ಬೆಂಗಳೂರು: ಕರ್ನಾಟಕದಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ನ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ ಇಬ್ಬರಿಗೆ ದೃಢಪಟ್ಟಿದ್ದವು. ಅವರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಖಾಸಗಿ ಲ್ಯಾಬ್‌ನಿಂದ ಕೋವಿಡ್ ನೆಗಟಿವ್ ವರದಿ ಪಡೆದ ಬಳಿಕ ಈತ ಪರಾರಿಯಾಗಿದ್ದಾನೆ ಎಂದು ಸರ್ಕಾರ ತಿಳಿಸಿದೆ. ಇನ್ನು ಈ ನಡುವೆ ದಕ್ಷಿಣ ಆಫ್ರಿಯಾದಿಂದ ರಾಜ್ಯಕ್ಕೆ ಆಗಮಿಸಿದವರಲ್ಲಿ ಹತ್ತು ಮಂದಿ ಪ್ರಯಾಣಿಕರು ಕೂಡಾ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದು, ಅವರ ಹುಡುಕಾಟ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್ ಅಶೋಕ್ ಓಮಿಕ್ರಾನ್ ಬಗ್ಗೆ ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿ “ಇಂದು ರಾತ್ರಿಯ ವೇಳೆಗೆ ನಾಪತ್ತೆಯಾದ ಹತ್ತು ಮಂದಿಯನ್ನು ಪತ್ತೆ ಹಚ್ಚಿ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಕೋವಿಡ್ ಪರೀಕ್ಷೆ ನಡೆಸಿ ಅದರ ವರದಿ ಬರುವವರೆಗೂ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಅವಕಾಶ ನೀಡುವುದಿಲ್ಲʼʼ ಎಂದು ತಿಳಿಸಿದ್ದಾರೆ.
ಓಮಿಕ್ರಾನ್ ಸೋಂಕು ಕಾಣಿಸಿಕೊಂಡ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬರು ಈಗ ಪರಾರಿಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ. ಅದೇ ಸಂದರ್ಭದಲ್ಲಿ ಆಗಮಿಸಿದ್ದ ಸುಮಾರು 57 ಮಂದಿಯನ್ನು ಪರೀಕ್ಷಿಸಲಾಗಿದೆ. ಅವರೆಲ್ಲರ ವರದಿಯು ನೆಗೆಟಿವ್ ಆಗಿದೆ. ಇನ್ನು ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿರುವ ಹತ್ತು ಮಂದಿ ತಮ್ಮ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅವರ ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿಯೂ ಲಭ್ಯವಾಗಿದೆ.
ಸಚಿವ ಆರ್ ಅಶೋಕ್ “ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಏನು ತಪ್ಪು ನಡೆದಿದೆ ಎಂಬುವುದನ್ನು ಪೊಲೀಸರು ತನಿಖೆ ನಡೆಸುತ್ತಾರೆ. ಅಲ್ಲಿದ್ದ ವ್ಯಕ್ತಿಯು ಪರಾರಿ ಆಗಿದ್ದಾನೆ” ಎಂದು ಹೇಳಿದರು. ಇನ್ನು ಓಮಿಕ್ರಾನ್ ನಾಪತ್ತೆಯಾದ 66 ವರ್ಷದ ದಕ್ಷಿಣ ಆಫ್ರಿಕಾದ ಪ್ರಜೆಯು ಸಂಪೂರ್ಣವಾಗಿ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾನೆ. ಭಾರತಕ್ಕೆ ಆಗಮಿಸಿದ ದಿನ ಹೋಟೆಲ್‌ನಲ್ಲಿ ಇದ್ದವರು ಬಳಿಕ ಕೋವಿಡ್ ಇರುವುದು ದೃಢಪಟ್ಟಿದೆ. ಆ ಬಳಿಕ ಕೋವಿಡ್ ನೆಗೆಟಿವ್ ಕೂಡಾ ವರದಿ ಬಂದಿದೆ.
ದಕ್ಷಣ ಆಫ್ರಿಕಾದಿಂದ ಆಗಮಿಸಿದವರು ಉಳಿದಿಕೊಂಡಿದ್ದ ಹೋಟೆಲ್‌ಗೆ ಸರ್ಕಾರಿ ವೈದ್ಯರು ಭೇಟಿ ಮಾಡಿದಾಗ, ರೋಗಲಕ್ಷಣಗಳಿಲ್ಲದಿರುವುದು ಕಂಡುಬಂದಿತು. ಆದ್ದರಿಂದ ಪ್ರತ್ಯೇಕವಾಗಿ ಇರಿಸಲಾಗಿತ್ತು. ದಕ್ಷಿಣ ಆಫ್ರಿಕಾದಂತಹ ಅಪಾಯದ ರಾಷ್ಟ್ರ ಎಂದು ಗೊತ್ತುಪಡಿಸಿದ ರಾಷ್ಟ್ರಗಳಲ್ಲಿ ಒಂದಾದ ಕಾರಣ, ಮಾದರಿಗಳನ್ನು ಮತ್ತೆ ಸಂಗ್ರಹ ಮಾಡಿ ನವೆಂಬರ್ 22 ರಂದು ಜಿನೋಮ್ ಸೀಕ್ವೆಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದ 24 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನೆಗೆಟಿವ್ ಎಂದು ಕಂಡುಬಂದಿದೆ. ಅಧಿಕಾರಿಗಳನ್ನು ಎರಡನೇ ಸಂಪರ್ಕವನ್ನು ಕೂಡಾ ಪರೀಕ್ಷೆಗೆ ಒಳಪಡಿಸಿದ್ದಾರೆ.
ದೂರವಾಣಿ ಸಂಪರ್ಕಕ್ಕೂ ಸಿಗದ ಈ ಎಲ್ಲ ಪ್ರಯಾಣಿಕರು ದಕ್ಷಿಣ ಆಫ್ರಿಕಾದಿಂದ ನವೆಂಬರ್ 12 ಮತ್ತು 22ರ ಅವಧಿಯಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ಯಾವುದೇ ಪರಿಸ್ಥಿತಿಯನ್ನೂ ನಿಭಾಯಿಸಲು ಸಿದ್ಧವಿರುವುದಾಗಿ ತಿಳಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಸಂಪರ್ಕಕ್ಕೆ ಸಿಗದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.