ಧರ್ಮಸ್ಥಳ: ಹದಿನಾಲ್ಕು ವರ್ಷಗಳ ಹಿಂದೆ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಕುಮಾರಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದಿದ್ದೂ, ಈ ಕೊಲೆ, ಅತ್ಯಾಚಾರ ಮಾಡಿದೋರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ದಶಕಗಳಿಂದ ಈ ಕೇಸ್ ಬಗ್ಗೆ ಹೋರಾಟ, ತನಿಖೆಗಳು ನಡೆಯುತ್ತಿವೆ. ಬೆಳ್ತಂಗಡಿ ಕಾನೂನು
ಇತ್ತೀಚೆಗೆ ಸಮೀರ್ ಎಂಡಿ ಎನ್ನುವವರು ಧೂತ ಯೂಟ್ಯೂಬ್ ಚಾನೆಲ್‌ನಲ್ಲಿ ʼಊರಿಗೆ ದೊಡ್ಡವರಾದವರು ಕೊಲೆ ಮಾಡಿದ್ದಾರಾ?ʼ ಎನ್ನುವ ಪ್ರಶ್ನೆಯಡಿ ಒಂದು ವಿಡಿಯೋ ಅಪ್‌ಲೋಡ್ ಮಾಡುತ್ತಾರೆ. ಈ ವಿಡಿಯೋ ಹನ್ನೆರಡು ದಿನಕ್ಕೆ 12 ಮಿಲಿಯನ್ ವೀಕ್ಷಣೆ ಮಾಡಿದೆ ಎಂದರೆ ಎಷ್ಟು ಸಂಚಲನ ಮೂಡಿಸಿರಬಹುದು ಎಂದು ಒಮ್ಮೆ ಲೆಕ್ಕ ಹಾಕಿ. ಈಗ ಈ ಬಗ್ಗೆ ʼಆ ದಿನಗಳುʼ ಖ್ಯಾತಿಯ ನಟ ಚೇತನ್ ಅಹಿಂಸ ಅವರು ಮಾತನಾಡಿದ್ದಾರೆ.
ಚೇತನ್ ಅಹಿಂಸ ಅವರು ಹೇಳಿದ್ದೇನು?
“12 ದಿನದ ಹಿಂದೆ ಧರ್ಮಸ್ಥಳದ ಸೌಜನ್ಯ ಕುರಿತು ಒಂದು ಒಳ್ಳೆಯ ವಿಡಿಯೋ ರಿಲೀಸ್ ಆಗಿದೆ. ನಾನು ಸೌಜನ್ಯ ಅವರ ತಾಯಿಯ ಜೊತೆ ಮಾತನಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲ ಪ್ರಕರಣಗಳು ಕನೆಕ್ಟ್‌ಆಗಿದೆ. ನನಗೆ ಸಿಕ್ಕ ಮಾಹಿತಿ ಪ್ರಕಾರ ಬೆಳ್ತಂಗಡಿಯಲ್ಲಿ 346 ಅಸಹಜ ಸಾವು ಆಗಿವೆ.
ಯಾರ ಮೇಲೆ ಆರೋಪ ಬಂದಿದೆಯೋ ಅವರಿಗೆ ಹಣಬಲ, ರಾಜಕೀಯ ಬಲ, ಧರ್ಮ ಬಲ, ಜಾತಿ ಬಲ, ತೋಳ್ಬಲವೂ ಇದೆ. ಇವರ ವಿರುದ್ಧ ಫೈಟ್ ಮಾಡಬೇಕಿದೆ. ಜನಶಕ್ತಿ, ಸಂವಿಧಾನ ಶಕ್ತಿ, ಕಾನೂನು ಶಕ್ತಿ ಮುಂದೆ ಯಾವುದೂ ಕೂಡ ನಡೆಯೋದಿಲ್ಲ” ಎಂದು ಚೇತನ್ ಅಹಿಂಸ ಅವರು ಹೇಳಿದ್ದಾರೆ.
ಇದನ್ನೂ ಓದಿ: ಗಾಂಧೀನಗರ| ನರಬಲಿ ಪ್ರಕರಣ: 5 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ
“Article 19 ಪ್ರಕಾರ ನಮಗೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಬಳ್ಳಾರಿ ಪೊಲೀಸರು ಯುಟ್ಯೂಬರ್ ಸಮೀರ್ ಅವರ ವಿರುದ್ಧ ಸ್ವಯಂ ದೂರು ದಾಖಲಿಸಿದ್ದರು. ಈ ಹಕ್ಕು ಕಳೆದುಕೊಂಡಾಗಲೇ ನಮಗೆ ಇದರ ಮಹತ್ವ ಗೊತ್ತಾಗುತ್ತದೆ. ಇನ್ನು ಹೈಕೋರ್ಟ್‌ಈ ದೂರು ರದ್ದು ಮಾಡಿರೋದು ಒಳ್ಳೆಯ ಬೆಳವಣಿಗೆ. ಪ್ರಭಾವಿಗಳಿಗೆ ಎಷ್ಟು ಬೆಂಬಲ ಸಿಗ್ತಿದೆ ಎಂದು ನಿಮಗೂ ಗೊತ್ತಿದೆ. ನಾವೆಲ್ಲರೂ ಸೇರಿ ಈ ಪ್ರಕರಣಕ್ಕೆ ನ್ಯಾಯ ಕೊಡಲು ಹೋರಾಡೋಣ, ಬೇಕಿದ್ದರೆ ಜೈಲಿಗೆ ಹೋಗೋಕೂ ರೆಡಿ” ಎಂದು ಚೇತನ್ ಅಹಿಂಸ ಅವರು ಹೇಳಿದ್ದಾರೆ.
ನ್ಯಾಯದ ಪರ ಕೆಲಸ ಮಾಡಿ
“ಸಿದ್ದರಾಮಯ್ಯನವರೇ, ಬಸವ ತತ್ವ ಅಂತೀರಾ, ಸಂವಿಧಾನ ಅಂತೀರಾ. ಆದರೆ ಆರ್ಟಿಕಲ್ 19 ಎತ್ತಿಹಿಡಿಯಿರಿ. ಇಂದು ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಇಲಾಖೆ ಸುಧಾರಣೆ ಆಗಬೇಕು, ನ್ಯಾಯದ ಪರ ಕೆಲಸ ಮಾಡಬೇಕು” ಎಂದು ಚೇತನ್ ಅಹಿಂಸ ಅವರು ಮನವಿ ಮಾಡಿದ್ದಾರೆ.
2012 ಅಕ್ಟೋಬರ್ 9ರಂದು ಸೌಜನ್ಯ ಅತ್ಯಾಚಾರ, ಕೊಲೆಯಾಗಿತ್ತು. ಸಮೀರ್ ಪರವಾಗಿ ಅನೇಕ ಯುಟ್ಯೂಬರ್‌ಗಳು ಮಾತನಾಡುತ್ತಿದ್ದು, ಈ ಕೇಸ್‌ಗೆ ನ್ಯಾಯ ಸಿಗಬೇಕು ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ.
ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್ ಅಧಿವೇಶನ