ಚಿಕ್ಕಬಳ್ಳಾಪುರದಲ್ಲಿ ಒಂದೇ ಕುಟುಂಬದ 65 ಜನ ಏಕಕಾಲಕ್ಕೆ ಮತದಾನ

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಒಂದೇ ಕುಟುಂಬದ 65 ಕ್ಕೂ ಹೆಚ್ಚು ಜನ ಬಂದು ಏಕಕಾಲಕ್ಕೆ ಮತದಾನವನ್ನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ನಗರದ ಬಾದಾಮ್ ಕುಟುಂಬದ ಸದಸ್ಯರು ಪ್ರತಿವರ್ಷವು ತಮ್ಮ ಮತದಾನ ಪ್ರಕ್ರಿಯೆ ಅನ್ನು ಎಲ್ಲರು ಜೊತೆಯಾಗಿ ಮಾಡುತ್ತಿದ್ದಾರೆ.

ಇದನ್ನೂ ಓದಿಬಸವನ ಬಾಗೇವಾಡಿ: ಇವಿಎಂ, ವಿವಿಪ್ಯಾಟ್‌ ಯಂತ್ರಗಳನ್ನು ಎತ್ತಿ ಕುಕ್ಕಿದ ಜನ

ಇನ್ನೂ ಕಳೆದ 15ಕ್ಕಿಂತ ಹೆಚ್ಚು ಬಾರಿ ಮತದಾನ ಪಕ್ರಿಯೆಯನ್ನು ಕುಟುಂಬಸ್ಥರೆಲ್ಲಾ ಒಂದೇ ಬಾರಿ ಬಂದು ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ತಮ್ಮದೇ ಆದ ಬ್ಯೂಸಿಲೈಫ್‌ ಕಳೆಯುತ್ತಿರುತ್ತಾರೆ. ಮತದಾನಹಕ್ಕನ್ನು ವಿನಿಯೋಗಿಸಿಕೊಳ್ಳಲು ಒಂದೇ ಬಾರೀ ಮತದಾನ ಮಾಡಲು ಬರುತ್ತಿರುವುದಾಗಿ ಬಾದಾಮ್ ಕುಟುಂಬದ ಮುಖಂಡರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನಿಂದಲೂ ಎಲ್ಲರೂ ಜೊತೆಯಾಗಿ ಮತದಾನ ಮಾಡುತ್ತಿದ್ದೇವೆ. ಎಲ್ಲರು ಒಂದೇ ಕುಟುಂಬಸ್ಥರಾದರು, ಎಲ್ಲರ ಮನೆ ಹಾಗೂ ವ್ಯವಹಾರ ಬೇರೆಯಾಗಿರುತ್ತದೆ. ಆದರೆ ಮತದಾನದ ಸಮಯದಲ್ಲಿ ಎಲ್ಲರು ಒಂದಾಗಿ ಬಂದು ವೋಟ್‌ ಮಾಡುತ್ತೇವೆಂದು ಕುಟುಂಬದ ಹಿರಿಯರಾದ ಗೋಪಾಲ್‌ ಬಾದಾಮ್‌ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *