ಕಲಬುರಗಿ | ಪ್ರತಿ ವಿದ್ಯಾರ್ಥಿಗೂ ಶಿಸ್ತು ಕಲಿಸುವ ಸೇತುವೆ ಎನ್ಎಸ್ಎಸ್ : ಎಚ್.ಟಿ.ಪೋತೆ

ಕಲಬುರಗಿ: ಪ್ರತಿ ವಿದ್ಯಾರ್ಥಿಗೂ ಶಿಸ್ತು ಕಲಿಸುವ ಸೇತುವೆ’ ರಾಷ್ಟ್ರೀಯ ಸೇವಾ ಯೋಜನೆ ಎಂದು ಕನ್ನಡ ವಿಭಾಗದ ನಿರ್ದೇಶಕ ಎಚ್.ಟಿ.ಪೋತೆ ಹೇಳಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ್ ಮಹಾವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ : ಮೈಸೂರು | ಜಂಟಿ ಅಧಿವೇಶನ ಕಡ್ಡಾಯ ಕರೆಯಲು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾರ್ಯಕ್ರಮ ಸಂಯೋಜಕ ಎಚ್.ಎಸ್ ಜಂಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಅತ್ಯತ್ತಮ ನಾಗರಿಕರಾಗಿ ರಾಷ್ಟ್ರ ನಿರ್ಮಾಣ, ರಾಷ್ಟ್ರೀಯ ಸೇವಾ ಯೋಜನೆ ಒಂದು ಉದಾತ್ತ, ಮೌಲ್ಯಾಧಾರಿತ ಯುವ ಜನತೆಯ ಯೋಜನೆ.  ಗ್ರಾಮೀಣ ಅಭಿವೃದ್ಧಿಯಲ್ಲಿ ನೇರವಾಗಿ ಪಾಲ್ಗೊಳ್ಳಬೇಕು ಎಂಬ ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಮೂಡಿ ಬಂದಿದೆ’ ಎಂದು ಹೇಳಿದರು.

ಕುಲಸಚಿವ ಪ್ರೊ.ರಮೇಶ ಲಂಡನಕರ, ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಸುಳ್ಳದ, ಪ್ರಕಾಶ ಕೊಬಾಳಕರ, ವಿದ್ಯಾಸಾಗರ, ಅವನಾಶ, ಅಂಬರೀಶ್ ರೆಡ್ಡಿ ಸೇರಿದಂತೆ ವಿವಿಧ ಕಾಲೇಜುಗಳ ಶಿಬಿರಾರ್ಥಿಗಳು ಇದ್ದರು.

ಇದನ್ನೂ ನೋಡಿ : ಸಮುದಾಯ -50 | ಬಾದಲ್ ಸರ್ಕಾರ್ – ತೃತೀಯ ರಂಗಭೂಮಿ ಪರಿಕಲ್ಪನೆ ಮತ್ತು ಪ್ರಭಾವ Janashakthi Media

Donate Janashakthi Media

Leave a Reply

Your email address will not be published. Required fields are marked *