ಒಡಿಶಾ ರೈಲು ದುರಂತದಿಂದ ಬಚಾವ್ ಆಗಿದ್ದ ಚಿಕ್ಕಮಗಳೂರಿನ ಯಾತ್ರಿಕ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರು: ಒಡಿಶಾ ಭೀಕರ ರೈಲು ಅಪಘಾತದಲ್ಲಿ ಬದುಕುಳಿದಿದ್ದ ಕರ್ನಾಟಕ ಮೂಲದ ಯಾತ್ರಿಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ಸ್ಟೆಷನ್ನಲ್ಲಿ ನಡೆದಿದೆ.

ಧರ್ಮಪಾಲಯ್ಯ (61) ಮೃತ ದುರ್ದೈವಿ. ಇವರು ಕಳಸ ತಾಲೂಕಿನ ಕಳಕೋಡು ಗ್ರಾಮದ ನಿವಾಸಿ. ಕಳಸದಿಂದ ಸಮ್ಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಕನ್ನಡಿಗರಲ್ಲಿ ಧರ್ಮಪಾಲಯ್ಯ ಕೂಡ ಇದ್ದರು. ಯಾತ್ರಿ ಮುಗಿಸಿ ಹಿಂದಿರುಗುವಾಗ ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಧರ್ಮಪಾಲಯ್ಯರ ಮೃತದೇಹಕ್ಕಾಗಿ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಸಂಬಂಧಿಕರು ಕಾಯುತ್ತಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಹಸ್ತಾಂತರವಾಗಲಿದೆ.

ಒಡಿಶಾ ರೈಲು ದುರಂತದಿಂದ ಪಾರು : ಜೂನ್ 2ರಂದು ಒಡಿಶಾದ ಬಾಲಾಸೋರ್ ರೈಲು ನಿಲ್ದಾಣದ ಸಮೀಪದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 288 ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಪಘಾತಕ್ಕೀಡಾದ ರೈಲಿನಲ್ಲಿ ಧರ್ಮಪಾಲಯ್ಯ ಅವರು ಕೂಡ ಪ್ರಯಾಣ ಮಾಡಿದ್ದರು. ಆದರೆ, ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದರು. ಆದರೆ, ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *