ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ಶಿಫಾರಸು

ನವದೆಹಲಿ: ‘ಕೋವಿಶೀಲ್ಡ್‌’  ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಕಾಲಾವಧಿಯನ್ನು ಹೆಚ್ಚಿಸಬೇಕೆಂದು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್‌ಟಿಎಜಿಐ) ಶಿಫಾರಸು ಮಾಡಿದೆ.

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ‌ ಏರುತ್ತಿದೆ. ಜತಗೆ ಕೋವಿಡ್ ಲಸಿಕೆಗಳಿಗೆ ಬೇಡಿಕೆಐೂ ಹೆಚ್ಚಾಗುತ್ತಿವೆ. ಈಗಾಗಲೇ ದೇಶದ ಎಲ್ಲೆಡೆ ಲಸಿಕೆಗಳಿಗೆ ಕೊರತೆ ಎದುರಾಗಿದೆ.

ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!

ಇದರ ಹಿನ್ನೆಲೆಯಲ್ಲಿ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡವರು 12 ರಿಂದ 16 ವಾರಗಳಲ್ಲಿ ಎರಡನೇ ಡೋಸ್‌ ಪಡೆಯಲು ಸರ್ಕಾರದ ಎನ್‌ಟಿಎಜಿಐ ಸಮಿತಿಯು ಶಿಫಾರಸು ಮಾಡಿದೆ. ಕೋವಿಶೀಲ್ಡ್‌ ಲಸಿಕೆಯ ಡೋಸ್‌ಗಳ ನಡುವೆ ಅಂತರ ಹೆಚ್ಚಿಸಲು ಅಭಿಪ್ರಾಯ ಪಟ್ಟಿದ್ದು, ಭಾರತ್‌ ಬಯೋಟೆಕ್‌ನ ‘ಕೋವ್ಯಾಕ್ಸಿನ್‌’ ಲಸಿಕೆಗೆ ಪ್ರಸ್ತುತ ನಿಗದಿ ಪಡಿಸಲಾಗಿರುವ ಅವಧಿಯ ಅಂತರದಲ್ಲಿ ಯಾವುದೇ ಬದಲಾವಣೆಯಿಲ್ಲ.

ಪ್ರಸ್ತುತ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವೆ ನಾಲ್ಕರಿಂದ ಎಂಟು ವಾರಗಳ ಅಂತರ ನೀಡಲಾಗುತ್ತಿದೆ.

ಕೋವಿಡ್‌-19 ಸೋಂಕು ದೃಢಪಟ್ಟವರು ಮುಂದಿನ ಆರು ತಿಂಗಳವರೆಗೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವುದನ್ನು ಮುಂದೂಡುವಂತೆ ಸಮಿತಿಯು ಶಿಫಾರಸು ಮಾಡಿದೆ.

ಇದನ್ನು ಓದಿ: ಲಸಿಕೆ ಲಸಿಕೆ ಲಸಿಕೆಗಾಗಿ ಶುರುವಾಗಿದೆ ಹಾಹಾಕಾರ, ಎರಡನೇ ಡೋಸ್‌ ಪಡೆಯಲು ಪರದಾಟ

ಗರ್ಭಿಣಿಯರಿಗೆ ಕೋವಿಡ್‌–19 ಲಸಿಕೆ ಆಯ್ಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ಗರ್ಭವತಿ ಮಗುವಿಗೆ ಜನ್ಮ ನೀಡಿದ ಬಳಿಕ ಯಾವುದೇ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ ಎಂದು ಸಮಿತಿಯು ಶಿಫಾರಸಿನಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.

ಈ ಶಿಫಾರಸುಗಳನ್ನು ಕಾರ್ಯರೂಪಗೊಳಿಸುವ ಮೊದಲು ಮೊದಲು ಅದರ ಅನುಮೋದನೆಗಾಗಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಎನ್‌ಇಜಿವಿಎಗೆ ರವಾನಿಸಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಪ್ರಧಾನ ಮಂತ್ರಿಗಳಿಗೆ ಮತ್ತೊಮ್ಮೆ 12 ಪ್ರತಿಪಕ್ಷಗಳ ಮುಖಂಡರ ಜಂಟಿ ಪತ್ರ

ಮೂರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಅಂತರವನ್ನು ವಿಸ್ತರಿಸಲಾಗಿದೆ; ಮಾರ್ಚ್‌ ತಿಂಗಳಲ್ಲಿ ಸಹ ಎರಡು ಡೋಸ್‌ ಪಡೆಯಲು ಇದ್ದ 28 ದಿನಗಳಿಂದ ಆರು-ಎಂಟು ವಾರಗಳಿಗೆ ಹೆಚ್ಚಿಸಲು ತಿಳಿಸಲಾಗಿತ್ತು.

ಆ ಸಮಯದಲ್ಲಿ ಕೇಂದ್ರವು ಕೋವಿಶೀಲ್ಡ್ ನ ಎರಡನೇ ಡೋಸ್‌ ಪಡೆಯಲು ಆರು-ಎಂಟು ವಾರಗಳು ಸಾಕಾಗುತ್ತವೆ. ಅದಕ್ಕಿಂತ ಹೆಚ್ಚಾಗಿ ಮಾಡಬಾರದು ಎಂದು ತಿಳಿಸಿತ್ತು.

Donate Janashakthi Media

Leave a Reply

Your email address will not be published. Required fields are marked *