ಬೆಂಗಳೂರು: ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ. ಈಗಿನ ನಾಯಕರುಗಳು ಒನ್ ಮ್ಯಾನ್ ಆರ್ಮಿ ರೀತಿ ಇರುತ್ತಾರೆ ಎಂದು ಡಿಸಿಎಂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.ಡಿಕೆಶಿ
ವಿಶ್ವಕರ್ಮ ಸಮುದಾಯದ ಪ್ರಬಲ ಮುಖಂಡ ಕೆ ಪಿ ನಂಜುಂಡಿ ಅವರಿಂದು ಬಿಜೆಪಿ ಮತ್ತು ವಿಧಾನ ಪರಿಷತ್ ಸ್ಥಾನ ತೊರೆದು ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರ್ಪಡೆಯಾದರು. ಎಐಸಿಸಿ ಪ್ರಧಾನ ಕಾಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಪಕ್ಷದ ಶಾಲನ್ನು ಹೊದಿಸಿ ಕೆ.ಪಿ.ನಂಜುಂಡಿಯನ್ನು ಪಕ್ಷಕ್ಕೆ ಮರಳಿ ಬರಮಾಡಿಕೊಂಡರು. ಡಿಕೆಶಿ
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಡಿಕೆಶಿ, ಇಂದು ಕರ್ನಾಟಕ ರಾಜ್ಯದಲ್ಲಿ ಲೋಕಸಭೆ ಮೊದಲ ಹಂತದ ಚುನಾವಣೆಯ ಪ್ರಚಾರ ಕೊನೆಯ ದಿನವಾಗಿದೆ. ಪ್ರಚಾರ ಕೊನೆಯಾಗುವ ಮುನ್ನ ಬೆಂಗಳೂರು ನಗರ ಹಾಗೂ ರಾಜ್ಯಕ್ಕೆ ದೊಡ್ಡ ಸಂದೇಶ ರವಾನಿಸುವ ಅಗತ್ಯವಿದೆ. ನನ್ನ ರಾಜಕಾರಣದ ಅನುಭವದಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿದರೆ ಹಿಂದುಳಿದ ವರ್ಗದ ಪೈಕಿ ಕಾಯಕ ಸಮಾಜದಲ್ಲಿ ಸಂಘಟನೆಗೆ ಶಕ್ತಿ ಹೊಂದಿರುವವರು ಎಂದರೆ ಅದು ಕೆ.ಪಿ ನಂಜುಂಡಿ ಎಂದು ಭಾವಿಸಿರುವುದಾಗಿ ಹೇಳಿದರು.
ಸಂಘಟನೆ ಎಲ್ಲರಿಂದಲೂ ಸಾಧ್ಯವಿಲ್ಲ. ಈಗಿನ ನಾಯಕರುಗಳು ಒನ್ ಮ್ಯಾನ್ ಆರ್ಮಿ ರೀತಿ ಇರುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನನಗೆ ದೊಡ್ಡ ಪ್ರತಿಭೆಯಾಗಿರುವ ಕೆ.ಪಿ.ನಂಜುಂಡಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಮರಳಿ ತರುವಂತೆ ಹೇಳಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ನಂಜುಂಡಿಯನ್ನು ಪಕ್ಷಕ್ಕೆ ಮರುಸೇರ್ಪಡೆ ಮಾಡಿಕೊಳ್ಳಲಾಗಿದೆ.ಇವರ ಜತೆ ವಿಶ್ವಕರ್ಮ ಸಮಾಜಕ್ಕೆ ಸೇರಿದ ಅನೇಕ ನಾಯಕರು ಕೂಡ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದರು. ಡಿಕೆಶಿ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗುವ ಮೊದಲು ಚಿನ್ನದ ಬೆಲೆ ಗ್ರಾಂಗೆ 2800ರೂ. ಇತ್ತು. ಈಗ ಅದು 7500ರೂ. ಆಗಿದೆ. ಮಾಂಗಲ್ಯ ತಯಾರಿಸುತ್ತಿದ್ದ ವಿಶ್ವಕರ್ಮ ಸಮಾಜದವರು ಬೆಲೆ ಏರಿಕೆಯಿಂದಾಗಿ ಅದನ್ನು ಮಾಡಲಾಗದ ಪರಿಸ್ಥಿತಿ ಸೃಷ್ಟಿಸಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಇರುವುದು ಸರಿಯಲ್ಲ. ಮಹಿಳೆಯರ ಸಂಕಷ್ಟಕ್ಕೆ ಕಾಂಗ್ರೆಸ್ ನೆರವಾಗುತ್ತಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಒಂದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಲಿಲ್ಲದನ್ನು ನೋಡಿ ಕಾಂಗ್ರೆಸ್ ಸೇರಿರುವುದಾಗಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.
ಇದನ್ನು ಓದಿ : ಮತದಾರರಲ್ಲಿ ಗೊಂದಲಮೂಡಿಸಲು ನಕಲಿ ಮತದಾನಪತ್ರ ಮುದ್ರಿಸಿದ ಬಿಜೆಪಿ- ಕೆ.ಸುಧಾಕರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಸಿಪಿಐಎಂ
ಕಾಲಕ್ಕೆ ತಕ್ಕಂತೆ ನಾವು ಬದಲಾದರೆ ಮಾತ್ರ ನಾವು ಇತರರಂತೆ ಬದುಕಬಹುದು. ಪಕ್ಷ ಕಟ್ಟಬಹುದು, ಜಾತಿ ಕಟ್ಟಲು ಆಗುವುದಿಲ್ಲ. ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ 15 ವರ್ಷಗಳ ಕಾಲ ಇದ್ದಾಗ ಸಂಪೂರ್ಣ ಸ್ವಾತಂತ್ರ್ಯವಿತ್ತು. ಮನುಷ್ಯ ಹೋರಾಟ ಮಾಡಬೇಕಾದರೆ ಸ್ವಾತಂತ್ರ್ಯ ಇರಬೇಕು. ಇಲ್ಲದಿದ್ದರೆ ಹೋರಾಟ ಮಾಡಲು ಆಗುವುದಿಲ್ಲ. ಕಾರಣಾಂತರಗಳಿಂದ ಹಿಂದುಳಿದ ವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬಹುದು ಎಂಬ ನಿರೀಕ್ಷೆಯಿಂದ ಬಿಜೆಪಿಗೆ ಹೋಗಿದ್ದೆ.. ಹಿಂದುಳಿದ ಸಮಾಜದ ಧ್ವನಿಯಾಗುವುದು ನನ್ನ ಉದ್ದೇಶವಾಗಿತ್ತು. ಆದರೆ ಬಿಜೆಪಿಯವರು ನನ್ನನ್ನು ಎಂಎಲ್ಸಿ ಮೂಲೆಗುಂಪು ಮಾಡಿದರು, ನಮ್ಮಂತಹವರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು. ನಮಗೆ ಬದುಕು ಮುಖ್ಯ. ಎಲ್ಲಾ ಕಾಯಕ ಸಮಾಜ ಬದುಕಬೇಕೆಂಬ ಅಪೇಕ್ಷೆ ಇರುವುದಾಗಿ ಕೆ.ಪಿ.ನಂಜುಂಡಿ ಸ್ಪಷ್ಟಪಡಿಸಿದರು.ಡಿಕೆಶಿ
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಾನು ಬದುಕಿರುವವರೆಗೂ ನಮ್ಮ ಸಮಾಜದ ಮೂಲ ಕಸುಬು ಮಾಡಿಕೊಂಡು ಬಂದಿರುವವರಿಗೆ ಸಾಮಾಜಿಕ ನ್ಯಾಯ ಒದಗಿಸಲು ಹೋರಾಡುತ್ತೇನೆ. ಇದಕ್ಕೆ ಸರಿಯಾದ ವ್ಯಕ್ತಿ ಎಂದರೆ ಡಿ.ಕೆ. ಶಿವಕುಮಾರ್ ಎಂದು ನಂಬಿದ್ದೇನೆ. ನಮ್ಮ ಸಮಾಜ ಬದುಕಬೇಕೆಂದರೆ ರಾಜಕೀಯ ಜ್ಞಾನ ಪಡೆಯಬೇಕು. ಹೀಗಾಗಿ ನೀವು ನಿಮ್ಮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು.
ಕೋವಿಡ್ ಸಮಯದಲ್ಲಿ ನಮ್ಮ ಸಮಾಜದವರಿಗೆ 2 ಸಾವಿರ ನೀಡಿ ಎಂದು ಬಿಜೆಪಿ ನಾಯಕರಿಗೆ ಕೇಳಿದ್ದೆಯಾದರೂ ಅದು ಸಾಧ್ಯವಾಗಲಿಲ್ಲ. ನಮಗೆ ಶಕ್ತಿ ತುಂಬಿ ಧ್ವನಿಯಾಗಿ ನಿಂತವರು ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರು ವಿಶ್ವಕರ್ಮ ಜಯಂತಿ ಮಾಡಿದರು. ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಡಿದ್ದಾರೆ ಜಾತಿಗಣತಿ ವರದಿ ಸ್ವೀಕಾರ ಮಾಡಿದ್ದಾರೆ. ಎಲ್ಲಾ ವರ್ಗಕ್ಕೆ ನ್ಯಾಯ ಸಿಗುವಂತೆ ಕೆಲಸ ಮಾಡುವ ಪಕ್ಷ ಕಾಂಗ್ರೆಸ್ ಪಕ್ಷ.ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಕಟಿಬದ್ಧನಾಗಿರುವ ಕೆ.ಪಿ.ನಂಜುಂಡಿ, ಪ್ರತಿ ತಾಲೂಕು, ಜಿಲ್ಲೆ, ಹೊಬಳಿಗೆ ಬಂದು ಭೇಟಿ ನೀಡಿ ಕೆಲಸ ಮಾಡುವುದಾಗಿಯೂ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ತತ್ವಗಳನ್ನು ನಂಬಿ ಕಾಂಗ್ರೆಸ್ ಪಕ್ಷ ಸೇರಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವುದಾಗಿಯೂ ಸ್ಪಷ್ಟಪಡಿಸಿದರು.ಡಿಕೆಶಿ
ಇದನ್ನು ನೋಡಿ : ಬಿಜೆಪಿ ಮತ್ತು ಮಿತ್ರಪಕ್ಷಗಳಿಗಿಲ್ಲ ಕಾರ್ಮಿಕರ ಮತ – ಕಾರ್ಮಿಕ ನಾಯಕರ ಅಭಿಮತ Janashakthi Media