ನವದೆಹಲಿ: ಹನುಮಾನ್ ಚಾಲೀಸಾ ವಿವಾದದ ನಡುವೆಯೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಹಿರಿಯ ನಾಯಕಿ ಫಹ್ಮಿದಾ ಹಸನ್ ಖಾನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಎಲ್ಲ ಧರ್ಮಗಳ ಗ್ರಂಥಗಳನ್ನು ಪಠಿಸಲು ಅನುಮತಿ ನೋಡಬೇಕೆಂದು ಕೋರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದ ಹೊರಗೆ ಪ್ರತಿ ಧರ್ಮದ ಪ್ರಾರ್ಥನೆಗಳನ್ನು ಪಠಿಸಲು ನಾನು ಗೃಹ ಸಚಿವ ಅಮಿತ್ ಶಾ ಅವರಿಗೆ ಅನುಮತಿ ಕೇಳಿದ್ದೇನೆ. ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದು, ಜೈನ ಧರ್ಮ ಸೇರಿದಂತೆ ಅನ್ಯ ಧರ್ಮಗಳು ದೇಶದ ಪ್ರಯೋಜನಕ್ಕಾಗಿ ಇರುವುದಾದರೆ, ನಾನು ಆ ಧರ್ಮಗಳ ನಿಯಮಗಳನ್ನು ಪಾಲಿಸಲು ಇಚ್ಛಿಸುತ್ತೇನೆ ಎಂದು ಎನ್‌ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಹೇಳಿದ್ದಾರೆ.
ಇದನ್ನು ಓದಿ: ಹನುಮಾನ್ ಚಾಲೀಸ ಪಠಿಸುವ ವಿವಾದ: ಸಂಸದೆ, ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ
ಗೌರವಾನ್ವಿತ ನರೇಂದ್ರ ಮೋದಿ ಜೀ ಅವರ ನಿವಾಸದ ಹೊರಗೆ ನಮಾಜ್, ಹನುಮಾನ್ ಚಾಲೀಸಾ, ನವಕರ್ ಮಂತ್ರ, ಗುರು ಗ್ರಂಥ ಮತ್ತು ನೋವಿನೋವನ್ನು ಓದಲು ನನಗೆ ಅವಕಾಶ ನೀಡುವಂತೆ ಎನ್‌ಸಿಪಿ ಪಕ್ಷದ ಮುಂಬೈ ಉತ್ತರ ಜಿಲ್ಲಾ ಕಾರ್ಯಾಧ್ಯಕ್ಷೆ ಫಹ್ಮಿದಾ ಹಸನ್ ಖಾನ್ ಕಾಂದಿವಲಿ ಅವರು ಮಹಾರಾಷ್ಟ್ರದಿಂದ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಇದನ್ನು ಓದಿ: ಬಾಟಲ್, ಆಯುಧಗಳನ್ನು ಮನೆಯಲ್ಲಿಟ್ಟುಕೊಳ್ಳಿ: ಸಾಕ್ಷಿ ಮಹಾರಾಜ್
ಇತ್ತೀಚೆಗೆ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದರು. ಸದ್ಯ ಇಬ್ಬರೂ ನಾಯಕರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.