ತುಮಕೂರು: ನೆನ್ನೆ ಶನಿವಾರ ಬೆಳಗ್ಗೆ, ವ್ಹೀಲಿಂಗ್ ಪುಂಡರ ಅಟ್ಟಹಾಸಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ನಗರದ ಟೂಡಾ ಕಚೇರಿ ಬಳಿ ಜರುಗಿದ್ದೂ, ಮೃತ ವ್ಯಕ್ತಿಯನ್ನು ಹೇಮಾದ್ರಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ಟಿ. ತಿಪ್ಪೇಸ್ವಾಮಿ ಎಂದು ಗುರುತಿಸಲಾಗಿದೆ. ತುಮಕೂರು
ಶನಿವಾರ ಬೆಳಗ್ಗೆ ಮನೆಗೆ ಹಾಲು ತರಲೆಂದು ಬಂದಿದ್ದ ವೇಳೆ ವ್ಹೀಲಿಂಗ್ ಮಾಡಿಕೊಂಡು ಬಂದ ಪುಂಡರ ಬೈಕ್, ತಿಪ್ಪೇಸ್ವಾಮಿ ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯಾದ ಪರಿಣಾಮ ತಿಪ್ಪೇಸ್ವಾಮಿ ಅವರ ತಲೆ ಮತ್ತು ಕಾಲಿಗೆ ಗಂಭೀರ ಗಾಯವಾಗಿತ್ತು.
ಇದನ್ನೂ ಓದಿ: ಉತ್ತರ ಕರ್ನಾಟಕದ ಫೇಮಸ್ ಗೋಡಂಬಿ ಕಾಕಾ ಇನ್ನಿಲ್ಲ
ಕೂಡಲೇ ಅವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ. ಈ ಕುರಿತು ತುಮಕೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ನೋಡಿ: ವಿಧಾನಸಭಾ ಅಧಿವೇಶನ | ರಾಜ್ಯ ಬಜೆಟ್ 2025 | ಮಾರ್ಚ್ 07-2025 #karnatakabudget2025 #janashaktimedia