ರಾಯ್ಪುರ: ಅಚ್ಚರಿಯ ಪ್ರಕರಣವೊಂದು ಛತ್ತೀಸ್‌ಗಢದ ಸಕ್ತಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಅಧಿಕಾರಿ ಅಥವಾ ಕಂಪನಿ ಮಾತ್ರ ನಕಲಿ ಅಲ್ಲ, ಇಡೀ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವೇ ನಕಲಿ ಎಂಬುದು ಬಯಲಾಗಿದೆ. ಅಧಿಕಾರಿ
ನಕಲಿ ಎಸ್‌ಬಿಐ ಬ್ಯಾಂಕ್ ಶಾಖೆ ಛಪೋರಾ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿತ್ತು. ದುಷ್ಕರ್ಮಿಗಳು ತಮ್ಮ ವಂಚನೆಗೆ ಸಾಕಷ್ಟು ಯೋಜನೆ ಹಾಕಿಕೊಂಡು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು.
ಈ ಛಪೋರಾ ಪ್ರದೇಶವು ರಾಯ್ಪುರದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿದೆ. ಒಳ ಪ್ರದೇಶ ಎಂಬ ಕಾರಣಕ್ಕೆ ವಂಚಕರು ಇಲ್ಲಿ ಬ್ಯಾಂಕ್ ಶಾಖೆ ತೆರೆದು ವಂಚನೆಗಿಳಿದಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್ 6 ಶ್ರದ್ಧಾಂಜಲಿ ಸಭೆಯಲ್ಲಿ ಎರಡು ಯೆಚೂರಿ ಪುಸ್ತಕಗಳ ಬಿಡುಗಡೆ : ‘ಹೀಗಿದ್ದರು ಯೆಚೂರಿ…’, ‘ಅಚ್ಛೇ ದಿನ್’ ಗೆ ಸವಾಲು..’
ಸದ್ಯ ಈ ಸಂಬಂಧ ಶಕ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಗಾಗಿ ಪೊಲೀಸ್ ತಂಡ ಶೋಧ ನಡೆಸುತ್ತಿದೆ. ಮಾಹಿತಿ ಪ್ರಕಾರ, ಬ್ಯಾಂಕ್‌ನಲ್ಲಿ ಉದ್ಯೋಗಕ್ಕಾಗಿ ನಡೆದ ಎಲ್ಲಾ ವ್ಯವಹಾರಗಳು ಯುಪಿಐ ಮೂಲಕ ನಡೆಯುತ್ತಿವೆ. ಈಗ ಅದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಆರೋಪಿಗಳ ದೂರವಾಣಿ ಸಂಖ್ಯೆಗಳು ತಿಳಿದುಬಂದಿಲ್ಲ. ಅಷ್ಟೇ ಅಲ್ಲ ಆತ ನೀಡಿದ್ದ ವಿಳಾಸಗಳೆಲ್ಲವೂ ನಕಲಿ ಎನ್ನುವುದು ಬಹಿರಂಗವಾಗಿದೆ.
ವಿಷಯ ಬೆಳಕಿಗೆ ಬಂದ ನಂತರ ಇಡೀ ಪ್ರದೇಶದಲ್ಲಿ ಸಂಚಲನ ಉಂಟಾಯಿತು. ನಕಲಿ ಬ್ಯಾಂಕ್‌ನ ಮ್ಯಾನೇಜರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ತಲೆಮರೆಸಿಕೊಂಡಿರುವ ಮ್ಯಾನೇಜರ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ನೋಡಿ: RSS ಸುಳ್ಳುಗಳನ್ನು ಹೇಗೆ ಹರಡುತ್ತದೆ ಗೊತ್ತೆ? ಈ ವಿಡಿಯೋ ನೋಡಿ