ಬೆಂಗಳೂರು | ಹಳೆ ಪೈಪ್‌ಲೈನ್‌ ಒಡೆದಿರುವುದೇ ಕಲುಷಿತ ನೀರು ಸರಬರಾಜಿಗೆ ಮುಖ್ಯ ಕಾರಣ

ಬೆಂಗಳೂರು: ಕಲುಷಿತ ನೀರು ಸರಬರಾಜು ಆಗಿರುವುದಕ್ಕೆ ಲಿಂಗರಾಜಪುರದಲ್ಲಿ ಕೆಲವು ದಿನಗಳಿಂದ ಹಳೆ ಪೈಪ್‌ಲೈನ್‌ ಒಡೆದಿರುವುದೇ ಮುಖ್ಯ ಕಾರಣ ಎಂದು ಜಲಮಂಡಳಿ ತಿಳಿಸಿದೆ.

40 ವರ್ಷ ಹಳೆಯದಾದ ಪೈಪ್‌ಲೈನ್ ತುಕ್ಕು ಹಿಡಿದಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಇದರಿಂದಾಗಿ ನೀರು ಕಲುಷಿತಗೊಳ್ಳುತ್ತಿತ್ತು ಎಂದು ಮಂಡಳಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇದನ್ನೂ ಓದಿ : ಜಗತ್ತು ಅಧ್ಯಕ್ಷ ಟ್ರಂಪ್ ಮುಂದೆ ಮಂಡಿಯೂರಲ್ಲ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಈಗಾಗಲೇ ಬಡಾವಣೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು. ಅದನ್ನು ಮುಂದುವರಿಸಲಾಗುತ್ತಿದೆ. ಲಿಂಗರಾಜಪುರಂನಲ್ಲಿ ಕಾಣಿಸಿಕೊಂಡಿದ್ದ ಕಲುಷಿತ ನೀರಿನ ಸಮಸ್ಯೆಯ ಮೂಲವನ್ನು ರೋಬೋಟಿಕ್ ತಂತ್ರಜ್ಞಾನ ಬಳಸಿಕೊಂಡು ಪತ್ತೆಹಚ್ಚಲಾಗಿದೆ.

ವಾರದ ಹಿಂದೆಯೇ ಲಿಂಗರಾಜಪುರ ಬಡಾವಣೆಯ ಕನಕದಾಸ ಲೇಔಟ್‌, ಕೆಎಸ್‌ಆರ್‌ಟಿಸಿ ಲೇಔಟ್‌ನ ಹಲವು ಮನೆಗಳಿಗೆ ಕಲುಷಿತ ನೀರು ಹರಿದು ಬರುತ್ತಿರುವ ಕುರಿತು ಸ್ಥಳೀಯರು ಜಲಮಂಡಳಿಗೆ ದೂರು ನೀಡಿದ್ದರು. ಆದರೆ ಕ್ರಮ ಆಗಿರಲಿಲ್ಲ. ಸಮಸ್ಯೆ ತೀವ್ರಗೊಳ್ಳುತಿದ್ದಂತೆ ಎಚ್ಚೆತ್ತ ಜಲಮಂಡಳಿ ಸಮಸ್ಯೆ ಮೂಲ ಪತ್ತೆ ಮಾಡುವ ಜತೆಗೆ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕೈಗೊಂಡಿತ್ತು.

ಇದರಿಂದ ಈಗ ಮತ್ತೆ ಸಮಸ್ಯೆ ಉಲ್ಬಣಿಸಿದೆ. ಕಾವೇರಿ ನೀರಿಗೆ ಚರಂಡಿ ನೀರು ಸೇರಿಕೊಂಡು ಮನೆ ಸೇರುತ್ತಿದೆ. ಕೆಲವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದಿದ್ದಾರೆ’ ‘ಈ ಭಾಗದಲ್ಲಿ ಆಗಾಗ ಕಲುಷಿತ ನೀರು ಸರಬರಾಜು ಆಗುತ್ತಲೇ ಇರುತ್ತದೆ. ದೂರು ನೀಡಿದಾಗ ಜಲಮಂಡಳಿ ಸಿಬ್ಬಂದಿ ಸರಿಪಡಿಸಿದರೂ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.

‘ಹಳೆಯ ಪೈಪ್‌ಲೈನ್ ಅನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಪೈಪ್ ಬದಲಾವಣೆ ಕಾರ್ಯ ಮುಗಿದ ತಕ್ಷಣ ಶುದ್ಧ ನೀರು ಸರಬರಾಜು ಪುನರಾರಂಭವಾಗಲಿದೆ’ ಎಂದು ಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಇದನ್ನೂ ನೋಡಿ : ವೆನೆಜುವೆಲಾ | ಅಮೆರಿಕ ಪುಂಡಾಟವನ್ನು ಖಂಡಿಸಿ ಭಾರತದಾದ್ಯಂತ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *