ್ನು ಪ್ರತಿನಿಧಿಸುವ ಹಲವಾರು ಪಕ್ಷಗಳು ಇವೆ” ಎಂದು ಪತ್ರವು ಹೇಳಿದೆ. ಒಂದು ರಾಷ್ಟ್ರ
ತದ್ವಿರುದ್ಧ ಉದಾಹರಣೆ ಇದ್ದರೂ, ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಎರಡಕ್ಕೂ ಏಕಕಾಲದಲ್ಲಿ ಅಥವಾ ಆರು ತಿಂಗಳ ಅಂತರದಲ್ಲಿ ಚುನಾವಣೆಗಳು ನಡೆದಾಗ ಹೆಚ್ಚಿನ ಸಂಖ್ಯೆಯ ಮತದಾರರು ಒಂದೇ ಪಕ್ಷಕ್ಕೆ ಮತ ಚಲಾಯಿಸುತ್ತಾರೆ ಎಂದು ಪುರಾವೆಗಳು ಸೂಚಿಸುತ್ತವೆ ಎಂದು ಎಎಪಿ ಹೇಳಿದೆ.
ಇದನ್ನೂ ಓದಿ: ಶಬರಿಮಲೆಯಲ್ಲಿ ಯುವತಿಯರು ಎಂದು ‘ನಕಲಿ ವಿಡಿಯೋ’ ಪ್ರಸಾರ | ಪ್ರಕರಣ ದಾಖಲಿಸಿದ ಕೇರಳ ಪೊಲೀಸರು
“ಮತದಾರರು ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದ್ದರೋ ಅದೇ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಇದು ರಾಷ್ಟ್ರೀಯ ಪಕ್ಷಗಳಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಪ್ರಾಬಲ್ಯವಿರುವ ಪ್ರಾದೇಶಿಕ ಪಕ್ಷಗಳೂ ಈ ಮಾದರಿಯಿಂದ ಲಾಭ ಪಡೆದರೆ, ಸಣ್ಣ ಪ್ರಾದೇಶಿಕ ಪಕ್ಷಗಳು ಇದರಿಂದ ನಷ್ಟ ಅನುಭವಿಸಲಿವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಹಿಂದೆ, ಕಾಂಗ್ರೆಸ್ ಮತ್ತು ಟಿಎಂಸಿ ಕೂಡ ಒಎನ್‌ಒಇ ಕಲ್ಪನೆಯನ್ನು ವಿರೋಧಿಸಿದ್ದವು. ಈ ಬಗ್ಗೆ ಶುಕ್ರವಾರ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಗೆ ಪತ್ರ ಬರೆದು, ಇದು ಪ್ರಜಾಪ್ರಭುತ್ವ ವಿರೋಧಿ ಕಲ್ಪನೆ ಎಂದು ಹೇಳಿದ್ದಾರೆ. “ಈ ಕಲ್ಪನೆಯನ್ನು ಕೈಬಿಡಬೇಕು ಮತ್ತು ಸಮಿತಿಯನ್ನು ವಿಸರ್ಜಿಸಬೇಕು” ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ವಿಡಿಯೊ ನೋಡಿ: ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media