ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಅವರು ಕೇಳುತ್ತಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಆಹಾರ ಸಂಸ್ಕೃತಿಯ ವಿಷಯವಷ್ಟೇ ಅಲ್ಲ. ಬಹುತ್ವದ ಭಾರತದಲ್ಲಿ ಎಲ್ಲರಿಗೂ ಹಕ್ಕಿದೆ ಎಂದು ಲೇಖಕ ಮತ್ತು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಬಾಡೂಟದ ಪರ ಧ್ವನಿ ಎತ್ತಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ-1ರಲ್ಲಿ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಗೋಷ್ಠಿ-1 ರಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ ವಿಷಯದ ಬಗ್ಗೆ ಮಾತನಾಡಬೇಕಿದ್ದ ಅಕ್ಷತಾ ಹುಂಚದಕಟ್ಟೆ ವಿಷಯಾಂತರ ಮಾಡಿ, ಬಾಡೂಟದ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಕೆಲ ನಿಮಿಷಗಳ ನಂತರ ಮುಖ್ಯ ವಿಷಯವನ್ನು ಪುಸ್ತಾಪಿಸಿದರು.
ಇದನ್ನೂ ಓದಿ : ಕನ್ನಡ ಸಾಹಿತ್ಯ ಸಮ್ಮೇಳನ | ಸರ್ಕಾರಿ ಶಾಲೆಗಳನ್ನು ಬಲಪಡಿಸಿ – ಗೊ.ರು ಚನ್ನಬಸಪ್ಪ
ಕನ್ನಡದ ಹಿರಿಯ ಕವಿಗಳಾದ ಪಂಪ, ಪೊನ್ನ, ರನ್ನ ಅವರುಗಳು ರಾಜಾಶ್ರಯದಲ್ಲಿದ್ದರು ಕೂಡ ಜನ ಸಾಮಾನ್ಯರ ಮೇಲೆ ಗಮನಹರಿಸಿ ಅವರುಗಳಗೆ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿದರು. ಆದರ ಇಂದಿನ ಓದುಗರು ಹಾಗೂ ಪುಸ್ತಕಗಳಲ್ಲಿ 2 ವಿಧಗಳಿವೆ. ಓದುಗರಲ್ಲಿ ಇವತ್ತಿನ ಓದು ಹಾಗೂ ಅರಿವು ಹೆಚ್ಚಿಸುವ ಓದು, ಪುಸ್ತಕದಲ್ಲಿ ಇಂದಿನ ಆಶಯ ನೆರವೇರಿಸುವ ಪುಸ್ತಕ ಹಾಗೂ ಅರಿವು ಪುಜ್ಞೆಯನ್ನು ವಿಸ್ತರಿಸುವ ಪುಸ್ತಕ ಎಂಬುದಾಗಿ 2 ವಿಧಗಳಿವೆ.
ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು, ಪ್ರಕಾಶಕರು, ಲೇಖಕರು ಮಾಡುತ್ತ ಬರುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪತಿಯೊಬ್ಬ ಕನ್ನಡಿಗನು ಶ್ರಮಿಸಬೇಕು. ಜೊತೆಗೆ ಪುಸ್ತಕದ ಓದನ್ನು ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಬೇಕು ಎಂದರು.
ಇದನ್ನೂ ನೋಡಿ : ಕನ್ನಡ ಸಾಹಿತ್ಯ ಸಮ್ಮೇಳನ |ಮಂಡ್ಯದ ಪ್ರೀತಿಯ ನಾಟಿ ಕೋಳಿ ಸಾರುಮುದ್ದೆ ನೀಡಬೇಕು – ಎಂ.ಜಿ.ಹೆಗಡೆ Janashakthi Media