ಉತ್ತರಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಸತತ ಎರಡನೇ ಗೆಲುವು ಪಡೆದಿದೆ. ಕೋಮು ಧ್ರುವೀಕರಣವನ್ನು ತೀವ್ರಗೊಳಿಸಿ, ಮಾಧ್ಯಮದ ದೊಡ್ಡ ವರ್ಗಗಳ ಮೇಲಿನ ನಿಯಂತ್ರಣ ಮತ್ತು ಅಪಾರ ಹಣಬಲದಿಂದ ಬಿಜೆಪಿ ಕಡಿಮೆ ಬಹುಮತದೊಂದಿಗೆ ಸರ್ಕಾರವನ್ನು ಉಳಿಸಿಕೊಂಡಿದೆ. ಜನರು ಎದುರಿಸುತ್ತಿರುವ ಅಪಾರ ಆರ್ಥಿಕ ಸಂಕಷ್ಟಗಳ ಹೊರತಾಗಿಯೂ, ಉಚಿತ ಆಹಾರಧಾನ್ಯಗಳನ್ನು ಒದಗಿಸುವಂತಹ ಪರಿಹಾರ ಕ್ರಮಗಳು ಪ್ರಭಾವ ಬೀರಿವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಇಂದು ಪ್ರಕಟವಾಗಿರುವ ವಿಧಾನಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ಟಿಪ್ಪಣಿ ಮಾಡುತ್ತ ಹೇಳಿದೆ.
ಉತ್ತರಾಖಂಡ, ಗೋವಾ ಮತ್ತು ಮಣಿಪುರ ಚುನಾವಣೆಗಳನ್ನೂ ಬಿಜೆಪಿ ಗೆದ್ದಿದೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಭರ್ಜರಿ ಜಯ ಪಡೆದಿದೆ. ಪಂಜಾಬ್‌ನ ಜನತೆ ಎರಡು ಪಾರಂಪರಿಕ ಪಕ್ಷಗಳಾದ ಕಾಂಗ್ರೆಸ್ ಮತ್ತು ಅಕಾಲಿದಳವನ್ನು ತಿರಸ್ಕರಿಸಿ ಒಂದು ನಿರ್ಣಾಯಕ ಬದಲಾವಣೆಗೆ ಮತ ಹಾಕಿದ್ದಾರೆ ಎಂದು ಅದು ಅಭಿಪ್ರಾಯ ಪಟ್ಟಿದೆ.
ಒಟ್ಟಾರೆಯಾಗಿ, ಈ ಫಲಿತಾಂಶಗಳು ಬಲಪಂಥೀಯ ರಾಜಕೀಯದ ಪ್ರಾಬಲ್ಯ ಮುಂದುವರಿಯುತ್ತಿರುವುದನ್ನು ಸೂಚಿಸುತ್ತವೆ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ನೂತನ ತಂತ್ರಗಳನ್ನು ರೂಪಿಸುತ್ತವೆ ಮತ್ತು ಹಿಂದುತ್ವ-ಕಾರ್ಪೊರೇಟ್ ಆಳ್ವಿಕೆ, ಅದರ ಧೋರಣೆಗಳು ಹಾಗೂ ಬೆಳೆಯುತ್ತಿರುವ ನಿರಂಕುಶಾಧಿಕಾರದ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುತ್ತವೆ ಎಂದು ಸಿ[ಇಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.