ಒಲಂಪಿಕ್ಸ್: ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಪಿ ವಿ ಸಿಂಧುಗೆ ನಿರಾಶೆ

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಒಲಿಂಪಿಕ್ಸ್‌ನ  ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕೈಗೂಡಲಿಲ್ಲ. ಇಂದು ನಡೆದ ಬ್ಯಾಡ್ಮಿಂಟನ್‌ ಪಂದ್ಯದ ಮಹಿಳೆಯರ ಸಿಂಗಲ್ಸ್‌ ಸೆಮಿಫೈನಲ್ಸ್‌ನಲ್ಲಿ ಪಿ ವಿ ಸಿಂಧು ಸೋಲು ಅನುಭವಿಸಿದ್ದಾರೆ.

ಸದ್ಯ ಸಿಂಧು ಕಂಚಿನ ಪದಕಕ್ಕಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಸೆಮಿಫೈನಲ್‌ನ ಪಂದ್ಯದ ಎರಡು ನೇರ ಸೆಟ್ ಗಳಲ್ಲಿ ಪಂದ್ಯವನ್ನು ಕೈ ಚೆಲ್ಲಿದ ಸಿಂಧು, ಬಂಗಾರ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಸಿಂಧು ಈ ಪಂದ್ಯದಲ್ಲಿ ಸಾಕಷ್ಟು ಹೋರಾಟ ನಡೆಸಿದರು. ಇಬ್ಬರ ನಡುವಿನ ಪಂದ್ಯವು ಬಹಳ ರೋಚಕ ಮತ್ತು ಕಠಿಣವಾಗಿತ್ತು.

ಇದನ್ನು ಓದಿ: ಒಲಿಂಪಿಕ್ಸ್‌: ಭಾರತ ಮಹಿಳಾ ಹಾಕಿ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಸಾಧ್ಯತೆ

40 ನಿಮಿಷ ನಡೆದ ಆಟದಲ್ಲಿ ಸಿಂಧು 18-21, 12-21ರಿಂದ ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿದ್ದ ತೈ ಜು ಯಿಂಗ್ ವಿರುದ್ಧ ಸೋಲು ಕಂಡಿದ್ದಾರೆ. ಮೂರನೇ ಒಲಿಂಪಿಕ್ಸ್ ಆಡುತ್ತಿರುವ ತೈ ಜು ಯಿಂಗ್ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪದಕ ಪಡೆಯಲಿದ್ದಾರೆ.

ಮೊದಲ ಸೆಟ್​ನಲ್ಲಿ, ಸಿಂಧು ಆರಂಭಿಕ ಕ್ಷಣಗಳಲ್ಲಿ ಪ್ರಾಬಲ್ಯ ಸಾಧಿಸಿದರು. ಆದರೆ ವಿರಾಮದ ನಂತರ, ತೈ ತ್ಸು ಮೊದಲ ಗೇಮ್ ಗೆಲ್ಲಲು ಅದ್ಭುತ ಆಟವನ್ನು ಆಡಿದರು. ತೈ ತ್ಸು ಸತತ ಎರಡು ಅಂಕಗಳೊಂದಿಗೆ ಪ್ರಬಲ ಆರಂಭ ನೀಡಿದರು. ಸಿಂಧು ಮತ್ತೊಮ್ಮೆ 5-2ರಿಂದ ಮುನ್ನಡೆ ಸಾಧಿಸಿದರು. ಮುಂದುವರೆದ ಆಟದಲ್ಲಿ ಚೀನಾದ ತೈಪೆ 8-10 ಅಂಕಗಳನ್ನು ಗಳಿಸಿದ್ದರು ಆದರೆ ಸಿಂಧು ಮತ್ತೊಮ್ಮೆ ಜಾಣ್ಮೆಯಿಂದ ಒಂದು ಅಂಕವನ್ನು ತೆಗೆದುಕೊಂಡು 11-8ರಲ್ಲಿ ಮುನ್ನಡೆ ಸಾಧಿಸಿ ವಿರಾಮ ತೆಗೆದುಕೊಂಡರು.

ವಿರಾಮದ ನಂತರ ತೈ ತ್ಸು ಸ್ಕೋರ್ ಅನ್ನು 11-11ರಲ್ಲಿ ಸಮಗೊಳಿಸಿದರು. ಇಲ್ಲಿಂದ ಇಬ್ಬರ ನಡುವೆ ದೊಡ್ಡ ಹೋರಾಟ ನಡೆಯಿತು. ಒಬ್ಬರು ಮುನ್ನಡೆ ಸಾಧಿಸಿದರೆ, ತಕ್ಷಣವೇ ಇನ್ನೊಬ್ಬರು ಅದನ್ನು ಸಮಗೊಳಿಸುತ್ತಿದ್ದರು. ಸ್ಕೋರ್ 12-12, 13-13, 14-14 ನಂತರ ಸಿಂಧು 16-14ರ ಮುನ್ನಡೆ ಪಡೆಯಲು ಪ್ರಯತ್ನಿಸಿದರು. ಆದರೆ ಚೀನಾದ ತೈಪೆ ಆಟಗಾರ್ತಿ ಎರಡು ಅಂಕಗಳೊಂದಿಗೆ ಸ್ಕೋರ್ ಅನ್ನು ಸಮಗೊಳಿಸಿದರು. ಸ್ಕೋರ್ 18-18ರಲ್ಲಿ ಸಮವಾಗಿತ್ತು. ನಂತರ ಇಲ್ಲಿಂದ ತೈ ತ್ಸು ಸತತ ಮೂರು ಅಂಕಗಳೊಂದಿಗೆ ಮೊದಲ ಗೇಮ್ ಗೆದ್ದರು.

ಇದನ್ನು ಓದಿ: ಡಿಸ್ಕಸ್ ಥ್ರೊ: ಫೈನಲ್‌ ಪ್ರವೇಶಿಸಿ ಶ್ರೇಷ್ಠ ಸಾಧಕಿ ಕಮಲ್‌ಪ್ರೀತ್ ಕೌರ್‌

ಎರಡನೇ ಸೆಟ್​ನಲ್ಲಿ, ತೈ ತ್ಸು ಮೊದಲ ಪಾಯಿಂಟ್ ಪಡೆದರು. ಮೊದಲ ಪಂದ್ಯದಂತೆ ಪಂದ್ಯವು ಬಿಗಿಯಾಗುತ್ತಿತ್ತು ಆದರೆ ಸಿಂಧು, ತೈ ತ್ಸು ಅವರ ತಂತ್ರದಲ್ಲಿ ಎಲ್ಲೋ ಸಿಲುಕಿರುವಂತೆ ತೋರುತ್ತಿತ್ತು. ಶೀಘ್ರದಲ್ಲೇ ತೈ ತ್ಸು 8-5 ರಿಂದ ಮುಂದಿದ್ದರು. ಎರಡನೇ ಗೇಮ್‌ನಲ್ಲಿ ತೈ ತ್ಸು 11-7ರ ಮುನ್ನಡೆ ಸಾಧಿಸಿದರು. ಎರಡನೇ ಆಟದಲ್ಲಿ, ತೈ ತ್ಸು ತನ್ನ ವ್ಯತ್ಯಾಸವನ್ನು ಅದ್ಭುತವಾಗಿ ಬಳಸಿ ಸಿಂಧು ಮೇಲೆ ಅಂಕಗಳನ್ನು ಸಂಗ್ರಹಿಸಲು ಒತ್ತಡ ಹೇರಿದರು. ಇಲ್ಲಿಂದ ತೈ ತ್ಸು ಸಿಂಧುಗೆ ಹಿಂತಿರುಗುವ ಅವಕಾಶವನ್ನು ನೀಡಲಿಲ್ಲ ಮತ್ತು ಆಟವನ್ನು ಸುಲಭವಾಗಿ ತನ್ನತ್ತ ಎಳೆದುಕೊಂಡರು. ಈ ಮೂಲಕ ಫೈನಲ್​ಗೆ ಪ್ರವೇಶ ಪಡೆದರು.

Donate Janashakthi Media

Leave a Reply

Your email address will not be published. Required fields are marked *