ಪದ್ಮಶ್ರೀ ಪುರಸ್ಕೃತ 90 ವಯಸ್ಸಿನ ಕಲಾವಿದನನ್ನು ಸರ್ಕಾರಿ ಮನೆಯಿಂದ ಹೊರದಬ್ಬಿದ ಸರಕಾರ

ನವದೆಹಲಿ: 90 ವರ್ಷದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಒಡಿಸ್ಸಿ ನೃತ್ಯಗಾರ ಗುರು ಮಾಯಧರ್ ರಾವುತ್ ಅವರನ್ನು ದೆಹಲಿಯ ಏಷ್ಯನ್ ಗೇಮ್ಸ್ ಗ್ರಾಮದಲ್ಲಿರುವ ಸರ್ಕಾರಿ ವಸತಿಗೃಹದಿಂದ ನಿನ್ನೆ ಹೊರಹಾಕಲಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

2014 ರಲ್ಲಿ ವಸತಿಯನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ಹೊರಹಾಕುವಿಕೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಅವರು ಮತ್ತು ಇತರ ಕಲಾವಿದರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಕೇಸ್​ನಲ್ಲಿ ಸೋತರು. ಅವರಿಗೆ ಬಂಗಲೆಯಿಂದ ಹೊರಹೋಗಲು ಏಪ್ರಿಲ್ 25 ಗಡುವು ನೀಡಲಾಗಿತ್ತು. ನಿಗದಿ ಪಡಿಸಿದ ಸಮಯಕ್ಕೆ ಮನೆ ಖಾಲಿ ಮಾಡಿಲ್ಲ ಎಂದು ಹಿರಿಯ ಕಲಾವಿದರನ್ನು ಸರಕಾರಿ ಮನೆಯಿಂದ ಹೊರ ದಬ್ಬಲಾಗಿದೆ.  90 ವರ್ಷದ ಮಾಯಧರ್ ರಾವುತ್ ಅವರ ಗೃಹೋಪಯೋಗಿ ವಸ್ತುಗಳು ಮತ್ತು ಪದ್ಮಶ್ರೀ ಪ್ರಶಸ್ತಿ ಗೌರವ ಫಲಕವೂ ಬೀದಿಯಲ್ಲಿ ಬಿದ್ದಿದ್ದ ದೃಶ್ಯ ಮನಕಲಕುವಂತಿದೆ.

ಪುತ್ರಿಯಿಂದ ಆಕ್ಷೇಪ : ಮಾಯಧರ್ ರಾವುತ್ ಅವರ ಪುತ್ರಿ ಮಧುಮಿತಾ ರಾವುತ್ ಅವರು ಸರ್ಕಾರದ ನಡೆಯನ್ನ ಟೀಕಿಸುತ್ತಾ ಉಚ್ಚಾಟನೆ ಕಾನೂನುಬದ್ಧವಾಗಿದ್ದರೂ ಅದನ್ನು ಕಾರ್ಯಾಚರಣೆಗೊಳಿಸಿದ ಆಕ್ಷೇಪಾರ್ಹವಾಗಿದೆ ಎಂದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಕಲಾವಿದರಿಗೆ ಗೌರವ ಸಿಗುತ್ತಿಲ್ಲ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಾಯಧರ್ ರಾವುತ್ ಅವರನ್ನು ಹೊರಹಾಕಿದ ನಂತರ, ಮೇ 2 ರೊಳಗೆ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಕೇಂದ್ರವು ಇತರ ಎಂಟು ಪ್ರಖ್ಯಾತ ಕಲಾವಿದರಿಗೆ ಸೂಚಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ಹಲವಾರು ಸೂಚನೆಗಳ ಹೊರತಾಗಿಯೂ ತಮ್ಮ ಸರ್ಕಾರಿ ವಸತಿಗಳಿಂದ ಹೊರಬರಲಿಲ್ಲ ಎಂದಿದ್ದಾರೆ. 1970 ರಲ್ಲಿ ಏಷ್ಯನ್ ಗೇಮ್ಸ್ ಗ್ರಾಮದಲ್ಲಿ ಬಾಡಿಗೆಗೆ ಸರ್ಕಾರಿ ಮನೆಗಳನ್ನು ಕಲಾವಿದರಿಗೆ ಮಂಜೂರು ಮಾಡಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ : ಹಿರಿಯ ಕಲವಾದರನ್ನು ಅದರಲ್ಲೂ ವಯಸ್ಸಾದ ಕಲಾವಿದರನ್ನು ಕೇಂದ್ರ ಸರಕಾರ ಮನೆಯಿಂದ ಹೊರದಬ್ಬಿರುವುದನ್ನು ನೋಡೊದರೆ, ಇದು ಮಾನವೀಯತೆ ಇಲ್ಲದ ಸರಕಾರ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.  ಸರಕಾರದ ಈ ನಡೆ ದೌರ್ಜನ್ಯದ ನಡೆ ಎಂದು ಕಲಾವಿದರು, ಸಾಹಿತಿಗಳು ಹಾಗೂ ಅಭಿಮಾನಿಗಳು ಆಕ್ರೋಶವನ್ನು ಹೊರ ಹಾಕಿದ್ದಾರೆ. ದೇಶಕ್ಕಾಗಿ ದುಡುದ ಕಲಾವಿದರನ್ನು ಮೋದಿ ಸರಕಾರ ಅವಮಾನಿಸುತ್ತಿದೆ ಎಂದು ಆರೋಪಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *