ಬೆಂಗಳೂರು: ಅತ್ಯಾಚಾರಿಗಳಿಗೆ, ಕೊಲೆಪಾತಕರಿಗೆ ಸನ್ಮಾನ ಮಾಡುವುದನ್ನು ಗುಜರಾತು, ಉತ್ತರ ಪ್ರದೇಶಗಳಲ್ಲಿ ಕಂಡಿದ್ದೆವು. ಛೆ, ಎಂತಹ ಸ್ಥಿತಿಗೆ ಈ ರಾಜ್ಯಗಳು ತಲುಪಿದವಲ್ಲಾ ಎಂದು ಮರುಗಿದ್ದೆವು, ಈ ರೀತಿಯಲ್ಲಿ ಅಪರಾಧಿಗಳನ್ನು ಸನ್ಮಾನಿಸಿ ಅಪರಾಧಕ್ಕೆ ಸಾಮಾಜಿಕ ಮನ್ನಣೆ ನೀಡುವುದನ್ನು ನಾವು ಪ್ರತಿಭಟಿಸಿದ್ದೆವು. ಆದರೆ ನಮ್ಮದೇ ರಾಜ್ಯದಲ್ಲಿ, ಕರ್ನಾಟಕದ ಹೆಮ್ಮೆಯ ದನಿ ಗೌರಿ ಲಂಕೇಶ್‌ರನ್ನು ಕೊಲೆಗೈದ ಆರೋಪಿಗಳನ್ನು ಸನ್ಮಾನಿಸಿರುವುದ ಕಂಡು ನಾವು ದಂಗಾಗಿದ್ದೇವೆ ಎಂದು ಗೌರಿ ಬಳಗದವರು ಹೇಳಿದ್ದಾರೆ.
ಇದು ಕರ್ನಾಟಕದ ಪರಂಪರೆಗೆ, ಈ ನೆಲ ಪೋಷಿಸಿಕೊಂಡು ಬರುತ್ತಿರುವ ಮಾನವೀಯ ಮೌಲ್ಯಗಳಿಗೆ ಆದ ದೊಡ್ಡ ಕಳಂಕ ಎಂದು ನಾವು ಭಾವಿಸುತ್ತೇವೆ. ಏನೂ ಆಗಿಲ್ಲವೆಂಬಂತೆ ಗೃಹ ಇಲಾಖೆ ಇರುವುದನ್ನು ಕಂಡು ಮನಸ್ಸಿಗೆ ಬಹಳ ಬೇಸರವೂ ಆಗಿದೆ ಎಂದರು.
ಕೊಲೆಪಾತಕರಿಗೆ ಮಾಡಿರುವ ಸನ್ಮಾನ, ಕೊಲೆಗೆ ನೀಡಿರುವ ಪ್ರಚೋದನೆಯಾಗಿದೆ, ಹಿಂಸೆಗೆ ಒದಗಿಸಿರುವ ಸಾಮಾಜಿಕ ಮನ್ನಣೆಯಾಗಿದೆ. ಕರ್ನಾಟಕದ ಪ್ರಜ್ಞಾವಂತ ಜನರೆಲ್ಲರೂ ಈ ಪ್ರಚೋದನಕಾರಿ ನಡತೆಯನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ ಹಾಗೂ ಗೃಹ ಸಚಿವರ ಮುಂದೆ ಈ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇವೆ ಎಂದು ಹೇಳಿದರು.
1. ಗೌರಿ ಹಂತಕರಿಗೆ ಸನ್ಮಾನ ಮಾಡಿರುವ ವ್ಯಕ್ತಿಗಳ ಮೇಲೆ ಕೊಲೆ ಪ್ರಚೋದನೆಯಡಿ ಕೇಸು ದಾಖಲಿಸಬೇಕು.
2. ಹಿಂಸೆ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕೋಮುವಾದಿ ಸಂಘಟನೆಗಳ ಮೇಲೆ ಕ್ರಮ ಜರುಗಿಸಬೇಕು.
3. ಗೌರಿ ಕೊಲೆಯ ವಿಚಾರಣೆಯನ್ನು ತ್ವರಿತಗೊಳಿಸಿ ಹಂತಕರಿಗೆ ಶೀಘ್ರವೇ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.
ಮೇಲ್ಕಂಡ ಹಕ್ಕೊತ್ತಾಯಗಳೊಂದಿಗೆ ಸರ್ಕಾರದ ಮತ್ತು ಸಮಾಜದ ಗಮನ ಸೆಳೆಯಲು ಅಕ್ಟೋಬರ್ 22 ರಂದು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸರ್ಕಾರ ನಾಗರೀಕರ ಈ ಒತ್ತಾಯಕ್ಕೆ ಕೂಡಲೇ ಸ್ಪಂದಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದರು.
ಕವಿತಾ ಲಂಕೇಶ್, ಇಂದಿರಾ ಲಂಕೇಶ್, ತೀಸ್ತಾ ಸೆಟಲ್ವಾದ್, ಗಣೇಶ್ ದೇವಿ, ವಿ.ಎಸ್. ಶ್ರೀಧರ್, ಫಾಧರ್ ಜೆರಾಲ್ಡ್, ಚುಕ್ಕಿ ನಂಜುಂಡಸ್ವಾಮಿ, ಡಾ..ಸಭೀಹಾ. ಡಾ. ಭೂಮೀಗೌಡ, ದೀಪು, ಪ್ರೋ. ಶ್ರೀಕಂಠ ಕೂಡಿಗೆ, ರಾಜಲಕ್ಷ್ಮಿ ಅಂಕಲಗಿ, ನಗರಗೆರೆ ರಮೇಶ್, ರಘುನಂದನ, ಶ್ರೀಪಾದ ಭಟ್, ಕೆ.ಎಲ್. ಅಶೋಕ್, ಕಲ್ಕುಳಿ ವಿಠಲ್ ಹೆಗ್ಗಡೆ, ಆದಿತ್ಯ ಭಾರದ್ವಜ್, ಹ.ಮಾ . ರಾಮಚಂದ್ರ, ಇರ್ಷದ್ ಅಹ್ಮದ್ ದೇಸಾಯಿ, ಶ್ರೀನಾಥ್ ಪೂಜಾರ್, ಕಲೀಮುಲ್ಲ, ಶಶಾಂಕ್, ಬಸವರಾಜ ಸೂಳಿಭಾವಿ, ಸಿರಿಗೌರಿ ಬೆಂಗಳೂರು, ಎಂ.ಆರ್. ನಂದನ್, ಎಂ. ಕೆ. ಮಾಧವಿ, ವರದರಾಜೇಂದ್ರ, ಬಿ.ಟಿ.ಲಲಿತಾ ನಾಯಕ್, ಪ್ರೊ. ಕೆ. ಫಣಿರಾಜ್ ಉಡುಪಿ, ಹೇಮಲತಾ ಶೆಣೈ, ಸಿರಿಮನೆ ನಾಗರಾಜ್, ಡಾ. ರಹಮತ್ ತರೀಕೆರೆ, ಪಿ.ಎಸ್. ಲಕ್ಷ್ಮಿ ನಾರಾಯಣ ರಾವ್, ವಾಸು.ಎಚ್.ವಿ, ಚಂದ್ರಪ್ರಭ ಕಠಾರಿ, ಕರುಣಾಕರ ಶೆಟ್ಟಿ, ನೂರ್ ಶ್ರೀಧರ್, ಶಿವಮೊಗ್ಗ ರಮೇಶ್, ಎಂ. ಅಬ್ದುಲ್ ರೆಹಮಾನ್ ಪಾಷ, ಯಡೂರು ಮಹಾಬಲ, ಜಿ.ಎಂ. ಗಾಡ್ಕರ್, ಮಂಜುನಾಥ ಕೊಪ್ಪಳ, ಮಲ್ಲಿಗೆ ಸಿರಿಮನೆ, ಗಿರೀಶ್ ಬಾಬು,
ಎಂ.ನಾಗರಾಜ ಶೆಟ್ಟಿ, ಗೋಪಾಲ ಕೃಷ್ಣ ಟಿಕೆಹಳ್ಳಿ, ಅಮ್ಜದ್ ಪಾಷ, ಚಂದ್ರಹಾಸ. ಕೆ, ಜೆ.ಎಂ.ವೀರಸಂಗಯ್ಯ, ಡಾ. ರತಿರಾವ್, ಭಾರದ್ವಾಜ್, ನಾ. ದೀವಾಕರ್ ಮೈಸೂರು, ಆರ್ . ಕುಮಾರ್, ಸಾಹಿತಿಗಳು ದಿನೇಶ್ ಕುಮಾರ್ ಎಸ್.ಸಿ.
ಇದನ್ನೂ ನೋಡಿ: ಗೌರಿ ಲಂಕೇಶ್ ಹಂತಕರಿಗೆ ಸನ್ಮಾನ : ಬಹುದೊಡ್ಡ ಅಪಾಯಕಾರಿ ನಡೆ – ಕವಿತಾ ಲಂಕೇಶ್ Janashakthi Media