ಬೆಳಗಾವಿ: ಮೈಕ್ರೋ ಫೈನಾನ್ಸ್ ಮಾತ್ತು ಸಾಲಗಾರರ ಕಿರುಕುಳಗಳು ರಾಜ್ಯದಲ್ಲಿ ಹೆಚ್ಚಾಗುತಿದ್ದೂ, ಸಾಲಗಾರರ ಗಲಾಟೆಯಿಂದ ಮನನೊಂದ ದಂಪತಿಗಳು ಘಟಪ್ರಭಾ ನದಿಯ ಸೇತುವೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಮುಧೋಳದಲ್ಲಿ ನಡೆದಿದೆ.
ಮೃತರನ್ನು ಮಲ್ಲಪ್ಪ ಲಾಳಿ (55) ಹಾಗೂ ಪತ್ನಿ ಮಾದೇವಿ ಲಾಳಿ (50) ಎಂದು ಗುರುತಿಸಲಾಗಿದೆ.
ದಂಪತಿಗಳು ಮೆಟಗುಡ್ಡದಲ್ಲಿ ಸಾಲ ಮಾಡಿ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು, ಆದರೆ ದಿನನಿತ್ಯ ಸಾಲಗಾರ ಮನೆ ಹಾಗೂ ಅಂಗಡಿಯ ಬಳಿ ಹಣ ವಾಪಸ್ ನೀಡುವಂತೆ ಗಲಾಟೆ ಮಾಡುತ್ತಿದ್ದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: 7 ಕಂಪನಿ ಮತ್ತು ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್
ಸಾಲಗಾರರ ಕಿರುಕುಳ, ಹಾಗೂ ದಿನನಿತ್ಯ ಅವಮಾನದಿಂದ ಬೇಸತ್ತ ದಂಪತಿಗಳು ಡೆತ್ ನೋಟ್ ಬರೆದಿಟ್ಟು ಘಟಪ್ರಭಾ ನದಿಯ ಸೇತುವೆಯ ಕಬ್ಬಿಣದ ಪೈಪ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಡೆತ್ ನೋಟ್ ಆದಾರದ ಮೇಲೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: ಮಹಾತ್ಮ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭ ಸ್ಥಳ: ಸುವರ್ಣ ವಿಧಾನ ಸೌಧ ಆವರಣ, ಬೆಳಗಾವಿ