ಬಳ್ಳಾರಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಬಳ್ಳಾರಿ ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಪ್ತಿ ಪಡಿಸಿಕೊಂಡಿದ್ದ 62 ಪ್ರಕರಣಗಳಲ್ಲಿ, ಅಂದಾಜು 1,00,65,745 ರೂ. ಬೆಲೆ ಮೌಲ್ಯದ 630 ಕೆಜಿಯಷ್ಟು ಗಾಂಜಾ ಮತ್ತು ಮಾದಕ ದ್ರವ್ಯವನ್ನು ನಾಶಪಡಿಸಲಾಯಿತು.
ಬಳ್ಳಾರಿ ತಾಲೂಕಿನ ಹರಗಿನದೋಣಿ ಗ್ರಾಮ ಬಳಿ ಇರುವ ಮಹಾನಗರ ಪಾಲಿಕೆ ಕಸ ವಿಲೇವಾರಿ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಅವರ ನೇತೃತ್ವದಲ್ಲಿ ಇಂದು ಈ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎಎಸ್‌ಪಿ ಬಿ.ಎನ್.ಲಾವಣ್ಯ, ಡಿವೈಎಸ್‌ಪಿ ರಮೇಶ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನು ಓದಿ: ಮಾದಕ ವಸ್ತು ಜಾಲ ನಿರ್ಮೂಲನೆ ನಮ್ಮ ಮೊದಲ ಆದ್ಯತೆ: ಪ್ರವೀಣ್ ಸೂದ್