ಸಮುದ್ರದಲ್ಲಿ ನಾಲ್ಕಲ್ಲ!, 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು: ವಿದ್ಯಾರ್ಥಿನಿ ಪಲ್ಲವಿ

ಕೋಲಾರ: ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚಿನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದೂ, ಬದುಕುಳಿದು ಬಂದಂತಹ ವಿದ್ಯಾರ್ಥಿನಿಯಾದ ಪಲ್ಲವಿ ಸಮುದ್ರದ ಅಲೆಗಳ ಹೊಡೆತಕ್ಕೆ ನಾವು ನಾಲ್ಕಲ್ಲ 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು ಎಂದು ಕಣ್ಣೆದುರಿಗೆ ನಡೆದ ನೈಜ ಘಟನೆ ವಿವರಿಸಿದ್ದಾಳೆ.

ದೊಡ್ಡ ದೊಡ್ಡ ಅಲೆಗಳಿಗೆ 15 ಜನರು ಸಮುದ್ರದ ಅಲೆಗಳ ಮಧ್ಯ ಸಿಲುಕಿಕೊಂಡಿದ್ದರು. ಈ ವೇಳೆ ನಾವು ನಾಲ್ವರು ಅಲ್ಲ ಸುಮಾರು 15 ಜನರು ಸಿಲುಕಿಕೊಂಡಿದ್ದೆವು. ಕೂಡಲೇ ಅಲ್ಲಿದ್ದ ಸ್ಥಳೀಯ ಲೈಫ್ ಗಾರ್ಡ್ಸ್ ಸಿಬ್ಬಂದಿ ಹಾಗೂ ಶಿಕ್ಷಕರು ಉಳಿದವರನ್ನು ಕಾಪಾಡಿದರು ಆದರೆ ನಾಲ್ವರು ಮಾತ್ರ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಪಲ್ಲವಿ ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ: ಮುರುಡೇಶ್ವರದಲ್ಲಿ ಮರಣ ಹೊಂದಿದ ನಾಲ್ವರು ವಿದ್ಯಾರ್ಥಿನಿಯರ ಕುಟುಂಬಕ್ಕೆ 50 ಲಕ್ಷ ಪರಿಹಾರ ಘೋಷಣೆ ಎಸ್ಎಫ್ಐ ಒತ್ತಾಯ

ವಿದ್ಯಾರ್ಥಿನಿಯರ ಮೃತ ದೇಹಗಳನ್ನು ಕಂಡ ಕೂಡಲೇ ಅವರ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿತು . ಅವರವರ ಊರಿನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಮೃತ ವಿದ್ಯಾರ್ಥಿನಿಯರ ಕುಟುಂಬಸ್ತರಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. 50 ಲಕ್ಷ ಪರಿಹಾರ ಹಾಗೂ ಕುಟುಬಂಸ್ಥರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ ನೀಡುವಂತೆ ಎಸ್‌ಎಫ್‌ಐ ಆಗ್ರಹಿಸಿದೆ.

ಇದನ್ನೂ ನೋಡಿ: ವಚನ ಭ್ರಷ್ಟ ಯುಪಿ ಸರ್ಕಾರದ ವಿರುದ್ಧ ಸಿಡಿದೆದ್ದ ನೋಯ್ಡಾ ರೈತರು : ಬೆತ್ತಲಾದ ಯೋಗಿ ಸರ್ಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *