‘ಓಮಿಕ್ರಾನ್’ ಕೋವಿಡ್‌ ರೂಪಾಂತರಿ: ಹೆಚ್ಚು ಜಾಗರೂಕತೆ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೀವಾ: ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ಸಿನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಎಲ್ಲರೂ ಜಾಗರೂಕರಾಗಿ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದೆ.

ವಿಶ್ವದಲ್ಲಿ ತಲ್ಲಣ ಮೂಡಿಸುತ್ತಿರುವ ಬಿ. 1.1. 529 ಕೊರೊನಾ ರೂಪಾಂತರಿ ತಳಿಯು ಎಚ್ಚು ಆತಂಕಕಾರಿಯಾದ ಪ್ರಬೇಧವಾಗಿದೆ. ಇದು ಡೆಲ್ಟಾ ರೂಪಾಂತರಕ್ಕಿಂತಲೂ ಅತೀ ವೇಗವಾಗಿ ಹರಡುವ ಸಾಧ್ಯತೆಗಳಿವೆ. ಇದೇ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಮಹತ್ವದ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಹೊಸ ತಳಿ ‘ಆತಂಕಕಾರಿ ರೂಪಾಂತರಿ’ ಎಂದು ಗುರುತಿಸಿದೆ. ಇದಕ್ಕೆ ಓಮಿಕ್ರಾನ್ ಎಂದು ನಾಮಕರಣಗೊಳಿಸಿದೆ.

ಹೊಸ ಕೊರೊನಾ ವೈರಸ್ ರೂಪಾಂತರದ ಕ್ಷೀಪ್ರಗತಿಯಲ್ಲಿ ಪತ್ತೆ ಹಚ್ಚುವುದು ಮತ್ತು ಬೇರೆಡೆ ಪ್ರಕರಣಗಳು ಉಲ್ಬಣವಾಗದಂತೆ ಎಚ್ಚರವಹಿಸಬೇಕೆಂದು ಹೇಳಿರುವ ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾ ಪ್ರದೇಶದ ದೇಶಗಳನ್ನು ಕಣ್ಗಾವಲು ಹೆಚ್ಚಿಸಲು, ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನು ಬಲಪಡಿಸಲು ಮತ್ತು ಲಸಿಕೆ ನೀಡುವಿಕೆಯನ್ನು ಹೆಚ್ಚಿಸಿಕೊಳ್ಳು ಸೂಚಿಸಿದೆ.

ಹಬ್ಬಗಳು ಮತ್ತು ಆಚರಣೆಗಳು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡಿರಬೇಕು ಮತ್ತು ಜನಸಂದಣಿ ಮತ್ತು ದೊಡ್ಡ ಕೂಟಗಳನ್ನು ತಪ್ಪಿಸಬೇಕು.

ಕೋವಿಡ್‌ ಪ್ರಕರಣಗಳು ವಿಶ್ವದ ಹೆಚ್ಚಿನ ದೇಶಗಳಲ್ಲಿ ಕ್ಷೀಣಿಸುತ್ತಿವೆಯಾದರೂ, ಪ್ರಪಂಚದ ಬೇರೆಡೆ ಪ್ರಕರಣಗಳ ಉಲ್ಬಣವು ಮತ್ತು ಕಾಳಜಿಯ ಹೊಸ ರೂಪಾಂತರದ ದೃಢೀಕರಣವು ನಿರಂತರ ಅಪಾಯದ ಸೂಚನೆಯಾಗಿದೆ. ನಾವು ನಮ್ಮ ಕೆಲಸವನ್ನು ಮುಂದುವರಿಸುವ ಅಗತ್ಯವನ್ನು ಹೊಂದಿದೆ. ವೈರಸ್‌ನಿಂದ ರಕ್ಷಿಸಲು ಮತ್ತು ಅದರ ಹರಡುವಿಕೆಯನ್ನು ತಡೆಯಲು ಉತ್ತಮವಾಗಿದೆ ಎಂದು ಆಗ್ನೇಯ ಏಷ್ಯಾ ವಲಯದ ವಿಶ್ವ ಆರೋಗ್ಯ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಓಮಿಕ್ರಾನ್ ಎಂಬುದು ಗ್ರೀಕ್ ಹೆಸರಾಗಿದ್ದು, ಹೊಸ ರೂಪಾಂತರಿಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆಓಮಿಕ್ರಾನ್

ಹೊಸ ರೂಪಾಂತರಿ ಓಮಿಕ್ರಾನ್ ತಳಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದೆ. ನಂತರ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ವರದಿಯಾಗಿವೆ. ಇದು ಇತರ ರೂಪಾಂತರಗಳಿಗಿಂತ ವೇಗವಾಗಿ ಹರಡುವ ಲಕ್ಷಣಗಳನ್ನು ಒಳಗೊಂಡಿದೆ. ಈ ಹಿಂದೆ ಕೊರೊನಾ ಸೋಂಕಿಗೆ ಒಳಗಾದವರು ಹಾಗೂ ಲಸಿಕೆ ಹಾಕಿಸಿಕೊಂಡವರಿಗೂ ವೈರಸ್‌ಗೆ ತುತ್ತಾಗುವ ಅಪಾಯವಿದೆ ಎಂದು  ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಆತಂಕಕಾರಿ ರೂಪಾಂತರಿ

ಸಾಮಾನ್ಯವಾಗಿ, ವೃರಸ್‌ ಪ್ರಸರಣ ತೀವ್ರವಾಗಿದ್ದು, ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಸಂದರ್ಭಗಳಲ್ಲಿ ಅದನ್ನು ಆತಂಕಕಾರಿ ರೂಪಾಂತರಿ ಪರಿಗಣಿಸಲಾಗುತ್ತದೆ. ವೈರಸ್‌ಗಳಲ್ಲಿ ಆನುವಂಶಿಕ ರೂಪಾಂತರಗಳು ಸಂಭವಿಸಿ, ರೋಗದ ಹರಡುವಿಕೆ, ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಆಲ್ಫಾ, ಬೀಟಾ, ಗಾಮಾ, ಡೆಲ್ಟಾಗಳನ್ನು ಆತಂಕಕಾರಿ ರೂಪಾಂತರಿಗಳೆಂದು ಗುರುತಿಸಿದೆ. ಹೊಸದಾಗಿ ಓಮಿಕ್ರಾನ್‌ ಆ ಪಟ್ಟಿಗೆ ಸೇರಿದೆ. ಇದರ ಜೊತೆಗೆ, ಇತರ ಎರಡು ರೀತಿಯ ವೈರಸ್‌ಗಳನ್ನು ‘ಆಸಕ್ತಿಯ ರೂಪಾಂತರಿʼ ಎಂದು ಗುರುತಿಸಿದ್ದು, ಅವುಗಳೆಂದರೆ ಲ್ಯಾಮ್ಡಾ ಮತ್ತು ಮೂ. ಈ ಪೈಕಿ ಲ್ಯಾಮ್ಡಾ ಮೊದಲು ಡಿಸೆಂಬರ್ 2020 ರಲ್ಲಿ ಪೆರುವಿನಲ್ಲಿ ಕಾಣಿಸಿಕೊಂಡಿತ್ತು. ಮೂ ಈ ವರ್ಷದ ಜನವರಿಯಲ್ಲಿ ಕೊಲಂಬಿಯಾದಲ್ಲಿ ಪತ್ತೆಯಾಗಿತ್ತು.

Donate Janashakthi Media

Leave a Reply

Your email address will not be published. Required fields are marked *