ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಐದು ನಗರ ಪಾಲಿಕೆಗಳಿಗೆ ವಾರ್ಡ್ಗಳ ಮರು ವಿಂಗಡಣೆಯನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ : ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದೆಂದರೆ… ನಾಡದ್ರೋಹದ ಕೆಲಸವಲ್ಲವೇ?
ಅಂತಿಮ ಅಧಿಸೂಚನೆಯಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಕರಡು ಅಧಿಸೂಚನೆಯಲ್ಲಿ 111 ವಾರ್ಡ್ಗಳಿದ್ದವು. ಈ ಸಂಖ್ಯೆ 112ಕ್ಕೇರಿದೆ. ಇನ್ನುಳಿದ ನಾಲ್ಕು ನಗರ ಪಾಲಿಕೆಗಳ ವಾರ್ಡ್ ಸಂಖ್ಯೆಯಲ್ಲಿ ಬದಲಾವಣೆಯಾಗಿಲ್ಲ. ಐದು ನಗರ ಪಾಲಿಕೆಗಳಲ್ಲಿ ಒಟ್ಟಾರೆ 369 ವಾರ್ಡ್ಗಳಿವೆ. ಗ್ರೇಟರ್
ಸೆಪ್ಟೆಂಬರ್ 2 ರಂದು ಐದು ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿದ್ದವು. ಸೆಪ್ಟೆಂಬರ್ 30ರಂದು ವಾರ್ಡ್ಗಳ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ನವೆಂಬರ್ 1ಕ್ಕೆ ಅಂತಿಮ ಅಧಿಸೂಚನೆಯಾಗಬೇಕಿತ್ತು. ಬಿಬಿಎಂಪಿ ಇರುವಾಗ ಹಲವು ಬಾರಿ ವಾರ್ಡ್ ಗಡಿ ಪುನಾರಚಿಸುವ ಪ್ರಯತ್ನಗಳಾಗಿದ್ದವು. 198 ವಾರ್ಡ್ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ಮತ್ತೆ 225ಕ್ಕೆ ಇಳಿಸಲಾಗಿತ್ತು. ಜಿಬಿಎ ಆದ ಬಳಿಕ ಐದು ಪಾಲಿಕೆಗಳನ್ನು ರಚಿಸಲಾಗಿತ್ತು. ಸುಪ್ರೀಂ ಕೋರ್ಟ್ನಲ್ಲಿ ಹೆಚ್ಚಿನ ಮನವಿ ಕೋರಿದ್ದರೂ ಫಲಿಸಲಿಲ್ಲ. 15 ದಿನದಲ್ಲಿ ವಾರ್ಡ್ಗಳನ್ನು ಅಂತಿಮಗೊಳಿಸಿ ಎಂದು ಸುಪ್ರೀಂ ಕೋರ್ಟ್ ನ.4ರಂದು ಸೂಚಿಸಿತ್ತು. ಅದರಂತೆ, ವಾರ್ಡ್ಗಳ ಅಂತಿಮ ಅಧಿಸೂಚನೆ ಹೊರಬಿದ್ದಿದೆ.
ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅಧ್ಯಕ್ಷತೆಯಲ್ಲಿ ವಾರ್ಡ್ ಪುನರ್ರಚನಾ ಸಮಿತಿಯನ್ನು ರಚಿಸಲಾಯಿತು. 2011ರ ಜನಗಣತಿ ಮತ್ತು ಇತ್ತೀಚಿನ ಜನಸಂಖ್ಯೆಯನ್ನು ಪರಿಗಣಿಸಿ ವಾರ್ಡ್ ಗಡಿಗಳನ್ನು ನಿರ್ಧರಿಸುವ ಜವಾಬ್ದಾರಿ ಈ ಸಮಿತಿಯದ್ದಾಗಿತ್ತು. 368 ವಾರ್ಡ್ಗಳನ್ನು ಈ ಸಮಿತಿ ಶಿಫಾರಸು ಮಾಡಿತ್ತು. ಸರ್ಕಾರವು ಅಂತಿಮ ಅಧಿಸೂಚನೆಯಲ್ಲಿ ಮತ್ತೊಂದು ವಾರ್ಡ್ ಅನ್ನು ಸೇರಿಸಿದೆ.
ಅಂಕಿ ಅಂಶ (ನಗರ ಪಾಲಿಕೆ;ವಾರ್ಡ್ಗಳು)
ಬೆಂಗಳೂರು ಕೇಂದ್ರ;63
ಬೆಂಗಳೂರು ದಕ್ಷಿಣ;72
ಬೆಂಗಳೂರು ಉತ್ತರ;72
ಬೆಂಗಳೂರು ಪಶ್ಚಿಮ;112
ಬೆಂಗಳೂರು ಪೂರ್ವ;50
ಇದನ್ನೂ ನೋಡಿ : ಸಂಪತ್ತಿಗೆ ಸವಾಲ್ ನಾಟಕ ‘ಸಿನಿಮಾ’ ಆಗಿದ್ದು ಹೇಗೆ?Janashakthi Media
