ಬೆಂಗಳೂರು,ಫೆ.11 : ನಗರದಲ್ಲಿ ಹೆಚ್ಚುತ್ತಿರುವ ವಾಹನಗಳು, ಸಾರಿಗೆ ದಟ್ಟಣೆ, ವಾಹನ ನಿಲುಗಡೆ ಸಮಸ್ಯೆಗಳ ಪರಿಹಾರಕ್ಕೆಂದು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರವು “ನೂತನ ಪಾರ್ಕಿಂಕ್ ನೀತಿ -2020 ಅನ್ನು ರೂಪಿಸಿ ಅಂಗೀಕರಿಸಿದೆ. ವಾಹನ ನಿಲುಗಡೆ ವ್ಯವಸ್ಥೆಯನ್ನು ಖಾಸಗಿ ಸಾರ್ವಜನಿಕ ಪಾಲುದಾರಿಕೆ (PPP) ಮಾದರಿಯಲ್ಲಿ ಜಾರಿಗೊಳಿಸುವ ಕ್ರಮ ಖಾಸಗಿ ಲೂಟಿಗೆ ಎಡೆಮಾಡಿಕೊಡಲಿದೆ ಎಂದು ಬೆಂಗಳೂರು ಜನತೆ ಈ ನೀತಿಯನ್ನು ವಿರೋಧಿಸಿದ್ದಾರೆ.
ಈ ಹಿಂದೆ ಇದೇ ತರಹದ ನೀತಿಯನ್ನು ಬಿಜೆಪಿ ಶಾಸಕರು, ಕಾರ್ಪೋರೇಟ್ ಗಳು ವಿರೋಧಿಸಿ ಹೋರಾಟವನ್ನು ನಡೆಸಿದ್ದರು. ಇದೀಗ ಅದೇ ನೀತಿಯನ್ನು ರೂಪಿಸಿ ಜಾರಿಗೊಳಿಸಲು ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಮುಂದಾಗಿವೆ.
ಈ ಪಾರ್ಕಿಂಗ್ ನೀತಿಯಲ್ಲಿ ತಮ್ಮ ಮನೆ ಬಳಿ ತಮ್ಮ ವಾಹನಗಳ ನಿಲುಗಡೆಗೂ ಪರವಾನಗಿ ಪಡೆಯಬೇಕೆಂಬ ಶರತ್ತನ್ನು ವಿಧಿಸಿಲಾಗಿದೆ. ಅದಕ್ಕೆ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ವಾಹನ ನಿಲುಗಡೆ ವ್ಯವಸ್ಥೆಯನ್ನು ಖಾಸಗಿ ಸಾರ್ವಜನಿಕ ಪಾಲುದಾರಿಕೆ (PPP) ಮಾದರಿಯಲ್ಲಿ ಜಾರಿಗೊಳಿಸುವ ಕ್ರಮ ಖಾಸಗಿ ಲೂಟಿಗೆ ಎಡೆಮಾಡಿಕೊಡದಂತೆ ಎಚ್ಚರವಹಿಸಬೇಕಿದೆ. ಮಹಾನಗರವನ್ನು ನೂರಾರು ವಲಯವಾಗಿ ವಿಂಗಡಿಸಿ ಪಾರ್ಕಿಂಕ್ ನಿರ್ವಹಣೆಗೆ ಯೋಜಿಸುವುದಾಗಿ ನೀತಿ ಪ್ರಕಟಿಸಿದೆ. ಇದು ಕೇವಲ ಅಧಿಕಾರಿಗಳ ನಿರ್ವಹಣೆಯಾಗಿದೆ. ಜನತೆಯ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಬೇಕಿದೆ. ಕಡಿಮೆ ಆದಾಯದ ಗುಂಪಿನ ಮನೆಗಳ ಬಳಿ ವಾಹನ ನಿಲುಗಡೆಗೆ ಶುಲ್ಕ ವಿಧಿಸಬಾರದೆಂದು ಒತ್ತಾಸಬೇಕಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್ ಉಮೇಶ್ ಆಗ್ರಹಿಸಿದ್ದಾರೆ.
ಜನತೆಯ ಮೇಲೆ ಹೊರೆ ಹಾಗೂ ಮಧ್ಯಮ ಹೊರಿಸಲು ಮುಂದಾಗಿರುವ ಬಿಬಿಎಂಪಿಯ ಆಡಳಿತ ಮತ್ತು ಬಿಜೆಪಿ ರಾಜ್ಯ ಸರ್ಕಾರವು ಕಾನೂನು ರೀತಿಯಲ್ಲಿ 2020 ಸೆಪ್ಟೆಂಬರ್ ನಲ್ಲಿ ನಡೆಸಬೇಕಿದ್ದ ಬಿಬಿಎಂಪಿ ಚುನಾವಣೆ ನಡೆಸದೆ, ಮುಂದೂಡುತ್ತಾ ಬಂದಿದೆ. ಬಿಬಿಎಂಪಿ ಗೆ ಪ್ರತ್ಯೇಕ ಕಾಯ್ದೆ ಅಂಗೀಕರಿಸಿ ಜಾರಿಗೊಳಿಸಿದೆ, ಮುಂಬರುವ ಚುನಾವಣೆ ಮೇಲೆ ಕಣ್ಣಿರಿಸಿ ಸ್ವತಂತ್ರ್ಯೋತ್ಸವದ 75ನೇ ವರ್ಷಾಚರಣೆ ವೇಳೆಗೆ ಬೆಂಗಳೂರನ್ನು ಬದಲಾಯಿಸುವ ಹೆಸರಲ್ಲಿ ಬೆಂಗಳೂರು ಮುಷನ್ 2022” ಅನ್ನು ಪ್ರಕಟಿಸಿದೆ ಎಂದು ಸಿವಿಕ್ ಸಂಸ್ಥೆಯ ಮುಖ್ಯಸ್ಥರಾದ ಕಾತ್ಯಾಯಿನಿ ಚಾಮರಾಜ್ ಈ ಪಾರ್ಕಿಂಕ್ ನೀತಿಯನ್ನು ಖಂಡಿಸಿದ್ದಾರೆ.