ನೌಕರರ ಕುಟುಂಬಕ್ಕೂ ನಿರ್ಬಂಧ ಸರಿಯಲ್ಲ: ಬಂಡಾಯ ಸಾಹಿತ್ಯ ಸಂಘಟನೆ

  • ನಿರ್ಬಂಧಗಳ ಹೆಸರಿನಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಬಾರದು: ಬರಗೂರು ರಾಮಚಂದ್ರಪ್ಪ

 ಬೆಂಗಳೂರು: ‘ಸೇವಾ ನಿಯಮದಲ್ಲಿ ಸರ್ಕಾರಿ ನೌಕರರಿಗೆ ಇರುವ ನಿರ್ಬಂಧಗಳನ್ನು ಅವರ ಕುಟುಂಬ ಸದಸ್ಯರಿಗೂ ವಿಸ್ತರಿಸುವ ಪ್ರಸ್ತಾಪ ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಬಂಡಾಯ ಸಾಹಿತ್ಯ ಸಂಘಟನೆ ಪ್ರತಿಪಾದಿಸಿದೆ.

ಸಂಘಟನೆ ಪರವಾಗಿ ಹೇಳಿಕೆ ನೀಡಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು, ‘ಕರ್ನಾಟಕ ನಾಗರಿಕ ಸೇವಾ ನಿಯಮ ಎಂದರೆ ಸರ್ಕಾರಿ ನೌಕರರ ಪಾಲಿಗೆ ಮಿನಿ ಸಂವಿಧಾನ ಇದ್ದಂತೆ. ಅವುಗಳಿಗೆ ತಿದ್ದುಪಡಿ ತರುವಾಗ ಮೂಲ ಸಂವಿಧಾನದ ಆಶಯಗಳನ್ನು ಮೀರಬಾರದು. ನಿರ್ಬಂಧಗಳ ಹೆಸರಿನಲ್ಲಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಬಾರದು’ ಎಂದಿದ್ದಾರೆ.

‘ಅಭಿನಯ ಮತ್ತು ಸಾಹಿತ್ಯಾಭಿವ್ಯಕ್ತಿಗೆ ಸರ್ಕಾರಿ ನೌಕರರು ಅನುಮತಿ ಪಡೆಯಬೇಕು ಎಂಬ ಕೆಲವು ನಿಯಮಗಳು ಹಿಂದೆಯೇ ಇದ್ದವು. ಲಾಭದಾಯಕ ವೃತ್ತಿಗೆ ನಿರ್ಬಂಧ ವಿಧಿಸುವುದು ಸರಿ. ಆದರೆ, ಸೃಜನಶೀಲ ಅಭಿವ್ಯಕ್ತಿಗೆ ಅನಪೇಕ್ಷಿತ ಅಡ್ಡಿ ತರುವುದು ಸರಿಯಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಅನಗತ್ಯ ನಿಯಮಗಳನ್ನು ತೆಗೆದು ಅಗತ್ಯವಾದವುಗಳನ್ನು ಸೇರಿಸಬೇಕೆ ಹೊರತು, ಇನ್ನಷ್ಟು ಅನಗತ್ಯ ನಿಯಮಗಳನ್ನೇ ಹೇರಬಾರದು ಎಂದು ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ಒತ್ತಾಯಿಸುತ್ತದೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *