ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಬ್ಲಿಂಕ್‌ ಮಾಡಿದ ಆಕ್ಷೇಪಾರ್ಹ ಫೋಟೋ: ದೂರು ದಾಖಲು

ಬೆಂಗಳೂರು: ಹಾಸನ ಪೆನ್‌ಡ್ರೈವ್‌ ಹಗರಣ ಕೆಲ ರಾಜಕಾರಣಿಗಳ ಅಸಲಿ ರೂಪಗಳನ್ನ ಬಯಲು ಮಾಡುತ್ತಿದೆ. ಪೆನ್‌ಡ್ರೈವ್‌ ದೃಶ್ಯಗಳು ರಾಜಕೀಯ ಕಾರಣಕ್ಕೆ ರಿಲೀಸ್‌ ಆಗಿದೆ ಎಂಬುದು ಮತದಾರನಿಗೂ ಗೊತ್ತಿರುವ ವಿಚಾರವಾಗಿದೆ. ಇದರ ನಡುವೆ ಯಾರು ರಿಲೀಸ್‌ ಮಾಡಿದ್ದು ಈ ಪೆನ್‌ಡ್ರೈವ್‌ ಎಂಬುದಕ್ಕೆ ಸಂಬಂಧಿಸಿದಂತೆ ನಿನ್ನೆ ದೊಡ್ಡ ಬೆಳವಣಿಗಳು ನಡೆದಿದೆ. ಇದರ ನಡುವೆ ಕೆಲವು ಮಾರ್ಪಿಂಗ್‌ ದೃಶ್ಯಗಳು ಹರಿದಾಡುತ್ತಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಫೋಟೋಕ್ಕೆ ಆಕ್ಷೇಪಾರ್ಹ ಫೋಟೋವನ್ನು ಬ್ಲಿಂಕ್‌ ಮಾಡಿ ಸಿಂಕ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ಹೈಗ್ರೌಂಡ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೆಂಟ್‌ ದಾಖಲಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಎಂದೆಂದಿಗೂ ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಪರ

ಎಡಿಟೆಡ್‌ ಫೋಟೋವನ್ನು ಹರಿಬಿಟ್ಟು ಆ ಮೂಲಕ ಮಾನಹಾನಿಗೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಕಾನೂನು ಘಟಕ ಈ ದೂರು ನೀಡಿದೆ ಎನ್ನುವ ಮಾಹಿತಿ ಇದೆ.

ಇದನ್ನೂ ನೋಡಿ: ಕೇಂದ್ರ ಸರ್ಕಾರದ ಬರ ಪರಿಹಾರ ನೀಡಿಕೆ ಅನ್ಯಾಯ ಖಂಡಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *