ಮೈಸೂರು| ಬಲೂನ್ ಗೆ ಹೀಲಿಯಂ ತುಂಬಿಸುವ ವೇಳೆ ಸ್ಟೋಟ; ಓರ್ವ ಸಾವು

ಮೈಸೂರು: ನಗರದ ಅರಮನೆ ಬಳಿ ಬಲೂನ್ ಗೆ ಹೀಲಿಯಂ ತುಂಬಿಸುವಾಗ ಸ್ಟೋಟಗೊಂಡು ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಡಿಸೆಂಬರ್.25ರ ರಾತ್ರಿ ನಡೆದಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ರಾತ್ರಿ 8.20 ರ ಸುಮಾರಿನಲ್ಲಿ ಬಲೂನ್ ಮಾರುವ ವ್ಯಕ್ತಿ ಬಲೂನ್ ಗಳಿಗೆ ಹೀಲಿಯಂ ತುಂಬಿಸುವಾಗ ಈ ಅವಘಡ ಸಂಭವಿಸಿದ್ದು, ಬಲೂನ್ ಮಾರುವ ವ್ಯಕ್ತಿ ಮೃತಪಟ್ಟಿದ್ದಾರೆ. ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: ಮನರೇಗಾ ನಿರ್ಮಿಸಿದ ಪರಂಪರೆಯನ್ನು ಧ್ವಂಸ ಮಾಡುವ ವಿಬಿ-ಜಿ ರಾಮ್ ಜಿ: ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್

ಈ ವೇಳೆ ಸ್ಥಳದಲ್ಲಿದ್ದ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಎಲ್ಲರನ್ನು ನಗರದ ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಬೆಂಗಳೂರು ಮೂಲದ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದರೆ, ನಂಜನಗೂಡಿನ ಮಂಜುಳಾ, ಕೋಲ್ಕತಾ ಪ್ರವಾಸಿ ಶಾಹಿನಾ ಶಬ್ಬೀರ್ ಹಾಗೂ ರಾಣೆ ಬೆನ್ನೂರಿನ ಕೊಟ್ರೇಶ್ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪ್ರವಾಸಿಗರಿಂದ ತುಂಬಿದ್ದ ಸ್ಥಳ

ಕ್ರಿಸ್ಮಸ್ ರಜೆ ಹಿನ್ನೆಲೆ ನಗರದಲ್ಲಿ ಪ್ರವಾಸಿಗರ ಜಂಗುಳಿ ಕಂಡುಬಂದಿತ್ತು. ಎಂದಿನಂತೆ ಪ್ರವಾಸಿಗರು ಅರಮನೆಯ ಜಯಮಾರ್ತಂಡ ದ್ವಾರದ ಬಳಿ ನಿಂತು ಅರಮನೆ ದೀಪಾಲಂಕಾರ ವೀಕ್ಷಿಸಿ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಸಾವಿರಾರು ಮಂದಿ ನೆರೆದಿರುವ ವೇಳೆ ಈ ದುರ್ಘಟನೆ ಸಂಭವಿಸಿರುವುದು ಮೈಸೂರಿಗರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ನೋಡಿ: ಚಿತ್ರದುರ್ಗ | ಭೀಕರ ಬಸ್ ಅಪಘಾತ : 17 ಮಂದಿ ಸಜೀವ ದಹನ Janashakthi Media

Donate Janashakthi Media

Leave a Reply

Your email address will not be published. Required fields are marked *