ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಿ: ಎಐಡಿಎಸ್‌ಓ ಆಗ್ರಹ

ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸಬೇಡಿ, ವಿದ್ಯಾರ್ಥಿಗಳಿಗೆ ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಯ ಒತ್ತಡ ಬೇಡ ಎಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿಭಾಗದ ಬಳಿ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಡ್ಸ್‌ ಆರ್ಗನೇಷನ್‌(ಎಐಡಿಎಸ್‌ಓ) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಹೋರಾಟ ಸಮಿತಿ ಜಂಟಿಯಾಗಿ ಪ್ರತಿಭಟನೆಯನ್ನು ನಡೆಸಿದರು.

ಈಗಾಗಲೇ ಕೊರೊನಾ ಒಡ್ಡಿರುವ ಸವಾಲುಗಳು, ಜೀವನದಲ್ಲಿ ಉಂಟಾಗಿರುವ ಅಭದ್ರತೆ ಮತ್ತು ಜೀವ ಉಳಿಸಿಕೊಳ್ಳುವ ಹೆಣಗಾಟದಲ್ಲಿ ಇರುವಾಗಲೇ ಒಂದು ತಿಂಗಳಲ್ಲಿ ಎರಡು ಪರೀಕ್ಷೆಯ ಸುದ್ಧಿ ನಿಜಕ್ಕೂ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಆಘಾತವನ್ನು ಉಂಟು ಮಾಡಿದೆ  ಎಂದಿರುವ ಸಂಘಟನೆಗಳು ಇದು ಕೇವಲ ಆಘಾತಕಾರಿ ಅಷ್ಟೇ ಅಲ್ಲದೆ, ಅವೈಜ್ಞಾನಿಕ ಮತ್ತು ಅತಾರ್ಕಿಕ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ವಿದ್ಯಾರ್ಥಿಗಳು ಒಂದು ಸಾಂಕೇತಿಕ ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗಳನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸ್ಪಂದಿಸಬೇಕೆಂದು ಆಗ್ರಹಿಸಿದರು ಮತ್ತು ವಿವಿ ಕುಲಪತಿಗಳನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ.

ಕೋವಿಡ್‌ ಲಸಿಕೆ ಎರಡೂ ಡೋಸ್‌ ಗಳನ್ನು ನೀಡಿದ ನಂತರವೇ ದೈಹಿಕ ತರಗತಿಗೂ ಹಾಗೂ ಪರೀಕ್ಷೆಗಳನ್ನು ನಡೆಸಬೇಕೆಂದು ಎಐಡಿಎಸ್‌ಓ ಹಾಗೂ ಬಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಉಲ್ಲೇಖಿಸಿದ್ದಾರೆ.

ಇದೇ ಸಂದರ್ಭದಲ್ಲಿ ಶಿಕ್ಷಣ ತಜ್ಞರು, ಉಪನ್ಯಾಸಕರು, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಪ್ರಜಾತಾಂತ್ರಿಕವಾಗಿ ಚರ್ಚಿಸಿ ಯಾವುದೇ ಶೈಕ್ಷಣಿಕ ವಿಷಯದ ನಿರ್ಧಾರ ತೆಗೆದುಕೊಂಡರೆ ನಮಗೆ ಅನುಕೂಲ ಆಗುತ್ತದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.

Donate Janashakthi Media

8 thoughts on “ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಿ: ಎಐಡಿಎಸ್‌ಓ ಆಗ್ರಹ

Leave a Reply

Your email address will not be published. Required fields are marked *