ಜರ್ಸುಗುಗ(ಒಡಿಶಾ): ಒಡಿಶಾ ರಾಜ್ಯದ ಆರೋಗ್ಯ ಸಚಿವ ನಬಾ ದಾಸ್ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಹಾರಿಸಿದ ಗುಂಡು ಸಚಿವರ ಎದೆಗೆ ತಲುಗಿಲಿದೆ. ಸಚಿವರ ಚಿಂತಾಜನಕವಾಗಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದ್ದು, ಬಿಜು ಜನತಾ ದಳದ (ಬಿಜೆಡಿ) ಹಿರಿಯ ನಾಯಕರೂ ಆಗಿರುವ ನಬಾ ದಾಸ್ ವಾಹನದಿಂದ ಇಳಿಯುತ್ತಿದ್ದಾಗ ಅಪರಿಚಿತ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಗುಂಡಿನ ದಾಳಿಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ನಬಾ ದಾಸ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗುಂಡಿನ ದಾಳಿಯ ನಂತರ ಬಿಜೆಡಿ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ನಬಾ ದಾಸ್ ಅವರ ಅತ್ಯಂತ ಸಮೀಪದಿಂದ ಗುಂಡು ಹಾರಿಸಲಾಗಿದ್ದು, ಗುಂಡಿನ ದಾಳಿ ಪೂರ್ವಯೋಜಿತ ಕೃತ್ಯವೆಂದು ಅನುಮಾನಿಸಲಾಗಿದೆ. ಪೊಲೀಸ್ ಬೆಂಗಾವಲನ್ನೂ ಬೇಧಿಸಿ ಗುಂಡು ಹಾರಿಸಲಾಗಿದೆ. ಇದು ಭದ್ರತಾ ಲೋಪ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.