ಬೆಂಗಳೂರು : ಪ್ರೀತಿಯ ಕಾಳನು ಬಿತ್ತ ಬಯಸುವೆವು ಎಂಬ ಹೆಸರಿನಡಿ, ಯುದ್ಧ ವಿರೋಧಿ ಆನ್ಲೈನ್ ಕವಿಗೋಷ್ಠಿಯನ್ನು ಪ್ರೀತಿಪದ ಆಯೋಜಿಸಿದೆ.
ಇದು ಆನ್ಲೈನ್ ನಲ್ಲಿ ನಡೆಯುವ ಕವಿಗೋಷ್ಠಿಯಾಗಿದ್ದು, ಈಗಾಗಲೇ ನೂರಕ್ಕು ಹೆಚ್ಚು ಜನರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಘಟಿಕರು ತಿಳಿಸಿದ್ದಾರೆ. ಅಕ್ಟೋಬರ್ 26 ರಂದು ಸಂಜೆ 6 ಗಂಟೆಗೆ ಜೂಮ್ ಜಾಲತಾಣದಲ್ಲಿ ಕವಿಗೋಷ್ಠಿ ನಡೆಯಲಿದೆ. ಯುಧ್ಧ ಮನುಕುಲದ ನಾಶದ ಕಡೆ ನಮ್ಮನ್ನೆಲ್ಲಾ ಕೊಂಡೊಯ್ಯಲಿದೆ, ವಿಶ್ವಶಾಂತಿ ಇಂದಿನ ತುರ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ ಎಂದು ಪ್ರೀತಿಪದದ ಯಮುನಾ ಗಾಂವ್ಕರ್ ತಿಳಿಸಿದ್ದಾರೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎಸ್‌ಜಿ ಸಿದ್ದರಾಮಯ್ಯ ವಹಿಸಲಿದ್ದಾರೆ. ಸಾಹಿತಿಗಳು, ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಪ್ರೀತಿಪದ ಮನವಿ ಮಾಡಿದೆ. ಜನಶಕ್ತಿ ಮೀಡಿಯ ಫೆಸ್ಬುಕ್ ಹಾಗೂ ಯೂಟ್ಯೂಬ್‌ನಲ್ಲಿ, ಕವಿಗೋಷ್ಠಿ ಕಾರ್ಯಕ್ರಮವು ನೇರ ಪ್ರಸಾರವಾಗಿಲಿದೆ.
ಕಾರ್ಯಕ್ರಮದ ಜೂಮ್ ಲಿಂಕ್ ಈ ಕೆಳಗಿನಂತಿದೆ
ಯುದ್ಧ ವಿರೋಧಿ ಆನ್ ಲೈನ್ ಕವಿಗೋಷ್ಠಿ
Join Zoom Meeting : https://us06web.zoom.us/j/84686673733?pwd=QHVaDbV59qHEX4sB6cZjKoDYURboUu.1
Meeting ID: 846 8667 3733
Passcode: 964970
ಈ ವಿಡಿಯೋ ನೋಡಿ : “ಇಸ್ರೇಲ್ ಪ್ಯಾಲಿಸ್ಟೈನ್ ಯುದ್ಧ”ದ ಹಿನ್ನೆಲೆ ಏನು?