ವಿದ್ಯುತ್ ಇಲಾಖೆಯಿಂದ ಇಂಟರ್ನೆಟ್ ವ್ಯತ್ಯಯ; ಜನರ ಪರೆದಾಟ

ಹೈದರಾಬಾದ್: ನಗರದಲ್ಲಿ ಇಂಟರ್ನೆಟ್ ವ್ಯತ್ಯಯ ಉಂಟಾಗಿದೆ. ಅದಕ್ಕೆ ಕಾರಣ ಅಲ್ಲಿನ ವಿದ್ಯುತ್ ಇಲಾಖೆ. ಇಂಟರ್ನೆಟ್ ಸೌಲಭ್ಯ ನೀಡಲು ವಿದ್ಯುತ್ ಕಂಬಗಳ ಮೇಲೆ ಓವರ್​ಹೆಡ್ ಕೇಬಲ್‌ಗಳನ್ನು ಹಾಕುವುದು ಕಾಮನ್.

ಅಂಥಾ ಅಪಾಯಕಾರಿ ವೈಯರ್​ಗಳನ್ನು ತೆಗೆದುಹಾಕುವಂತೆ ತೆಲಂಗಾಣದ ಉಪ ಮುಖ್ಯಮಂತ್ರಿ ಮತ್ತು ಇಂಧನ ಸಚಿವ ಭಟ್ಟಿ ವಿಕ್ರಮಾರ್ಕ ಮಲ್ಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಲಾಖೆ

ತೆಲಂಗಾಣದ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು ಆದೇಶ ನೀಡುತ್ತಿದ್ದಂತೆಯೇ ಇಂಧನ ಇಲಾಖೆ ಕಾರ್ಯಪ್ರವೃತ್ತವಾಗಿದೆ. ತೆಲಂಗಾಣದಾದ್ಯಂತ ವಿದ್ಯುತ್ ತಂತಿಗಳ ಮೇಲೆ ನೇತಾಡುತ್ತಿರುವ ಓವರ್​ಹೆಡ್ ಕೇಬಲ್‌ಗಳನ್ನು ತೆಗೆದು ಹಾಕಲಾಗುತ್ತಿದೆ. ಇದರಿಂದ ಹೈದರಾಬಾದ್​​ನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವ-ವಿರೋಧಿ 3 ಮಸೂದೆಗಳಿಗೆ ಸಿಪಿಐ(ಎಂ) ಪಕ್ಷ  ಪೊಲಿಟ್ ಬ್ಯುರೊ ಖಂಡಿನೆ

ಯಾಕೆ ಈ ಕ್ರಮ?

ಹೈದರಾಬಾದ್‌ನಲ್ಲಿ ಜನ್ಮಾಷ್ಟಮಿ ಮತ್ತು ಗಣಪತಿ ಆಚರಣೆಯ ಸಂದರ್ಭದಲ್ಲಿ ಭಕ್ತರು ವಿದ್ಯುತ್ ಸ್ಪರ್ಶಿಸಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದರು. ಆದ್ದರಿಂದ ತಕ್ಷಣವೇ ಕಾರ್ಯಪ್ರವೃತ್ತರಾದ ಡಿಸಿಎಂ, ಇಂಧನ ಸಚಿವ ಭಟ್ಟಿ ವಿಕ್ರಮಾರ್ಕ ಮಲ್ಲು ಓವರ್​ಹೆಡ್ ಕೇಬಲ್‌ಗಳನ್ನು ತೆಗೆದು ಹಾಕಲು ಸೂಚಿಸಿದ್ದರು.
ಕಳೆದ ವರ್ಷ ಕೇಬಲ್ ಆಪರೇಟರ್‌ಗಳಿಗೆ ಪದೇ ಪದೇ ಸೂಚನೆ ನೀಡಿದ್ದರೂ, ಕೇಬಲ್‌ಗಳ ಸಂಖ್ಯೆ ಹೆಚ್ಚಾಗಿ, ಜನಸಾಮಾನ್ಯರಿಗೆ ಸಮಸ್ಯೆ ಆಗುತ್ತಿದ್ದರೂ ಕೂಡಾ ಯಾರೂ ಎಚ್ಚೆತ್ತಿರಲಿಲ್ಲ. ಇದೇ ಕಾರಣಕ್ಕೆ ಉಪಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಬಲ್ ಆಪರೇಟರ್‌ಗಳಿಗೆ ಕ್ರಮ ಕೈಗೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆತ್ತು. ಆದರೆ ಅವರು ಕ್ಯಾರೆ ಎಂದಿರಲಿಲ್ಲ.

ಭಾನುವಾರ ಹೈದರಾಬಾದ್‌ನ ರಾಮಂತಪುರ ಎಂಬಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಂದರ್ಭದಲ್ಲಿ ರಥವೊಂದು ಹೈಟೆನ್ಷನ್ ವಿದ್ಯುತ್ ತಂತಿಗಳಿಗೆ ತಗುಲಿ ಐದು ಜನರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದರು.

ಯಾವಾಗ ಐವರು ಮೃತಪಟ್ಟರೋ ಎಚ್ಚೆತ್ತ ವಿಕ್ರಮಾರ್ಕ, ‘ಇನ್ಮುಂದೆ ಯಾವುದೇ ಕಾರಣಕ್ಕೂ ಇಂಥಾ ನಿರ್ಲಕ್ಷ್ಯಗಳನ್ನು ಸಹಿಸುವುದಿಲ್ಲ. ಎಲ್ಲಾ ಅಪಾಯಕಾರಿ ಕೇಬಲ್ ತಂತಿಗಳನ್ನು ತಕ್ಷಣವೇ ತೆಗೆದುಹಾಕಬೇಕು’ ಎಂದು ಆದೇಶ ನೀಡಿದ್ದರು.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ನ ವಿದ್ಯುತ್ ಸಿಬ್ಬಂದಿ ಇರೋ ಬರೋ ಕೇಬಲ್‌ಗಳನ್ನು ಕತ್ತರಿಸಿದ ಹಾಕಿದ್ದಾರೆ. ಇದರಿಂದಾಗಿ ಸೋಮವಾರ ಬೆಳಿಗ್ಗೆಯಿಂದ ಇಂಟರ್ನೆಟ್ ವ್ಯತ್ಯಯ ಉಂಟಾಗಿದೆ. ಫೈಬರ್-ಟು-ಹೋಮ್ ಇಂಟರ್ನೆಟ್ ಸಂಪರ್ಕ ಕಡಿತವಾಗಿದ್ದು, ಅನೇಕ ಕಚೇರಿಗಳು ಹಾಗೂ ವರ್ಕ್​ ಫ್ರಂ ಹೋಮ್ ಕೆಲಸ ಮಾಡುವವರ ಮೇಲೆ ಪರಿಣಾಮ ಬೀರಿದೆ.

ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿ ಲಿಮಿಟೆಡ್ ಮನಸ್ಸೋ ಇಚ್ಛೆ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಕತ್ತರಿಸಿರುವುದರಿಂದ ಹೋಮ್ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ತೊಡಕಾಗಿದೆ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಹೇಳಿದೆ.

‘ಇಂಟರ್ನೆಟ್ ಕೇಬಲ್‌ಗಳಲ್ಲಿ ವಿದ್ಯುತ್ ಪ್ರವಹಿಸುವುದಿಲ್ಲ. ವಿದ್ಯುತ್​ಗೂ ಇಂಟರ್ನೆಟ್ ಕೇಬಲ್​ಗಳಿಗೂ ಯಾವುದೇ ನಂಟಿಲ್ಲ’ ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮಹಾನಿರ್ದೇಶಕ ಎಸ್‌ಪಿ ಕೊಚ್ಚರ್ ಹೇಳಿದ್ದಾರೆ.

ಈಗ ಎಲ್ಲೆಲ್ಲಿ ಇಂಟರ್ನೆಟ್ ಸೌಲಭ್ಯ ಕಡಿತವಾಗಿದೆಯೋ ಅಲ್ಲೆಲ್ಲಾ ಸಮಸ್ಯೆ ಬಗೆಹರಿಸೋ ಕೆಲಸ ನಡೆಯುತ್ತಿದೆ ಎಂದು COAI ಹೇಳಿದೆ.

ಇದನ್ನೂ ನೋಡಿ: ‘ಎಡಿಟೆಡ್ ವಿಡಿಯೋ’ ಬಗ್ಗೆ ಘನಘೋರ ಚರ್ಚೆ ನಾಚಿಗೆಗೇಡು‌ | ‘ಹರೀಶ್ ಪೂಂಜಾರನ್ನು ಅಮಾನತು ಮಾಡಿ’ – ನವೀನ್ ಸೂರಿಂಜೆ

Donate Janashakthi Media

Leave a Reply

Your email address will not be published. Required fields are marked *