ಬೆಂಗಳೂರು : ‘ಒಂದು ದೇಶ ಒಂದು ಚುನಾವಣೆ’ ವಿಚಾರದ ಬಗ್ಗೆ ವಿಧಾನ ಸಭೆ ಕಲಾಪದಲ್ಲಿ ಚರ್ಚೆ ನಡೆಸುತ್ತಿರುವುದಕ್ಕೆ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರಿಂದ ಕಲಾಪದಲ್ಲಿಯೇ ಧರಣಿ ನಡೆಸಿದರು.
ಸ್ಪೀಕರ್ ಪ್ರಸ್ತಾಪ ಮಾಡುತ್ತಿದ್ದಂತೆ ಕೈ ಸದಸ್ಯರಿಂದ ವಿಧಾನಸಭೆಯಯಲ್ಲಿಯೇ ಧರಣಿ ನಡೆಸಿ ಘೋಷಣೆಗಳನ್ನು ಕೂಗತೊಡಗಿದರು. ಒಂದು ರಾಷ್ಟ್ರ ಒಂದೇ ಚುನಾವಣೆ ಸವಾಲಿನದ್ದು, ಇದು ಆರ್ ಎಸ್ ಎಸ್ ಅಜೆಂಡವಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಅದನ್ನು ಬಿಟ್ಟು ಸರ್ಕಾರ ಒಂದು ದೇಶ ಒಂದು ಚುನಾವಣೆ ಮೇಲೆ ಚರ್ಚೆ ಮಾಡುತ್ತಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಚರ್ಚೆಗೆ ಅವಕಾಶ ಕೊಟ್ಟಿದ್ದು ಯಾರು, ಇದಕ್ಕೆ ನಮ್ಮ ಪಕ್ಷಗಳಿಂದ ಸಂಪೂರ್ಣ ವಿರೋಧವಿದೆ ಎಂದು ಸದಸನದ ಭಾವಿಗಿಳಿದು ಕೈ ನಾಯಕರು ಪ್ರತಿಭಟನೆ ಮುಂದುವರೆಸಿದರು. ತೀವ್ರ ಗದ್ದಲದಿಂದಾಗಿ ಕಲಾಪವನ್ನು ಸ್ಪೀಕರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿಕೆ ಮಾಡಿದರು.